29ರಿಂದ ಭದ್ರಾ ಮೇಲ್ದಂಡೆ ಕಾಲುವೆಗೆ ನೀರು ಬಿಡುಗಡೆ

| Published : Dec 27 2023, 01:31 AM IST

ಸಾರಾಂಶ

ಶಿವಮೊಗ್ಗ: ರೈತರಿಗೆ ಬೆಳೆಗಳಿಗೆ ನೀರುಣಿಸಲು ಭದ್ರೆ ನೀರು ಹರಿಸಲಾಗುತ್ತಿದ್ದು, ಶಾಂತಿಪುರ ಪಂಪ್‍ಹೌಸ್-1, ಜಂಭದಹಳ್ಳ ಅಕ್ಬೆಡಕ್ಸ್ ತರೀಕೆರೆ ರೈಲು ಸೇತುವೆ ಬೆಟ್ಟತಾವರೆಕೆರೆ ಪಂಪ್‍ಹೌಸ್-2 ಅಜ್ಜಂಪುರ ಸುರಂಗದ ಮೂಲಕ ಹೆಬ್ಬೂರು ಗ್ರಾಮದ ಹತ್ತಿರದ ವೈ-ಜಂಕ್ಷನ್ ಮೂಲಕ ಡಿ.29ರಿಂದ ನೀರು ಹರಿಯಲಿದೆ.

ಕನ್ನಡಪ್ರಭ ವಾರ್ತೆ, ಶಿವಮೊಗ್ಗ

ಶಾಂತಿಪುರ ಪಂಪ್‍ಹೌಸ್-1, ಜಂಭದಹಳ್ಳ ಅಕ್ಬೆಡಕ್ಸ್ ತರೀಕೆರೆ ರೈಲು ಸೇತುವೆ ಬೆಟ್ಟತಾವರೆಕೆರೆ ಪಂಪ್‍ಹೌಸ್-2 ಅಜ್ಜಂಪುರ ಸುರಂಗದ ಮೂಲಕ ಹೆಬ್ಬೂರು ಗ್ರಾಮದ ಹತ್ತಿರದ ವೈ-ಜಂಕ್ಷನ್ ಮೂಲಕ ಡಿ.29ರಿಂದ ನೀರನ್ನು ಹರಿಸಲಾಗುವುದು. ವಿಶ್ವೇಶ್ವರಯ್ಯ ಜಲ ನಿಗಮದ ಅಡಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯು ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾದುಹೋಗಿದೆ. ಈ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ತಿರುಗಾಡುವುದು ಜನ- ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಹಾಗೂ ಇತರೆ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಈ ಸೂಚನೆಗಳನ್ನು ಉಲ್ಲಂಘಿಸುವುದು ನಿಗಮದ ಆಸ್ತಿಯಾದ ನೀರಾವರಿ ಕಾಲುವೆ ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರನ್ನು ಎತ್ತುವುದು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂರು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸುವವರನ್ನು ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ವಿ.ಜ.ನಿ.ನಿ.ಯ ಸೂಪರಿಂಟೆಂಡಿಂಗ್ ಎಂಜಿನಿಯರ್‌ ತಿಳಿಸಿದ್ದಾರೆ. - - - (-ಭದ್ರಾ ಡ್ಯಾಂ.ಜೆಪಿಜಿ)

ಸಾಂದರ್ಭಿಕ ಚಿತ್ರ.