ಸಾರಾಂಶ
ಸೂಲಿಬೆಲೆ: ಚುನಾವಣಾ ಪೂರ್ವ ನೀಡಿದ ಎಲ್ಲಾ ವಾಗ್ದಾನಗಳನ್ನು ನಾವು ಈಡೇರಿಸಿದ್ದೇವೆ ನುಡಿದಂತೆ ನೆಡೆದಿದ್ದೇವೆ ಎಂದಿಗೂ ನಮ್ಮನ್ನು ಕೈ ಬಿಡಬೇಡಿ ಎಂದು ಶಾಸಕ ಶರತ್ ಬಚ್ಚೇಗೌಡ ಕೋರಿದರು.
ಸೂಲಿಬೆಲೆ: ಚುನಾವಣಾ ಪೂರ್ವ ನೀಡಿದ ಎಲ್ಲಾ ವಾಗ್ದಾನಗಳನ್ನು ನಾವು ಈಡೇರಿಸಿದ್ದೇವೆ ನುಡಿದಂತೆ ನೆಡೆದಿದ್ದೇವೆ ಎಂದಿಗೂ ನಮ್ಮನ್ನು ಕೈ ಬಿಡಬೇಡಿ ಎಂದು ಶಾಸಕ ಶರತ್ ಬಚ್ಚೇಗೌಡ ಕೋರಿದರು.
ಹೋಬಳಿಯ ಭುವನಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ಮಹಿಳೆಯರು ಮತ್ತು ಮಕ್ಕಳ ಜೊತೆ ಮಾತನಾಡಿದ ಅವರು, ಉಚಿತ ವಿದ್ಯುತ್ ನೀಡಿದ್ದೇವೆ. ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ 2 ಸಾವಿರ ಹಾಕಿದ್ದೇವೆ. ಬಸ್ ಪ್ರಯಾಣ ಉಚಿತ ನೀಡಿದ್ದೇವೆ, ಅನ್ನಭಾಗ್ಯದ ಹಣ ಖಾತೆಗೆ ಜಮಾ ಮಾಡಿದ್ದೇವೆ, ಜನರಿಂದ ಜನರಿಗಾಗಿ, ಜನರಿಗೋಸ್ಕರವೇ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರ ಜನಾದೇಶದಂತೆ ನಡೆಯುತ್ತದೆ ಎಂದು ಹೇಳಿದರು.ಗೃಹಲಕ್ಷ್ಮೀ ಯೋಜನೆಯಲ್ಲಿ ನೋಂದಣಿಯಾಗದ ಫಲಾನುಭವಿಗಳು ಸ್ಥಳೀಯ ಗ್ರಾಮ ಪಂಚಾಯತ್‌ನಲ್ಲಿ 3 ದಿನಗಳ ಕಾಲ ಅವಕಾಶ ನೀಡಿದ್ದು, ಉಚಿತವಾಗಿ ಕೆವೈಸಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಬುವನಹಳ್ಳಿ ಗೋಪಾಲಪ್ಪ, ಹಸಿಗಾಳ ಜಗದೀಶ್, ಹಾಪ್‌ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶ್ ಇತರರಿದ್ದರು.ಚಿತ್ರ; ೨೭ ಎಸ್ ಎಲ್ ಬಿ ೧ ಜೆಪಿಜೆ ನಲ್ಲಿದೆ