₹153 ಕೋಟಿ ವೆಚ್ಚದಲ್ಲಿ ಮೋತಿ ತಲಾಬ್‌ ಕೆರೆಯಲ್ಲಿ ನೀರು ಶೇಖರಣಾ ಕಾಮಗಾರಿ

| Published : Jul 18 2025, 12:45 AM IST / Updated: Jul 18 2025, 12:46 AM IST

₹153 ಕೋಟಿ ವೆಚ್ಚದಲ್ಲಿ ಮೋತಿ ತಲಾಬ್‌ ಕೆರೆಯಲ್ಲಿ ನೀರು ಶೇಖರಣಾ ಕಾಮಗಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಮಾತನಾಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಯೋಜನೆಯಡಿ ಪಟ್ಟಣದ ಮೋತಿ ತಲಾಬ್ ಕೆರೆಯನ್ನು ಅಭಿವೃದ್ಧಿಗೊಳಿಸಿ, ಪಟ್ಟಣಕ್ಕೆ ಕುಡಿಯುವ ನೀರನ್ನು ಶೇಖರಣೆ ಮಾಡುವ ಕಾಮಗಾರಿ ಇದಾಗಿದೆ ಎಂದರು.

ಸವಣೂರು: ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸಲು ₹153 ಕೋಟಿ ವೆಚ್ಚದಲ್ಲಿ ನಗರದ ಹೊರವಲಯದ ಮೋತಿ ತಲಾಬ್ ಕೆರೆಯಲ್ಲಿ ನಗರಾಭಿವೃದ್ಧಿ ಯೋಜನೆಯಲ್ಲಿ ನೀರು ಶೇಖರಣಾ ಕಾಮಗಾರಿ ಪ್ರಾರಂಭಿಸಲು ಗುರುವಾರ ಏರ್ಪಡಿಸಿದ್ದ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಮಾತನಾಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಯೋಜನೆಯಡಿ ಪಟ್ಟಣದ ಮೋತಿ ತಲಾಬ್ ಕೆರೆಯನ್ನು ಅಭಿವೃದ್ಧಿಗೊಳಿಸಿ, ಪಟ್ಟಣಕ್ಕೆ ಕುಡಿಯುವ ನೀರನ್ನು ಶೇಖರಣೆ ಮಾಡುವ ಕಾಮಗಾರಿ ಇದಾಗಿದೆ.

ಕಾಮಗಾರಿ ಒಟ್ಟು ಅಂದಾಜು ಮೊತ್ತ ₹153 ಕೋಟಿ ಆಗಿದ್ದು, ಇದಕ್ಕೆ ಪುರಸಭೆ ವತಿಯಿಂದ ಠರಾವು ಸಲ್ಲಿಸಬೇಕಾಗಿದೆ. ಇದರಲ್ಲಿ ಒಟ್ಟು ಅಂದಾಜು ಮೊತ್ತದ ಶೇ. 5ರಷ್ಟು(₹7.65 ಕೋಟಿ) ಪುರಸಭೆ ಪಾವತಿಸಬೇಕಾಗುತ್ತದೆ. ಶೇ. 75ರಷ್ಟು ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಶೇ. 20ರಷ್ಟು ಆರ್ಥಿಕ ಸಂಸ್ಥೆಗಳಿಂದ ಸಾಲವನ್ನು ಪಡೆಬೇಕು. ಅಲ್ಲದೇ ವಿವಿಧ ಷರತ್ತುಗಳನ್ನು ಒಪ್ಪಿ ಸಭೆಯಲ್ಲಿ ಮಂಜೂರಾತಿ ನೀಡಬೇಕಾಗಿದೆ ಎಂದರು. ನಂತರ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.2025- 26ನೇ ಸಾಲಿನ ಎಸ್‌ಎಫ್‌ಸಿ ಕುಡಿಯುವ ನೀರಿನ ಯೋಜನೆಯಡಿ ಕರೆದ 6 ವಾರ್ಡ್‌ಗಳಲ್ಲಿ ಕಿರುನೀರು ಸರಬರಾಜಿಗಾಗಿ ಟೆಂಡರ್ ದರ ಮಂಜೂರಾತಿ ನೀಡಲಾಯಿತು.2025- 26ನೇ ಸಾಲಿನ ನೀರು ಸರಬರಾಜು ವಿಭಾಗ, ಬೀದಿದೀಪ ವಿಭಾಗ, ನೈರ್ಮಲ್ಯ ವಿಭಾಗ ಮತ್ತು ವಿವಿಧ ವಿಭಾಗಗಳಿಗೆ ಅವಶ್ಯವಾಗಿರುವ ಸಾಮಗ್ರಿಗಳನ್ನು, ವಾಹನ, ಮಾನವ ಶಕ್ತಿ ಸೇವೆಗಳನ್ನು ವಾರ್ಷಿಕವಾಗಿ ಪೂರೈಸಿಕೊಳ್ಳುವ ಟೆಂಡರ್ ದರಗಳಿಗೆ ಮಂಜೂರಾತಿ ನೀಡಲಾಯಿತು.ಅಧ್ಯಕ್ಷ ಅಲ್ಲಾವುದೀನ್ ಮನಿಯಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಖಮುರುನ್ನೀಸಾ ಪಟೇಲ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಆರ್. ಕಲ್ಮಠ, ಕಿರಿಯ ಅಭಿಯಂತರರು ನಾಗರಾಜ ಮಿರ್ಜಿ, ವ್ಯವಸ್ಥಾಪಕ ಮಹೇಶ ದೊಡ್ಡಣ್ಣನವರ, ಸದಸ್ಯರು ಇದ್ದರು.