ಸಾರಾಂಶ
ಎತ್ತಿನಹೊಳೆ ಪೈಪ್‌ಲೈನ್ ಹಾದುಹೋಗಿರುವ ತಾಲೂಕಿನ ಕುಂಬರಡಿ ಎಸ್ಟೇಟ್‌ನಲ್ಲಿ ಪೈಪ್ ಒಡೆದ ಪರಿಣಾಮ ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು, ಇದರಿಂದ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ಹಾಗೂ ಜಮೀನುಗಳಿಗೆ ನೀರು ನುಗ್ಗಿರುತ್ತದೆ. ಅಪಾರ ಪ್ರಮಾಣದ ನೀರು ಹರಿದಿರುವುದರಿಂದ ರಸ್ತೆಗಳು ಕೆರೆಯಂತಾಗಿರುತ್ತದೆ. ಪೈಪ್‌ಲೈನ್ ಮೂಲಕ ಹೆಬ್ಬನಹಳ್ಳಿಯವರೆಗೂ ನೀರನ್ನು ನಿರಂತರವಾಗಿ ಪಂಪ್ ಮಾಡುತ್ತಿರುವುದರಿಂದ ಅಲ್ಲಲ್ಲಿ ನೀರು ಲೀಕೆಜ್ ಆಗಲು ಕಾರಣವಾಗಿದೆ. ಕಳೆದ ವಾರವಷ್ಟೇ ಮೊದಲನೇ ಹಂತದ ಕಾಮಗಾರಿಗೆ ಸಿಎಂ ಹಾಗೂ ಡಿಸಿಎಂ ಚಾಲನೆ ನೀಡಿದ್ದರು. ಇದೀಗ ಉದ್ಘಾಟನೆಯಾದ ಮೊದಲನೇ ಹಂತದ ಕಾಮಗಾರಿಯ ಲೀಕೇಜ್ ಆಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಎತ್ತಿನಹೊಳೆ ಯೋಜನೆ ಕಾಮಗಾರಿಯ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ಘಟನೆ ತಾಲೂಕಿನ ಕುಂಬರಡಿ ಎಸ್ಟೇಟ್‌ನಲ್ಲಿ ಶನಿವಾರ ನಡೆದಿದೆ.ಎತ್ತಿನಹೊಳೆ ಪೈಪ್‌ಲೈನ್ ಹಾದುಹೋಗಿರುವ ತಾಲೂಕಿನ ಕುಂಬರಡಿ ಎಸ್ಟೇಟ್‌ನಲ್ಲಿ ಪೈಪ್ ಒಡೆದ ಪರಿಣಾಮ ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು, ಇದರಿಂದ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ಹಾಗೂ ಜಮೀನುಗಳಿಗೆ ನೀರು ನುಗ್ಗಿರುತ್ತದೆ. ಅಪಾರ ಪ್ರಮಾಣದ ನೀರು ಹರಿದಿರುವುದರಿಂದ ರಸ್ತೆಗಳು ಕೆರೆಯಂತಾಗಿರುತ್ತದೆ. ಕಳಪೆ ಕಾಮಗಾರಿಯಿಂದಲೇ ಪೈಪ್ ಒಡೆದಿದೆ ಅನ್ನೋ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದ್ದು ಸೂಕ್ತ ಪರಿಹಾರಕ್ಕೆ ಜಮೀನು ಮಾಲೀಕರು ಒತ್ತಾಯಿಸಿದ್ದಾರೆ. ಇದೇ ಜಮೀನಿನಲ್ಲಿ ಹದಿನೈದು ದಿನಗಳ ಹಿಂದೆಯಷ್ಟೇ ಪೈಪ್ ಒಡೆದು ನೀರು ನುಗ್ಗಿತ್ತು ಅದನ್ನು ಎತ್ತಿನಹೊಳೆ ಅಧಿಕಾರಿಗಳು ಸರಿಪಡಿಸಿದ್ದರು. ಇದೀಗ ಮತ್ತೊಂದು ಜಾಗದಲಿ ಪೈಪ್ ಒಡೆದಿದೆ.
ಪೈಪ್‌ಲೈನ್ ಮೂಲಕ ಹೆಬ್ಬನಹಳ್ಳಿಯವರೆಗೂ ನೀರನ್ನು ನಿರಂತರವಾಗಿ ಪಂಪ್ ಮಾಡುತ್ತಿರುವುದರಿಂದ ಅಲ್ಲಲ್ಲಿ ನೀರು ಲೀಕೆಜ್ ಆಗಲು ಕಾರಣವಾಗಿದೆ. ಕಳೆದ ವಾರವಷ್ಟೇ ಮೊದಲನೇ ಹಂತದ ಕಾಮಗಾರಿಗೆ ಸಿಎಂ ಹಾಗೂ ಡಿಸಿಎಂ ಚಾಲನೆ ನೀಡಿದ್ದರು. ಇದೀಗ ಉದ್ಘಾಟನೆಯಾದ ಮೊದಲನೇ ಹಂತದ ಕಾಮಗಾರಿಯ ಲೀಕೇಜ್ ಆಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.