ಕಕ್ಕರಗೊಳ್ಳ ಜಿಪಂ ಕ್ಷೇತ್ರದಲ್ಲಿ ನಿಮ್ಮೆಲ್ಲಾ ಕಲ್ಯಾಣ ಗುಣಗಳನ್ನು ನಿಮ್ಮದೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನೋಡಿದ್ದು, ಕಡ್ಲೇಬಾಳು ಗ್ರಾಪಂ ಹಗರಣ ಮುಚ್ಚಿ ಹಾಕಲು ಹಾರ್ಡ್ ಡಿಸ್ಕ್ ಸಮೇತ ಕಂಪ್ಯೂಟರ್ ಸಿಸ್ಟಂ ಸುಟ್ಟು ಹಾಕಿದ್ದ ನಿಮ್ಮ ವಿಚಾರ ಎಲ್ಲರಿಗೂ ಗೊತ್ತಿದ್ದು, ನಿನ್ನಂತಹ ವ್ಯಕ್ತಿಯಿಂದ ರಾಜಕೀಯ ಮಾಡುವ ದುಸ್ಥಿತಿ ನನಗೆ ಬಂದಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್ ಕಾಂಗ್ರೆಸ್ಸಿನ ಮುಖಂಡ ಮಾಗಾನಹಳ್ಳಿ ಬಿ.ಕೆ.ಪರಶುರಾಮಗೆ ತಿರುಗೇಟು ನೀಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಕ್ಕರಗೊಳ್ಳ ಜಿಪಂ ಕ್ಷೇತ್ರದಲ್ಲಿ ನಿಮ್ಮೆಲ್ಲಾ ಕಲ್ಯಾಣ ಗುಣಗಳನ್ನು ನಿಮ್ಮದೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನೋಡಿದ್ದು, ಕಡ್ಲೇಬಾಳು ಗ್ರಾಪಂ ಹಗರಣ ಮುಚ್ಚಿ ಹಾಕಲು ಹಾರ್ಡ್ ಡಿಸ್ಕ್ ಸಮೇತ ಕಂಪ್ಯೂಟರ್ ಸಿಸ್ಟಂ ಸುಟ್ಟು ಹಾಕಿದ್ದ ನಿಮ್ಮ ವಿಚಾರ ಎಲ್ಲರಿಗೂ ಗೊತ್ತಿದ್ದು, ನಿನ್ನಂತಹ ವ್ಯಕ್ತಿಯಿಂದ ರಾಜಕೀಯ ಮಾಡುವ ದುಸ್ಥಿತಿ ನನಗೆ ಬಂದಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್ ಕಾಂಗ್ರೆಸ್ಸಿನ ಮುಖಂಡ ಮಾಗಾನಹಳ್ಳಿ ಬಿ.ಕೆ.ಪರಶುರಾಮಗೆ ತಿರುಗೇಟು ನೀಡಿದರು.ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೂ ನಿಷ್ಠಾವಂತರಲ್ಲದ ನಿಮ್ಮಂತಹವರಿಗೆ ಸಂಸ್ಕೃತಿ, ಸಂಸ್ಕಾರ ಇಲ್ಲದಿರಬಹುದು. ಆದರೆ, ನಮ್ಮ ಮನೆ, ಪಕ್ಷವು ನನಗೆ ಸಂಸ್ಕೃತಿ, ಸಂಸ್ಕಾರವನ್ನು ಹೇಳಿಕೊಟ್ಟಿದೆ. ನೀವು ನನಗೆ ಏಕವಚನದಲ್ಲಿ ಮಾತನಾಡಿದ್ದರೂ, ನಾನು ನಿಮಗೆ ಗೌರವಯುತವಾಗಿಯೇ ಹೇಳುತ್ತಿದ್ದೇನೆ. ನಾನು ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ರ ಬಗ್ಗೆಯಾಗಲೀ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರ ಬಗ್ಗೆಯಾಗಲೀ ಎಂದಿಗೂ ಮಾತನಾಡಿದವನಲ್ಲ ಎಂದರು.
ನಿಮ್ಮ ಕಂಡ ನಂತರವೇ ಸಚಿವರು, ಸಂಸದರ ಬಳಿ ಅಧಿಕಾರಿಗಳು ಹೋಗಬೇಕಾ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮದೇ ಗ್ರಾಮದ 2 ಬೂತ್‌ಗೆ ಮಾತ್ರ ನಿಮ್ಮ ಸೀಮಿತಗೊಳಿಸಿ, ಉತ್ತರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಪತಿ ಮಲ್ಲಿಕಾರ್ಜುನ್‌ರನ್ನು ಗೆಲ್ಲಿಸಿಕೊಂಡರು ಎಂದು ತಿಳಿಸಿದರು.ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ನಿಟುವಳ್ಳಿ ಆರ್.ಎಸ್.ಶೇಖರಪ್ಪ, ಸೀಮೆಎಣ್ಣೆ ಮಲ್ಲೇಶ್ ಸೇರಿದಂತೆ ಅನೇಕ ಹಿರಿಯರು ಈಗೆಲ್ಲಿದ್ದಾರೆ? ನಿಮ್ಮಂತಹವರು ಪಕ್ಷ ನಿಷ್ಠರನ್ನು ಮೂಲೆಗುಂಪು ಮಾಡಿ, ತುಳಿದು ಹಾಕಿದಿರಿ. ಚನ್ನಯ್ಯ ಒಡೆಯರ್, ಕೆಂಗೋ ಹನುಮಂತಪ್ಪ ಕುಟುಂಬಗಳು ಈಗ ಎಲ್ಲಿವೆ? ಕಲ್ಪನಹಳ್ಳಿ ಗೌಡ್ರು, ಕೆ.ಎಂ.ಕಲ್ಲೇಶಪ್ಪ, ಬೇತೂರು ಬಿ.ಕರಿಬಸಪ್ಪ ಕುಟುಂಬಕ್ಕೆ ಏನು ಮಾಡಿದ್ದೀರಿ? ಬಾತಿ ಸಿದ್ದಲಿಂಗಪ್ಪ ಸೇರಿದಂತೆ ಇಂತಹ ಹಿರಿಯರು ಕಟ್ಟಿದ್ದ ಹುತ್ತಕ್ಕೆ ಬಂದು ಹೊಕ್ಕವರು ನೀವು. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ರ ಕಿವಿ ಕಚ್ಚುವ ಮೂಲಕ ಕಾಂಗ್ರೆಸ್ ನಿಷ್ಠರು, ಶಾಮನೂರು ಕುಟುಂಬದ ಆಪ್ತರನ್ನೆಲ್ಲಾ ಒಬ್ಬೊಬ್ಬರನ್ನಾಗಿ ದೂರ ಮಾಡಿದಿರಿ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಕಡ್ಲೇಬಾಳು ಎಲ್.ಎಚ್.ಹನುಮಂತಪ್ಪ, ಚಿಕ್ಕಬೂದಿಹಾಳ ಭಗತ್ ಸಿಂಹ, ಹನುಮಂತ ನಾಯ್ಕ, ರೊಡ್ಡ ಓಬಜ್ಜಿಹಳ್ಳಿ ಎಸ್.ಎಚ್.ಹಾಲೇಶಪ್ಪ, ದೊಡ್ಡ ಓಬಜ್ಜಿಹಳ್ಳಿ ಭೀಮಾನಾಯ್ಕ, ತ್ಯಾವಣಿಗೆ ಕೃಷ್ಣಮೂರ್ತಿ, ತಾರೇಶ ನಾಯ್ಕ, ಎಚ್.ಬಿ.ದುರುಗೇಶ, ಕೊಟ್ರೇಶಗೌಡ, ಕರಿಯಪ್ಪ, ಗುತ್ತೂರು ಮಂಜುನಾಥ ಇತರರು ಇದ್ದರು.ಕಡ್ಲೇಬಾಳು ಆಂಜನೇಯ ಗುಡಿಯಲ್ಲಿ ಆಣೆ ಮಾಡು
ಕಡ್ಲೇಬಾಳು ಗ್ರಾಮದಲ್ಲಿ 33 ಲಕ್ಷ ರು. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣದ ವಿಚಾರದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಮಾಗಾನಹಳ್ಳಿ ಬಿ.ಕೆ.ಪರಶುರಾಮ ಒದ್ದೆ ಬಟ್ಟೆಯಲ್ಲಿ ಬಂದು, ಶ್ರೀ ಆಂಜನೇಯ ದೇವಸ್ಥಾನದಲ್ಲಿ ಗಂಟೆ ಹೊಡೆಯಲಿ. ನಾನೂ ಒದ್ದೆ ಬಟ್ಟೆಯಲ್ಲಿ ಬಂದು ಗಂಟೆ ಹೊಡೆದು, ಆಣೆ ಮಾಡುತ್ತೇನೆ. ನೀವು ಯಾವಾಗ ಹೇಳಿದರೂ ನಾನು ಸಿದ್ಧನೆಂದು ಮಾಗಾನಹಳ್ಳಿ ಪರಶುರಾಮಗೆ ಬಿಜೆಪಿ ಮುಖಂಡ ಧನಂಜಯ ಕಡ್ಲೇಬಾಳು ಸವಾಲು ಹಾಕಿದರು.ದಾವಣಗೆರೆ ತಾಲೂಕು ತಹಸೀಲ್ದಾರ್‌ಗೆ ಹೊಸಪೇಟೆ ತಹಸೀಲ್ದಾರ್ ಕಚೇರಿಯಲ್ಲಿ ಏನು ಕೆಲಸವಿದೆ? ಇಲ್ಲಿನ ತಹಸೀಲ್ದಾರ್‌ಗೆ ನಿಮ್ಮ ಜೊತೆಗೆ ಹೊಸಪೇಟಿ ತಾಲೂಕು ಕಚೇರಿಗೆ ಯಾಕೆ, ಯಾವ ಕಾರಣಕ್ಕೆ ಕರೆದೊಯ್ಯುತ್ತೀರಿ? ನಿಮ್ಮೆಲ್ಲಾ ಅನ್ಯಾಯ, ಅಕ್ರಮ, ಹಗರಣಗಳಿಗೆ ಶೀಘ್ರವೇ ನಾವು ತಕ್ಕ ಪಾಠ ಕಲಿಸುತ್ತೇವೆ.
ಧನಂಜಯ ಕಡ್ಲೇಬಾಳ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ