ನಮ್ಮೂರು ನಮ್ಮ ಕೆರೆ ಯೋಜನೆ ತುಂಬಾ ಅಚ್ಚುಮೆಚ್ಚು: ಶ್ರದ್ದಾ ಅಮಿತ್

| Published : Jan 22 2025, 12:31 AM IST

ನಮ್ಮೂರು ನಮ್ಮ ಕೆರೆ ಯೋಜನೆ ತುಂಬಾ ಅಚ್ಚುಮೆಚ್ಚು: ಶ್ರದ್ದಾ ಅಮಿತ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಸಂಸ್ಥೆಯಿಂದ 731ನೇ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆ ಅಭಿವೃದ್ಧಿ ಪಡಿಸಿ ನಂತರ ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿ, ರಾಜ್ಯಾದ್ಯಂತ ಅನೇಕ ಕೆರೆಗಳು ಹೂಳು ಬಿದ್ದುರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತಿದೆ. ನಮ್ಮ ಪೂರ್ವಜರು ನಮಗೆ ಬಿಟ್ಟು ಕೊಟ್ಟಿರುವ ಕೆರೆ, ಪರಿಸರವನ್ನು ನಾವುಗಳು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ನಮ್ಮೂರು ನಮ್ಮ ಕೆರೆ ಯೋಜನೆ ತುಂಬಾ ಅಚ್ಚುಮೆಚ್ಚು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಹಾಗೂ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಕಾರ್ಯ ನಿರ್ವಹಣಾಧಿಕಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟಿ ಶ್ರದ್ದಾ ಅಮಿತ್ ಹೇಳಿದರು.

ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಸಂಸ್ಥೆಯಿಂದ 731ನೇ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆ ಅಭಿವೃದ್ಧಿ ಪಡಿಸಿ ನಂತರ ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿ, ರಾಜ್ಯಾದ್ಯಂತ ಅನೇಕ ಕೆರೆಗಳು ಹೂಳು ಬಿದ್ದುರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತಿದೆ. ನಮ್ಮ ಪೂರ್ವಜರು ನಮಗೆ ಬಿಟ್ಟು ಕೊಟ್ಟಿರುವ ಕೆರೆ, ಪರಿಸರವನ್ನು ನಾವುಗಳು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲೆಯಲ್ಲಿನ ಕೆರೆಗಳ ಅಭಿವೃದ್ಧಿಗೆ ಪಣತೊಟ್ಟ ಸಂಸ್ಥೆ ವತಿಯಿಂದ ಈಗಾಗಲೇ 44 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅತಿ ಕಡಿಮೆ ಹಣದಲ್ಲಿ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಸಂಸ್ಥೆ ವತಿಯಿಂದ ಕೆರೆ ಹೂಳೆತ್ತುವ ಕೆಲಸ ಮಾಡಲಾಗುತ್ತಿದೆ. ಸರಿಸುಮಾರು 1 ಎಕರೆಗೆ 1 ಲಕ್ಷ ರು. ಖರ್ಚಾಗುತ್ತದೆ ಎಂದರು.

ನದಿ, ಕೆರೆ, ಕಟ್ಟೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ನೀರಲ್ಲಿ ಹೂವು, ಹರಿಸಿನ ಕುಂಕುಮ, ಗಂಧದ ಕಡ್ಡಿ ಸೇರಿದಂತೆ ಪೂಜಾ ಸಾಮಾಗ್ರಿಗಳನ್ನು ಬಿಡುವ ಪ್ರೌವೃತ್ತಿ ಹೊಂದಿದ್ದಾರೆ. ಇದರಿಂದ ನೀರು ಮಲಿನಗೊಳ್ಳುತ್ತದೆ. ಇನ್ನು ಮುಂದಾದರೂ ನೀರಿಗೆ ತ್ಯಾಜ್ಯಗಳನ್ನು ಬಿಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ ಮಾತನಾಡಿ, ಶ್ರೀಕ್ಷೇತ್ರದವರು ಪುಟ್ಟ ಗ್ರಾಮವನ್ನು ಗುರುತಿಸಿ ಕೆರೆ ಅಭಿವೃದ್ಧಿ ಪಡಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸುತ್ತಿರುವ ಕಾರ್ಯ ಶ್ಲಾಘನೀಯ. ಕೆರೆಯನ್ನು ಗ್ರಾಮಸ್ಥರು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.

ಈ ವೇಳೆ ಗ್ರಾಮದ ಶ್ರೀ ಸೋಮೇಶ್ವರ ಕನ್ನಡ ಯುವಕರ ಸಂಘ ಹಾಗೂ ಕೆರೆ ಸಮಿತಿ ಅಧ್ಯಕ್ಷ ಹೊಂಬಾಳೇಗೌಡ, ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ಗಾಪಂ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ನಿರ್ದೇಶಕ ಮುರಳೀಧರ್, ಕ್ಷೇತ್ರ ಯೋಜನಾಧಿಕಾರಿ ಗಣಪತಿ ಭಟ್ ಸೇರಿದಂತೆ ಇತರರು ಇದ್ದರು.