ನೀರನ್ನು ವ್ಯರ್ಥಗೊಳಿಸದೇ ಮಿತವಾಗಿ ಬಳಸಬೇಕು

| Published : Nov 14 2023, 01:16 AM IST

ನೀರನ್ನು ವ್ಯರ್ಥಗೊಳಿಸದೇ ಮಿತವಾಗಿ ಬಳಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭಾ ಜಲ ಶುದ್ಧೀಕರಣ ಘಟಕ ಆವರಣ

ಕನ್ನಡಪ್ರಭ ವಾರ್ತೆ ಸೊರಬ

ನೈಸರ್ಗಿಕವಾಗಿ ದೊರೆಯುವ ನೀರು ಜೀವಜಲವಾಗಿದೆ. ಸಾರ್ವಜನಿಕರು ಅನವಶ್ಯಕವಾಗಿ ನೀರನ್ನು ವ್ಯಯಮಾಡದೇ ಮಿತವಾಗಿ ಬಳಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ ಹೇಳಿದರು.

ಪಟ್ಟಣದ ಪುರಸಭೆ ವತಿಯಿಂದ ಪುರಸಭಾ ಜಲ ಶುದ್ಧೀಕರಣ ಘಟಕ ಆವರಣದಲ್ಲಿ ಹಮ್ಮಿಕೊಂಡಿದ್ದ ಜಲ ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಬರಗಾಲದ ಈ ಸಂದರ್ಭದಲ್ಲಿ ನೀರಿನ ಅಭಾವ ಸೃಷ್ಟಿಯಾಗಲಿದೆ. ಪ್ರತಿಯೊಬ್ಬರೂ ನೀರಿನ ಬಳಕೆ ಹಿತಮಿತವಾಗಿ ಬಳಸುವ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಗಮನಹರಿಸಬೇಕು. ಸರ್ಕಾರ ಸ್ವಚ್ಛತೆ, ಪ್ರಗತಿ, ಸಮೃದ್ಧಿಗೆ, ಹೆಚ್ಚಿನ ಆದ್ಯತೆ ನೀಡಿದೆ. ಪ್ರತಿಯೊಬ್ಬರು ಪರಿಸರ ಜಾಗೃತಿಯನ್ನು ಅರಿತು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಹಕರಿಸಬೇಕು. ಆ ಮೂಲಕ ಸುಂದರ ವಾತಾವರಣ ನಿರ್ಮಾಣಕ್ಕೆ ಕಾರಣರಾಗಬೇಕೆಂದು ತಿಳಿಸಿದರು.

ಪುರಸಭೆ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿ, ನಮ್ಮ ನಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಬಗ್ಗೆ ಕಾಳಜಿ ಹೊಂದಬೇಕು. ಆಗ ಉತ್ತಮ ಆರೋಗ್ಯ ಹೊಂದಲು ಅನುಕೂಲವಾಗಲಿದೆ. ಅನವಶ್ಯಕ ನೀರಿನ ಬಳಕೆ ಮಾಡದೇ ಉಳಿಸುವ ಮೂಲಕ ಇನ್ನೊಬ್ಬರಿಗೆ ನೆರವಾಗಬೇಕು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಸ್ವಚ್ಛತೆ ಕಡೆಗೂ ಮಹಿಳೆ ಗಮನ ನೀಡಿದಲ್ಲಿ ಪ್ರತಿಯೊಬ್ಬರಲ್ಲೂ ಪರಿಸರ ಹಾಗೂ ಸ್ವಚ್ಛತೆ ಅರಿವು ಮೂಡಲಿದೆ ಎಂದು ತಿಳಿಸಿದರು.

ಈ ಸಂದರ್ಭ ಪುರಸಭಾ ಸದಸ್ಯೆ ಪ್ರೇಮಾ ಟೋಕಪ್ಪ, ಅಭಿಯಂತರರಾದ ಚಂದನ್, ಹರೀಶ್, ಲಕ್ಷ್ಮೀನಾರಾಯಣ, ಶ್ರೀನಿವಾಸ್ ಹಾಗೂ ಸಿಬ್ಬಂದಿ ಹಾಜರಿದ್ದರು.

- - - -13ಕೆಪಿಸೊರಬ02:

ಸೊರಬ ಪುರಸಭೆ ಹಮ್ಮಿಕೊಂಡಿದ್ದ ಜಲ ದೀಪಾವಳಿ ಕಾರ್ಯಕ್ರಮವನ್ನು ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ ಉದ್ಘಾಟಿಸಿ ಮಾತನಾಡಿದರು.