ಸಾರಾಂಶ
ನಮ್ಮವರನ್ನು ಚುನಾವಣೆ ವೇಳೆ ಒಂದು, ಮೂರು ದಿನದ ಹಾಗೂ ತಿಂಗಳ ಮಟ್ಟಿಗೆ ಅನರ್ಹರನ್ನಾಗಿ ಮಾಡಿದ್ದರು. ಹಾಲಿಗೆ ನೀರು ಬೆರಿಸಿ ಅಕ್ರಮ ಎಸಗಿದವರು ಯಾರು? ಯಾರ್‍ಯಾರು ಇದ್ದರು? ನಿಮ್ಮ ಪಾತ್ರ ಏನು?. ಅಂದು ನೀವು ಮಾಡಿರುವುದನ್ನು ಇಂದು ನಾವು ಅನುಸರಿಸುತ್ತಿದ್ದೇವೆ ಎನ್ನುವ ಮೂಲಕ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿಕೆಗೆ ಟಾಂಗ್ ನೀಡಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮನ್ಮುಲ್ ಚುನಾವಣೆಯಲ್ಲಿ ಈ ಹಿಂದೆ ಅನುಸರಿಸಿದ ಮಾರ್ಗವನ್ನೇ ನಾವು ಮಾಡುತ್ತಿರುವುದಾಗಿ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ ದ್ವೇಷ ರಾಜಕಾರಣವನ್ನು ಪರೋಕ್ಷವಾಗಿ ಒಪ್ಪಿಕೊಂಡರು.ಪಟ್ಟಣದ ಮುಸ್ಲಿಂ ವಸತಿ ಶಾಲೆಯ ಆವರಣದಲ್ಲಿ 8 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪಿಯುಸಿ ಕಾಲೇಜು ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ಏನೆಲ್ಲ ಮಾಡಿದ್ದರು ಎಂದು ನೆನೆಪಿಸಿಕೊಳ್ಳಲಿ. ಚುನಾವಣೆ ವೇಳೆ ಈ ಹಿಂದಿನ ಆಡಳಿತವು ತೋರಿಸಿಕೊಟ್ಟಿರುವುದನ್ನೇ ನಾವು ಮಾಡುತ್ತಿದ್ದೇವೆ ಎಂದರು.
ನಮ್ಮವರನ್ನು ಚುನಾವಣೆ ವೇಳೆ ಒಂದು, ಮೂರು ದಿನದ ಹಾಗೂ ತಿಂಗಳ ಮಟ್ಟಿಗೆ ಅನರ್ಹರನ್ನಾಗಿ ಮಾಡಿದ್ದರು. ಹಾಲಿಗೆ ನೀರು ಬೆರಿಸಿ ಅಕ್ರಮ ಎಸಗಿದವರು ಯಾರು? ಯಾರ್‍ಯಾರು ಇದ್ದರು? ನಿಮ್ಮ ಪಾತ್ರ ಏನು?. ಅಂದು ನೀವು ಮಾಡಿರುವುದನ್ನು ಇಂದು ನಾವು ಅನುಸರಿಸುತ್ತಿದ್ದೇವೆ ಎನ್ನುವ ಮೂಲಕ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿಕೆಗೆ ಟಾಂಗ್ ನೀಡಿದರು.ನಂತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೋಸ್ಕರ ಸರ್ಕಾರ ಬದ್ಧವಾಗಿದೆ. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಅತೀ ಹೆಚ್ಚು ಅಂಕ ಪಡೆದು ಮುಂದಿನ ಜೀವನವನ್ನು ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿ ಪುರಸಭಾ ಸದಸ್ಯರು ಹಾಗೂ ಇತರ ಅಧಿಕಾರಿಗಳು ಇದ್ದರು.