ತಗ್ಗು ಪ್ರದೇಶಕ್ಕೆ ನೀರು: ಎಸಿ ಎನ್.ವಿ.ನಟೇಶ್ ಪರಿಶೀಲನೆ

| Published : Oct 25 2025, 01:00 AM IST

ಸಾರಾಂಶ

ತರೀಕೆರೆ: ಮಳೆ ನೀರಿನಿಂದ ಸಮಸ್ಯೆ ಎದುರಿಸುತ್ತಿರುವ ಎ.ರಂಗಾಪುರ ಗ್ರಾಮಕ್ಕೆ ಎ.ಸಿ. ಎನ್.ವಿ.ನಟೇಶ್ ಭೇಟಿ ನೀಡಿ ಪರಿಶೀಲಿಸಿದರು.

ತರೀಕೆರೆ: ಮಳೆ ನೀರಿನಿಂದ ಸಮಸ್ಯೆ ಎದುರಿಸುತ್ತಿರುವ ಎ.ರಂಗಾಪುರ ಗ್ರಾಮಕ್ಕೆ ಎ.ಸಿ. ಎನ್.ವಿ.ನಟೇಶ್ ಭೇಟಿ ನೀಡಿ ಪರಿಶೀಲಿಸಿದರು.ಕೆರೆ ಹೊಸಳ್ಳಿಯ ನಾಲೆ ಮೂಲಕ ಹರಿದು ಬಂದು ಎ.ರಂಗಾಪುರ ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿರುವುದನ್ನು ಗಮನಿಸಿದ ಅವರು ಸಮಸ್ಯೆ ಎದುರಿಸು ತ್ತಿರುವ 2 ಕುಟುಂಬದ ಜನರನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಮೂಲಭೂತ ಸೌಕರ್ಯಗಳ ಜತೆ ಊಟದ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕಾಂತಕುಮಾರ್‌ ನಾಯ್ಕ, ಗ್ರಾಮ ಆಡಳಿತಾಧಿಕಾರಿ ಧನಂಜಯ, ತಾಲೂಕು ಸರ್ವೇಯರ್ ಅರುಣ್‌ಕುಮಾರ್, ಗ್ರಾಪಂ ಪ್ರಥಮ ದರ್ಜೆ ಸಹಾಯಕ ವಾಸು ಮತ್ತಿತರರಿದ್ದರು.-

24ಕೆಟಿಆರ್.ಕೆ.15_

ತಾಲೂಕಿನ ಎ.ರಂಗಾಪುರ ಗ್ರಾಮಕ್ಕೆ ಎ,ಸಿ, ಎನ್.ವಿ.ನಟೇಶ್ ಭೇಟಿ ನೀಡಿ ಪರಿಶೀಲಿಸಿದರು.