ಜನವರಿ ಅಂತ್ಯಕ್ಕೆ ಹೊಳಲ್ಕೆರೆ ಕೆರೆಗಳಿಗೆ ನೀರು

| Published : Jul 07 2024, 01:21 AM IST

ಜನವರಿ ಅಂತ್ಯಕ್ಕೆ ಹೊಳಲ್ಕೆರೆ ಕೆರೆಗಳಿಗೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ ತಾಲೂಕಿನ ನವಣಕೆರೆ ಗ್ರಾಮದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ನವಣೆಕೆರೆಯಲ್ಲಿ ₹25 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಚಾಲನೆ

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಹೊಳಲ್ಕೆರೆ ಕ್ಷೇತ್ರದ 493 ಹಳ್ಳಿಗಳಲ್ಲಿನ ಸಮಸ್ಯೆಗನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಜನವರಿ ಅಂತ್ಯಕ್ಕೆ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೆ ಭದ್ರಾ ಮೇಲ್ಡಂಡೆಯಡಿ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ತಾಲೂಕಿನ ನವಣೆಕೆರೆ ಗ್ರಾಮದಲ್ಲಿ ₹25 ಲಕ್ಷ ವೆಚ್ಚದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮನೆ ಮನೆಗೆ ಶುದ್ಧ ಕುಡಿವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದಲ್ಲಿ ಫಿಲ್ಲರ್‌ ನಿರ್ಮಿಸಿ ಯಂತ್ರಗಳನ್ನು ಇರಿಸಲಾಗಿದೆ. ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸಹಿತ ನಡೆಯುತ್ತಿದೆ ಎಂದರು.

₹20 ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ, ₹20 ಕೋಟಿ ವೆಚ್ಚದಲ್ಲಿ ತಾಲೂಕು ಕಚೇರಿ ನಿರ್ಮಿಸಲಾಗಿದೆ. ಚೆಕ್‍ಡ್ಯಾಂ, ಕೆರೆಗಳನ್ನು ಕಟ್ಟಿಸಿದ್ದೇನೆ. ಜ.26 ರೊಳಗೆ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದರು.

ಪಟ್ಟಣದ ಹೊಸದುರ್ಗ ರಸ್ತೆಯಲ್ಲಿರುವ ಕೆರೆಯ ಮಧ್ಯದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ನಮ್ಮ ತಾಲೂಕಿನಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ತೊಂದರೆಯಾಗಬಾರದೆನ್ನುವ ಉದ್ದೇಶವಿಟ್ಟುಕೊಂಡು ಉಚಿತ ಬಸ್ ಸಂಚಾರ ಆರಂಭಿಸಲಾಗಿದೆ. ಸುತ್ತಮುತ್ತಲಿನ ಗುಡ್ಡಗಳಲ್ಲಿ ಗುಣಮಟ್ಟದ ಶಾಲಾ-ಕಾಲೇಜು ಹಾಸ್ಟೆಲ್‍ ನಿರ್ಮಿಸಿರುವುದರಿಂದ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರೈತರಿಗೆ ವಿದ್ಯುತ್ ತೊಂದರೆಯಾಗದಂತೆ ಎನ್‌ಜಿ ಹಳ್ಳಿ ಬಳಿ ವಿದ್ಯುತ್ ಸ್ಟೇಷನ್ ಕಟ್ಟಲಾಗಿದೆ. ಚಿಕ್ಕಜಾಜೂರು ಬಳಿ 270 ಕೋಟಿ ರು.ವೆಚ್ಚದಲ್ಲಿ ಪವರ್ ಸ್ಟೇಷನ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಜೋಗ್‍ಫಾಲ್ಸ್ ನಿಂದ ನೇರವಾಗಿ ವಿದ್ಯುತ್ ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದರು.

ಈ ವೇಳೆ ಗ್ರಾಪಂ ಸದಸ್ಯೆ ವಿಶಾಲಾಕ್ಷಮ್ಮ, ನವಣೆಕೆರೆ ಗ್ರಾಮದ ಹಿರಿಯ ಮುಖಂಡರಾದ ಚಂದ್ರಣ್ಣ, ಮಹಾಲಿಂಗಪ್ಪ, ಮಹೇಶ್ವರಪ್ಪ, ಬಸವರಾಜಪ್ಪ, ರುದ್ರಪ್ಪ, ನಟರಾಜ್, ಕೆಆರ್‌ಐಡಿಎಲ್‌ ಸಹಾಯಕ ಎಂಜಿನಿಯರ್ ತೇಜಸ್ ಉಪಸ್ಥಿತರಿದ್ದರು.