ಸಾರಾಂಶ
ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು ದೃಶ್ಯ ವೈಭವವನ್ನು ಕಣ್ ತುಂಬಿಸಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.
ಜಲಪಾತ ಕಣ್ತುಂಬಿಕೊಳ್ಳಲು ಹರಿದು ಬರುತ್ತಿರುವ ಪ್ರವಾಸಿಗರು ದಂಡು । ಕಾವೇರಿಗೆ 1 ಲಕ್ಷ ಕ್ಯುಸೆಕ್ ನೀರು
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು ದೃಶ್ಯ ವೈಭವವನ್ನು ಕಣ್ ತುಂಬಿಸಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಹಾಗೂ ಕೆಆರ್‌ಎಸ್ ಜಲಾಶಯಗಳು ಭರ್ತಿಯಾಗಿ ಕಾವೇರಿ ನದಿಗೆ ೧ ಲಕ್ಷ ಕ್ಯುಸೆಕ್ಸ್‌ನಷ್ಟು ನೀರು ಬಿಟ್ಟಿರುವುದರಿಂದ ಭರಚುಕ್ಕಿ ಜಲಪಾತಕ್ಕೆ ಹೆಚ್ಚು ನೀರು ಬರುತ್ತಿದೆ. ಇದರಿಂದ ಜಲಪಾತ ತನ್ನ ವೈಭವವನ್ನು ಹೆಚ್ಚಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ವರ್ಷ ಮಳೆ ಇಲ್ಲದೆ ಜಲಪಾತ ಬಣಗುಟ್ಟುತ್ತಿದ್ದುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು,ಮಳೆಯ ನಡುವೆಯು ವೀಕ್ಷಣೆ:
ಹಸಿರು ಕಾನನದ ನಡುವೆ ಬೆಟ್ಟಗುಡ್ಡಗಳ ನಡುವೆ ಜಲರಾಶಿ ಧುಮ್ಮಿಕ್ಕುತ್ತಿರುವ ಜಲಪಾತವನ್ನು ಪ್ರವಾಸಿಗರು ಮೋಡಕವಿದ ವಾತಾವರಣ ಅದರಲ್ಲೂ ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೆ ಯುವಕರು, ಯುವತಿಯರು, ಮಕ್ಕಳು, ನವ ಜೋಡಿಗಳು, ಗುಂಪು ಗುಂಪಾಗಿ ಬಂದು ಜಲಪಾತ ವೀಕ್ಷಸಿ ಆನಂದ ಪಟ್ಟು ಪ್ರವಾಸಿ ತಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಖುಷಿ ಪಡುತ್ತಿದ್ದಾರೆ. ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಹಾಕಿ ಸಂಭ್ರಮಿಸಿದರು.ಜಲಪಾತ ವೀಕ್ಷಣೆಗೆ ಸಾವಿರಾರು ಜನರು ಬೈಕ್, ಕಾರು, ಬಸ್, ಮಿನಿ ಬಸ್, ಆಟೋಗಳಲ್ಲಿ ಹೆಚ್ಚಾಗಿ ಬರುತ್ತಿದ್ದಾರೆ. ಪ್ರಯಾಣಿಕರು ಮಳೆ ಬಂದರೆ ಪರದಾಡುವ ಸ್ಥಿತಿ ಇದ್ದು ಇನ್ನಾದರೂ ನೆರಳಿನ ವ್ಯವಸ್ಥೆ ಮಾಡಬೇಕು ಎಂಬುದು ಪ್ರವಾಸಿಗರ ಒತ್ತಾಯವಾಗಿದೆ. ತಮಿಳುನಾಡಿನ ದಾಹ ತಣಿಸಿದ ಕಾವೇರಿ!
ಕೊಳ್ಳೇಗಾಲ: ಕಾವೇರಿ ಕೊಳ್ಳದಲ್ಲಿ ಅಪಾರ ಮಳೆಯಾಗುತ್ತಿರುವುದರಿಂದ ಕಬಿನಿ, ಕೆಆರ್ ಎಸ್ ನಿಂದ ನೀರು ಬಿಡುಗಡೆಯಾಗುತ್ತಿದೆ. ಇದರಿಂದ ಅಪಾರ ಪ್ರಮಾಣದ ಹೊರಹರಿವಿನಿಂದ ತಮಿಳುನಾಡಿನ ದಾಹ ಕಾವೇರಿ ತಣಿಸುತ್ತಿದ್ದಾಳೆ. ತಮಿಳುನಾಡಿನ ಬಿಳಿಗುಂಡ್ಲು ಜಲಮಾಪನ ಕೇಂದ್ರದ ಬಳಿ ನೀರು ಹರಿದು ಹೋಗುತ್ತಿರುವುದು ಹೊಗೇನಕಲ್ ಸಮೀಪವಿರುವ ಬಿಳಿಗುಂಡ್ಲು ಜಲ ಮಾಪನ ಕೇಂದ್ರದಲ್ಲಿ ದಾಖಲಾಗುತ್ತಿದೆ.ಜು.16 ರಂದು 43 ಅಡಿಯಿದ್ದ ಮೆಟ್ಟೂರು ಜಲಾಶಯದ ನೀರಿನ ಮಟ್ಟ ಜು.21ರಂದು 68 ಅಡಿಗೆ ತಲುಪಿದೆ. ಆರೇ ದಿನದಲ್ಲಿ ಮೆಟ್ಟೂರು ಜಲಾಶಯದ ನೀರಿನ ಮಟ್ಟ 25 ಅಡಿ ಹೆಚ್ಚಳವಾಗಿದೆ.