ಕಡೂರುಚಿತ್ರದುರ್ಗದ ಶಾಖಾ ಕಾಲುವೆ ಮೂಲಕ ತಾಲೂಕಿನ ಕುಕ್ಕ ಸಮುದ್ರ ಕೆರೆಗೆ ಆ. 24 ರಿಂದ 27 ರೊಳಗೆ ನೀರು ಹರಿಯಲಿದೆ ಒಂದು ವೇಳೆ ನೀರು ಹರಿಸದೇ ಇದ್ದಲ್ಲಿ ರೈತ ರೊಂದಿಗೆ ಪಾದಯಾತ್ರೆ ಅನಿವಾರ್ಯ ಎಂದು ಮಾಜಿ ಶಾಸಕ ವೈ.ಎಸ್. ವಿ.ದತ್ತ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಚಿತ್ರದುರ್ಗದ ಶಾಖಾ ಕಾಲುವೆ ಮೂಲಕ ತಾಲೂಕಿನ ಕುಕ್ಕ ಸಮುದ್ರ ಕೆರೆಗೆ ಆ. 24 ರಿಂದ 27 ರೊಳಗೆ ನೀರು ಹರಿಯಲಿದೆ ಒಂದು ವೇಳೆ ನೀರು ಹರಿಸದೇ ಇದ್ದಲ್ಲಿ ರೈತ ರೊಂದಿಗೆ ಪಾದಯಾತ್ರೆ ಅನಿವಾರ್ಯ ಎಂದು ಮಾಜಿ ಶಾಸಕ ವೈ.ಎಸ್. ವಿ.ದತ್ತ ತಿಳಿಸಿದರು.

ಶನಿವಾರ ಯಗಟಿ ಗ್ರಾಮದ ಶ್ರೀ ವೀರನಾರಾಯಣ ದೇವಾಲಯದಲ್ಲಿ ಕುಟುಂಬದಿಂದ ಆಯೋಜಿಸಿದ್ದ ಪೂಜಾ ಕಾರ್ಯ ಗಳಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಡೂರಿನ ಬಹುದೊಡ್ಡ ಕುಕ್ಕ ಸಮುದ್ರದ ಕೆರೆ ಕಳೆದ 3 ವರ್ಷಗಳಿಂದ ನೀರಿಲ್ಲದೆ ತಳ ಕಂಡಿದೆ. ಬರ ವೀಕ್ಷಣೆಗೆ ಹೋದಾಗ ಕೆರೆ ಸುತ್ತಲಿನ 7 ಗ್ರಾಪಂ ವ್ಯಾಪ್ತಿ ರೈತರು ತಮಗೆ ತಿಳಿಸಿ ಹಿನ್ನೆಲೆಯಲ್ಲಿ ವಿಜೆ ಎನ್ ಎಲ್ ನ ವ್ಯವಸ್ಥಾಪಕ ರಮೇಂದ್ರ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿದೆ. ಆಗ ಅವರು ಚಿತ್ರದುರ್ಗದ ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗುವುದು. ಅಲ್ಲಿಂದ ಅಬ್ಬಿನೊಳಲು ಬಳಿ ನಾಲೆಯಿಂದ ಹಳ್ಳದ ಮೂಲಕ ನೀರು ಹರಿಸುವುದಾಗಿ ತಿಳಿಸಿದರು.

ಅದಕ್ಕೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ರಘುಮೂರ್ತಿ, ಶಾಸಕ ಕೆ ಎಸ್ ಆನಂದ್ ರವರನ್ನು ಭೇಟಿ ಆಗಿ ಮನವರಿಕೆ ಮಾಡಿದ್ದು ಕಾಲುವೆಗಳಿಗೆ ನೀರು ಬರಲಿದೆ ಎಂದಿದ್ದಾರೆ. ಚಿತ್ರದುರ್ಗದ ಶಾಖಾ ಕಾಲುವೆ ಹಳ್ಳದ ಮೂಲಕ ಕುಕ್ಕಸಮುದ್ರ ಕೆರೆಗೆ ಆ 24 ರಿಂದ 27 ರೊಳಗೆ ನೀರು ಹರಿಯಲಿದೆ ಎಂದರು.

ಕುಕ್ಕಸಮುದ್ರ ಕೆರೆಗೆ ನೀರು ಹರಿದಲ್ಲಿ 7 ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಅಂತರ್ಜಲ ವೃದ್ಧಿಸಿ ಜನ ಜಾನುವಾರು ಗಳಿಗೆ ಕುಡಿವ ನೀರು ಸಿಗಲಿದೆ.

ಆದಾಯ ಮಿತಿ ₹32 ಸಾವಿರ ರೂಗೆ ನಿಗಧಿಪಡಿಸಿದ ಕಾರಣ ಕಳೆದ 5 ತಿಂಗಳಿಂದ ವಿಧವಾ, ಆಂಗವಿಕಲ ವೇತನ ಸೇರಿ ದಂತೆ ಸಾಮಾಜಿಕ ಸವಲತ್ತು ರದ್ದಾಗಿವೆ. ಸಚಿವರು ಹಾಗೂ ಡಿಸಿಯನ್ನು ಭೇಟಿ ಮಾಡಿದ್ದು ಈಗ ಆದಾಯ ಮಿತಿ ₹1.20 ಲಕ್ಷ ಕ್ಕೆ ಏರಿಕೆಯಿಂದ ರಾಜ್ಯದ 23,14,544 ಜನರಿಗೆ ಸವಲತ್ತು ಸಿಗಲಿದೆ ಎಂದರು.

ಈ ಭಾರಿ ಶೇ. 60 ವಾಡಿಕೆ ಮಳೆ ಕೈ ಕೊಟ್ಟು 40 ಸಾವಿರ ಹೆ.ನಲ್ಲಿ ರಾಗಿ ಬಿತ್ತನೆ ಆಗಿಲ್ಲ. ಅಧಿವೇಶನದಲ್ಲಿ ಬರದ ಬಗ್ಗೆ ಚರ್ಚಿಸಿಲ್ಲ. ಆ. 12, 2026 ರಂದು ವಿಪತ್ತು ನಿರ್ವಹಣಾ ಇಲಾಖೆಗೆ ಪತ್ರ ನೀಡಿದರೂ ಯಾವುದೇ ವರದಿ ಬಂದಿಲ್ಲ. ರಾಜ್ಯ ಸರ್ಕಾರ ಕಡೂರು ತಾಲೂಕನ್ನು ಬರ ಪೀಡಿತವೆಂದು ಘೋಷಿಸುವಂತೆ ದತ್ತ ಆಗ್ರಹಿಸಿದರು.

ಮುಖಂಡರಾದ ಬಿದರೆ ಜಗದೀಶ್, ವೈ. ಎಸ್.ರವಿಪ್ರಕಾಶ್, ಬಿಳುವಾಲ ಪ್ರಕಾಶ್, ಡಿ.ಪ್ರಶಾಂತ್, ಪಾತೇನಹಳ್ಳಿ ಚೌಡಪ್ಪ, ಬೀರೂರು ಮೋಹನ್, ಕೃಷ್ಣಮೂರ್ತಿ, ನಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು. 22ಕೆಕೆಡಿಯು1. ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮಾಜಿ ಶಾಸಕ ವೈ ಎಸ್. ದತ್ತ ಸುದ್ದಿಗೋಷ್ಟಿ ನಡೆಸಿದರು.