ಸಾರಾಂಶ
ಪರಿಸರ ಅಭಿವೃದ್ಧಿಯಾದರೆ ಮಾತ್ರ ಮನುಷ್ಯನ ಜೀವನ ಹಸನಾಗಲು ಸಾಧ್ಯ, ಪ್ರಕೃತಿ ಉಳಿಸಿ ಬೆಳಸಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಪದ್ಮಯ್ಯ ಅಭಿಪ್ರಾಯಪಟ್ಟರು.
ಕೋಲಾರ: ಪರಿಸರ ಅಭಿವೃದ್ಧಿಯಾದರೆ ಮಾತ್ರ ಮನುಷ್ಯನ ಜೀವನ ಹಸನಾಗಲು ಸಾಧ್ಯ, ಪ್ರಕೃತಿ ಉಳಿಸಿ ಬೆಳಸಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಪದ್ಮಯ್ಯ ಅಭಿಪ್ರಾಯಪಟ್ಟರು.
ನಗರದ ಸ್ಕೌಟ್ಸ್ ಭವನದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕೋಲಾರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸ್ಕೌಟ್ಸ್ ಗೈಡ್ಸ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಮನೆಗಳ ಸಮೀಪ ಅಥವಾ ಮಹಡಿಯ ಮೇಲೆ ಕೈತೋಟ ಮಾಡುವ ಮೂಲಕ ತಮ್ಮ ಪೋಷಕರಿಗೆ ನೆರವಾಗಬೇಕು. ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಉತ್ತಮ ಪರಿಸರವನ್ನು ಉಳಿಸಿ ಬೆಳಸಬೇಕು ಎಂದು ತಿಳಿಸಿದರು.
ರೋವರ್ ಲೀಡರ್ ನವೀನ್, ರೇಂಜರ್ ಲೀಡರ್ ಸೌಮ್ಯ, ಸ್ಕೌಟ್ ಆಯುಕ್ತ ಸುರೇಶ್, ನವೀನಾ, ತಾಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ, ಜಿಲ್ಲಾ ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಶಿಬಿರದ ಸಿಬ್ಬಂಧಿಗಳಾದ ಅಶ್ವಿನಿ, ಶ್ರೀದೇವಿ, ನಿರಂಜನ್, ಹರೀಶ್ ಕುಮಾರ್, ವಿನಯ್ ಕುಮಾರ್, ನವೀನ್ ಕುಮಾರ್, ವಿಘ್ನೇಶ್, ಹೇಮಾವತಿ, ರಾಜಕುಮಾರ್ ಇದ್ದರು.