ಪ್ರಕೃತಿಯ ಅದ್ಬುತ ಕೊಡುಗೆ ನೀರು

| Published : Mar 24 2025, 12:37 AM IST

ಸಾರಾಂಶ

ನೀರು ಜೀವನದ ಅತ್ಯಂತ ಮುಖ್ಯ ಆಧಾರ. ಪ್ರಕೃತಿ ನೀಡಿರುವು ಅತ್ಯದ್ಭುತವಾದ ಕೊಡುಗೆ ನೀರು. ನೀರನ್ನು ವಿನಾಕಾರಣದಿಂದ ವ್ಯರ್ಥ ಮಾಡಬಾರದು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ಎಸ್. ಮಹೇಶ್ ತಿಳಿಸಿದರು. ವಿಶ್ವಸಂಸ್ಥೆ ವರದಿಯಂತೆ ನೈರ್ಮಲ್ಯ ಮತ್ತು ಶುದ್ಧ ನೀರಿನ ಕೊರತೆಯಿಂದ ಉಂಟಾಗುವ ಕಾಯಿಲೆಗಳಿಂದ ಪ್ರತಿ ವರ್ಷ ೧೪ ಲಕ್ಷ ಜನರು ಮರಣ ಹೊಂದುತ್ತಿದ್ದಾರೆ. ಇಂದಿಗೂ ವಿಶ್ವದ ಸುಮಾರು ಶೇ. ೨೫ರಷ್ಟು ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ೨೦೫೦ರ ವೇಳೆಗೆ ಸುಮಾರು ಶೇ. ೫೫ರಷ್ಟು ನೀರಿನ ಮೇಲಿನ ಜಾಗತಿಕ ಬಯಕೆ ಹೆಚ್ಚಾಗಲಿದೆ. ನೀರನ್ನು ಮಿತವಾಗಿ ಬಳಸಿ ಸಂರಕ್ಷಿಸುವುದು ಎಲ್ಲರ ಕರ್ತವ್ಯ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ನೀರು ಜೀವನದ ಅತ್ಯಂತ ಮುಖ್ಯ ಆಧಾರ. ಪ್ರಕೃತಿ ನೀಡಿರುವು ಅತ್ಯದ್ಭುತವಾದ ಕೊಡುಗೆ ನೀರು. ನೀರನ್ನು ವಿನಾಕಾರಣದಿಂದ ವ್ಯರ್ಥ ಮಾಡಬಾರದು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ಎಸ್. ಮಹೇಶ್ ತಿಳಿಸಿದರು.

ಪಟ್ಟಣದ ವಿಶ್ವೇಶ್ವರಯ್ಯ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜಲದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಸಂಸ್ಥೆ ವರದಿಯಂತೆ ನೈರ್ಮಲ್ಯ ಮತ್ತು ಶುದ್ಧ ನೀರಿನ ಕೊರತೆಯಿಂದ ಉಂಟಾಗುವ ಕಾಯಿಲೆಗಳಿಂದ ಪ್ರತಿ ವರ್ಷ ೧೪ ಲಕ್ಷ ಜನರು ಮರಣ ಹೊಂದುತ್ತಿದ್ದಾರೆ. ಇಂದಿಗೂ ವಿಶ್ವದ ಸುಮಾರು ಶೇ. ೨೫ರಷ್ಟು ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ೨೦೫೦ರ ವೇಳೆಗೆ ಸುಮಾರು ಶೇ. ೫೫ರಷ್ಟು ನೀರಿನ ಮೇಲಿನ ಜಾಗತಿಕ ಬಯಕೆ ಹೆಚ್ಚಾಗಲಿದೆ. ನೀರನ್ನು ಮಿತವಾಗಿ ಬಳಸಿ ಸಂರಕ್ಷಿಸುವುದು ಎಲ್ಲರ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕಿ ಸಿ. ಎಸ್. ಪೂರ್ಣಿಮಾ ಅವರು ಮಾತನಾಡಿ, ನೀರನ್ನು ಸಂರಕ್ಷಿಸಲು ಸರ್ಕಾರ ಯಾವುದೇ ಯೋಜನೆಗಳನ್ನು ಕೈಗೊಂಡಾಗ, ಅವರಿಗೆ ಸ್ಪಂದಿಸಬೇಕು. ನೀರು ಕಲುಷಿತಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಚ್ಚಲುಮನೆಯಿಂದ ಹರಿಯುವ ನೀರನ್ನು ಕೃಷಿಗೆ ಬಳಸಿಕೊಂಡು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪಟ್ಟಣ ನಿವಾಸಿಗಳು ಅತಿ ಹೆಚ್ಚಾಗಿ ನೀರು ಪೋಲು ಮಾಡುತ್ತಿದ್ದಾರೆ. ನೀರನ್ನು ಮಿತವಾಗಿ ಬಳಸಿಕೊಂಡು ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರವೂ ಕೈಚೆಲ್ಲುವ ಸಾಧ್ಯತೆ ಎದುರಾಗಲಿದೆ ಎಂದರು.

ಸಮಾರಂಭದಲ್ಲಿ ವಿಶ್ವೇಶ್ವರಯ್ಯ ಕೈಗಾರಿಕೆ ಸಂಸ್ಥೆ ಪ್ರಾಂಶುಪಾಲ ಎಚ್. ವಿ. ನಾಗಭೂಷಣ, ವಕೀಲರಾದ ಆರ್‌. ಬಿ. ಸುರೇಶ್, ಬಿ. ಮಂಜೇಗೌಡ, ಎಚ್. ಪಿ. ಸೌಮ್ಯ, ಕೆ. ವೈ.ಶಾರದಾ, ಎಂ. ಮೋನಿಷ, ಮೋನಿಕಾ, ನಮಿತ, ಪಾವನಿ ಉಪಸ್ಥಿತರಿದ್ದರು.