ಸಾರಾಂಶ
ಹೊಸಕೋಟೆ: ಪಂಚಭೂತಗಳಲ್ಲಿ ನೀರು ಅಮೂಲ್ಯವಾದ ಸಂಪತ್ತಾಗಿದ್ದು, ಪ್ರಕೃತಿಯ ಜೀವನಾಡಿಯಾಗಿದೆ. ಮುಂದಿನ ಪೀಳಿಗೆಗೆ ಸ್ವಚ್ಛ ನೀರು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ದೊಡ್ಡಗಟ್ಟಿಗನಬ್ಬೆ ಗ್ರಾಪಂ ಅಧ್ಯಕ್ಷ ಸುರೇಶ್ ತಿಳಿಸಿದರು.
ಹೊಸಕೋಟೆ: ಪಂಚಭೂತಗಳಲ್ಲಿ ನೀರು ಅಮೂಲ್ಯವಾದ ಸಂಪತ್ತಾಗಿದ್ದು, ಪ್ರಕೃತಿಯ ಜೀವನಾಡಿಯಾಗಿದೆ. ಮುಂದಿನ ಪೀಳಿಗೆಗೆ ಸ್ವಚ್ಛ ನೀರು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ದೊಡ್ಡಗಟ್ಟಿಗನಬ್ಬೆ ಗ್ರಾಪಂ ಅಧ್ಯಕ್ಷ ಸುರೇಶ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ದೊಡ್ಡಗಟ್ಟಿಗನಬ್ಬೆ ಗ್ರಾಪಂ ಹಾಗೂ ಔಟ್ ರಿಚ್ ಸಂಸ್ಥೆ ಸಹಯೋಗದಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ನೀರುಗಂಟಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನೀರಿನ ಮಿತಬಳಕೆಯನ್ನು ರೂಢಿಸಿಕೊಳ್ಳಬೇಕು. ಮಹಾನಗರಗಳಲ್ಲಿ ಈಗಾಗಲೇ ನೀರಿನ ಹಾಹಾಕಾರ ಉಂಟಾಗಿದೆ. ನೀರಿನ ಮಹತ್ವ ಅರಿತು ಸಮರ್ಪಕ ನೀರು ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಔಟ್ ರಿಚ್ ಸಂಸ್ಥೆ ಮುಖ್ಯಸ್ಥ ತಿಮ್ಮರಾಯಪ್ಪ ಮಾತನಾಡಿ, ನೀರನ್ನು ಸಂರಕ್ಷಿಸಲು ಮುಖ್ಯವಾಗಿ ಮಳೆ ನೀರು ಸಂಗ್ರಹ ಪ್ರಮುಖ ಮಾರ್ಗ ಮಳೆ ನೀರು ಅತ್ಯಂತ ಶುದ್ಧವಾದ ನೀರಾಗಿದ್ದು, ಮಳೆ ಬರುವ ಸಂದರ್ಭದಲ್ಲಿ ನೀರನ್ನು ಶೇಖರಣೆ ಮಾಡಿಕೊಳ್ಳಬೇಕು. ಆ ನೀರನ್ನು ವರ್ಷ ವರ್ಷ ಪೂರ್ತಿ ಬಳಸಿಕೊಳ್ಳಬಹುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ನೀರಿನ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸಿರುವ ನೀರುಗಂಟಿಗಳನ್ನು ಸನ್ಮಾನಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣಿ, ಕಾರ್ಯದರ್ಶಿ ಚೌಡರೆಡ್ಡಿ, ಔಟ್ ರಿಚ್ ಸಂಸ್ಥೆಯ ಕೃಷ್ಣ ಮೂರ್ತಿ, ಚಂದ್ರಶೇಖರ್, ವಿಕಾಸ್, ಪ್ರಶಾಂತ್, ಪನ್ನಗ ಗೌಡ, ಯಲ್ಲಪ್ಪ ಹಾಜರಿದ್ದರು.
ಫೋಟೋ: 19 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಪಂ ಹಮ್ಮಿಕೊಂಡಿದ್ದ ನೀರಿನ ಸಂರಕ್ಷಣೆ ಕಾರ್ಯಾಗಾರ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ಸುರೇಶ್ ಚಾಲನೆ ನೀಡಿದರು.