ಸಾರಾಂಶ
ಮಳೆ ಅರ್ಭಟದಿಂದ ಜನರು ಮನೆಯಿಂದ ಹೊರಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ಸಂತೆಯಲ್ಲಿ ದಿನವಿಡೀ ಸುರಿದ ಮಳೆಗೆ ವ್ಯಾಪಾರಸ್ಥರು ಸಮಸ್ಯೆ ಅನುಭವಿಸುವಂತಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಬಿತ್ತನೆ ಹಾಗೂ ವ್ಯವಸಾಯ ಮಾಡಲು ಮಳೆ ಅಡ್ಡಿಯಾಗುತ್ತಿದೆ. ಕೆಲವು ರೈತರು ಸುರಿಯುವ ಮಳೆಯಲ್ಲಿಯೇ ಲೆಕ್ಕಿಸದೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಈ ಭಾಗದಲ್ಲಿ ಹೆಚ್ಚು ಬೆಳೆಯುವ ತಂಬಾಕು ಮುಸುಕಿನ ಜೋಳ, ರಾಗಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ಜಲಾವೃತವಾಗಿದ್ದು, ಬೆಳೆಹಾನಿ ಭೀತಿ ಆವರಿಸಿದೆ. ಜಮೀನಿನಲ್ಲಿ ನಿತ್ತಿದ್ದ ನೀರು ಹೊರಕಳಿಸಲು ರೈತರು ಹರಸಾಹಸಪಡುವಂತಾಗಿದೆ.
ರಾಮನಾಥಪುರ: ಕೊಡಗು ಜಿಲ್ಲೆಯ ಹಾಗೂ ಅರೆಮಾಲೆನಾಡು ಭಾಗದಲ್ಲಿಯೂ ಸತತ 3 ದಿವಸಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಮಳೆ ಅರ್ಭಟದಿಂದ ಜನರು ಮನೆಯಿಂದ ಹೊರಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ಸಂತೆಯಲ್ಲಿ ದಿನವಿಡೀ ಸುರಿದ ಮಳೆಗೆ ವ್ಯಾಪಾರಸ್ಥರು ಸಮಸ್ಯೆ ಅನುಭವಿಸುವಂತಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಬಿತ್ತನೆ ಹಾಗೂ ವ್ಯವಸಾಯ ಮಾಡಲು ಮಳೆ ಅಡ್ಡಿಯಾಗುತ್ತಿದೆ. ಕೆಲವು ರೈತರು ಸುರಿಯುವ ಮಳೆಯಲ್ಲಿಯೇ ಲೆಕ್ಕಿಸದೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಈ ಭಾಗದಲ್ಲಿ ಹೆಚ್ಚು ಬೆಳೆಯುವ ತಂಬಾಕು ಮುಸುಕಿನ ಜೋಳ, ರಾಗಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ಜಲಾವೃತವಾಗಿದ್ದು, ಬೆಳೆಹಾನಿ ಭೀತಿ ಆವರಿಸಿದೆ. ಜಮೀನಿನಲ್ಲಿ ನಿತ್ತಿದ್ದ ನೀರು ಹೊರಕಳಿಸಲು ರೈತರು ಹರಸಾಹಸಪಡುವಂತಾಗಿದೆ. ಕಾವೇರಿ ನದಿ ರಸ್ತೆಯ ಎರಡು ತಗ್ಗು ಪ್ರದೇಶದಲ್ಲಿ ಮಳೆಯ ನೀರು ಗುಡಿಯಲ್ಲಿ ನಿಂತ್ತು ನೀರಿನಮಯವಾಗಿದ್ದು ವಾಹನ ಸಂಚಾರಕ್ಕೆವಾಹನ ಸವಾರಿಗೆ ಬಹಳ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಇದ್ದು ಕುರುಡರಂತೆ ಇದ್ದಾರೆ ಎಂದು ವಾಹನ ಸವಾರರು ಹಿಡಿಶಾಪ ಹಾಕಿದರು.