ನಳಂದ ವಿವಿ ಪುನರ್ ಸ್ಥಾಪನೆ ನಮಗೆ ಹೆಮ್ಮೆ: ಆರಗ ಜ್ಞಾನೇಂದ್ರ

| Published : Jun 22 2024, 12:46 AM IST

ನಳಂದ ವಿವಿ ಪುನರ್ ಸ್ಥಾಪನೆ ನಮಗೆ ಹೆಮ್ಮೆ: ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿಯಲ್ಲಿ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಡಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಶತಮಾನಗಳ ಪರ್ಯಂತ ಭಾರತ ಜ್ಞಾನ ಭಂಡಾರವನ್ನು ಹೊಂದಿದ್ದು ಪರಕೀಯರ ದಾಳಿಯಿಂದ ನಾಶವಾಗಿದ್ದ ಗತಕಾಲದ ನಳಂದ ವಿಶ್ವವಿದ್ಯಾಲಯವನ್ನು ಪುನರ್ ಸ್ಥಾಪನೆಗೊಳಿಸಿರುವುದು ಭಾರತೀಯ ಪ್ರಜೆಗಳ ಹೆಮ್ಮೆಯ ಸಂಗತಿಯಾಗಿದೆ. ಈ ದೇಶದ ಪರಂಪರೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ನೆರೆ ರಾಷ್ಟ್ರಗಳಿಗೂ ಮನವರಿಕೆಯಾಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕಿನ ಸಾಲೂರು ಸರ್ಕಾರಿ ಆಯುಷ್ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ಪಟ್ಟಣದ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 10 ನೇ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವ ಯೋಗ ಅಮೂಲ್ಯವಾಗಿದ್ದು ಪ್ರಸ್ತುತ ಜಗತ್ತಿನ 180 ಕ್ಕೂ ಹೆಚ್ಚು ದೇಶಗಳಲ್ಲಿ ಯೋಗಾಸನ ಮನ್ನಣೆ ಪಡೆದಿದೆ. ಆಯುರ್ವೇದ ಚಿಕಿತ್ಸೆ ಸೇರಿದಂತೆ ಕಬಡ್ಡಿ ಮುಂತಾದ ಕ್ರೀಡೆಯನ್ನೂ ಜಗತ್ತಿಗೆ ನೀಡಿರುವ ಭಾರತದ ಕೊಡುಗೆ ಅಪಾರ ಎಂದರು.ಮನುಷ್ಯನ ಶರೀರ ಮತ್ತು ಮನಸ್ಸುಗಳನ್ನು ನಿಯಂತ್ರಿಸುವಲ್ಲಿ ಯೋಗಾಭ್ಯಾಸ ಅತ್ಯಂತ ಉಪಯುಕ್ತ ಮಾಧ್ಯಮವಾಗಿದೆ. ಜೀವಿಗಳಲ್ಲಿ ಭಾವನಾತ್ಮಕ ಜೀವಿಯಾದ ಮನುಷ್ಯ ಪ್ರಾಣಿಗಳಿಗಿಂತ ಭಿನ್ನವಾಗಿದ್ದು ವಿವಿಧ ಭಾವನೆಗಳನ್ನು ಹೊಂದಿರುವ ಮನಸ್ಸನ್ನು ನಿಯಂತ್ರಿಸಲು ಮಹಿಳೆಯರೂ ಕೂಡ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದರು. ಸಾಲೂರು ಸರ್ಕಾರಿ ಆಯುಷ್ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ರವಿಶಂಕರ್ ಉಡುಪ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್, ಪಪಂ ಸದಸ್ಯ ರತ್ನಾಕರ ಶೆಟ್ಟಿ, ಉಪಪ್ರಾಂಶುಪಾಲ ದೇವೇಂದ್ರ ನಾಯಕ್, ಡಾ.ನಮಿತಾ ಆರ್, ಶಿಕ್ಷಕರಾದ ಚಂದ್ರಪ್ಪ, ಎನ್.ಜಿ.ಸ್ವಾಮಿ ಇದ್ದರು.