ದ್ವೇಷˌಅಸೂಯೆ ತೊರೆದು ಪ್ರೀತಿಯಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕು.: ಮಹಾದೇವ ಸ್ವಾಮೀಜಿ

| Published : Dec 17 2024, 01:00 AM IST

ದ್ವೇಷˌಅಸೂಯೆ ತೊರೆದು ಪ್ರೀತಿಯಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕು.: ಮಹಾದೇವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದ್ವೇಷ ಅಸೂಯೆಯನ್ನು ತೊರೆದು ಪ್ರೀತಿಯಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕು.

ಶ್ರೀ ಕರವೀರಭದ್ರೇಶ್ವರ ಪುರಾಣ । ಪ್ರೀತಿಯಿಂದ ಎಲ್ಲರ ಮನಸ್ಸು ಗೆಲ್ಲಬೇಕು

ಕನ್ನಡಪ್ರಭ ವಾರ್ತೆ ಯಲಬುರ್ಗಾ

ದ್ವೇಷˌಅಸೂಯೆಯನ್ನು ತೊರೆದು ಪ್ರೀತಿಯಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕು. ಅಂದಾಗ ಮಾತ್ರ ಪ್ರತಿಯೊಬ್ಬರ ಜೀವನ ಪಾವನವಾಗುತ್ತದೆ ಎಂದು ಕುಕನೂರಿನ ಮಹಾದೇವ ಸ್ವಾಮೀಜಿ ಹೇಳಿದರು.ತಾಲೂಕಿನ ಕರಮುಡಿ ಗ್ರಾಮದ ಶ್ರೀ ಕರವೀರಭದ್ರೇಶ್ವರ ಪುರಾಣದ ಮೂರನೇ ದಿನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜಮುಖಿ ಜೀವನ ನಡೆಸುವುದರ ಜತೆಗೆ ನೆರೆಹೊರೆಯವರೊಂದಿಗೆ ಮಧುರ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುವ ಮೂಲಕ ಸಾಮರಸ್ಯದಿಂದ ಬದುಕುಬೇಕು ಎಂದರು.ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಕಟುಸತ್ಯದ ಮರ್ಮವನ್ನು ಅರಿಯಬೇಕಾದ ಅಗತ್ಯತೆ ಇದೆ. ಹಣ, ಅಧಿಕಾರ, ಅಂತಸ್ತಿನಿಂದ ಜೀವನದಲ್ಲಿ ತೃಪ್ತಿ ಸಿಗುವುವದಿಲ್ಲ. ಭಕ್ತಿಯಿಂದ ಸನ್ಮಾರ್ಗದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಸಂಸ್ಕಾರಯುತ ಬಾಳನ್ನು ಅನುಸರಿಸಿದಾಗ ಜೀವನ ಬಂಧುರವಾಗುತ್ತದೆ ಎಂದು ಹೇಳಿದರು.ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮೀಜಿ ಹಾಗೂ ವೀರೇಶ್ವರ ಶಾಸ್ತ್ರಿಗಳು ಮಾತನಾಡಿ, ಗ್ರಾಮದ ಸಕಲ ಸದ್ಭಕ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ಹಾಗಾಗಿ ಸಹಿಷ್ಣುತೆಯ ತವರೂರಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಯಶಸ್ವಿಗೊಳ್ಳುತ್ತವೆ ಎಂದು ಶ್ಲಾಘಿಸಿದರು.ಮಲ್ಲಯ್ಯಸ್ವಾಮಿ ಶಿವಕುಮಾರ ಸ್ವಾಮಿ ಸಮ್ಮುಖ ವಹಿಸಿದ್ದರು. ಪ್ರವಚನಕಾರರಾದ ವೀರೇಶ ಶಾಸ್ತ್ರಿಗಳು ಕಲ್ಯಾಣಕುಮಾರ ಬಟನಹಳ್ಳಿ ಹಾಗೂ ವೀರೇಶ್ವರ ಶಾಸ್ತ್ರೀಗಳು ಗಜಗಿನಹಾಳ ಮಾತನಾಡಿದರು.ಈ ಸಂದರ್ಭ ರಾಮಣ್ಣ ಪ್ರಭಣ್ಣನವರ, ಕಳಕಪ್ಪ ಕುರಿ, ಶಿವಪುತ್ರಪ್ಪ ಮಲಿಗೋಡದ, ಭೀಮಪ್ಪ ಹವಳಿ, ಡಾ. ಮಂಜುನಾಥ ಕುಕನೂರ, ಶರಣಪ್ಪ ಕೆಂಚರಡ್ಡಿ, ಬಿ.ಎಂ. ಪಾಟೀಲ, ಹನುಮಂತ ಕಾಳಿ, ಟ್ರಸ್ಟ್‌ ಕಮಿಟಿ ಅಧ್ಯಕ್ಷ ಶರಣಪ್ಪಗೌಡ ಪೋ.ಪಾಟೀಲ, ವೀರಣ್ಣ ನಿಂಗೋಜಿ, ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ, ಸದಸ್ಯರಾದ ರಾಮಣ್ಣ ಹೊಕ್ಕಳದ, ಮರ್ಧಾನಸಾಬ ಮುಲ್ಲಾ, ಶರಣಪ್ಪ ಮುಗಳಿ, ಬಸವರಾಜ ಬಲಕುಂದಿ, ಹುಚ್ಚುಸಾಬ ಬಡಿಗೇರ, ಮುತ್ತಣ್ಣ ಗೊಂಗಡಶೆಟ್ಟಿ, ಗಂಗಪ್ಪ ಹವಳಿ, ಡಾ. ಗೌಡಪ್ಪ ಬಲಕುಂದಿ, ಉಮೇಶ ಕುಕನೂರ, ಡಾ. ಕಾಶಯ್ಯ ನಂದಿಕೋಲ, ಬಸವರಾಜ ಉಳ್ಳಾಗಡ್ಡಿ, ಮಲ್ಲೇಶಗೌಡ ಪೋ.ಪಾಟೀಲ, ಮಂಜುನಾಥ ನಿಂಗೋಜಿ, ವೀರಣ್ಣ ಮಾನಶೆಟ್ಟಿ, ವೀರಣ್ಣ ಹೆಂಡಿಗೇರಿ, ಗುರಯ್ಯ ಹಿರೇಮಠ, ಶ್ಯಾಮೀದಸಾಬ ಮುಲ್ಲಾ, ಬಾಬು ನಾಯ್ಕರ ಮತ್ತಿತರರು ಇದ್ದರು. ಸ್ಥಳೀಯ ಪ್ರಾಥಮಿಕ ಶಾಲಾ ಮಕ್ಕಳ ಕೋಲಾಟ ಹಾಗೂ ಲೇಜಿಮ್‌ ನಡೆದವು. ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರಸ್ವಾಮಿಗಳ ತುಲಾಭಾರವನ್ನು ಶರಣಪ್ಪಗೌಡ ಪೋ.ಪಾಟೀಲ ಹಾಗೂ ಲಕ್ಷ್ಮೀದೇವಿ ಪೋ.ಪಾಟೀಲ ತಮ್ಮ ಸ್ವಗ್ರಹದಲ್ಲಿ ನೆರವೇರಿಸಿದರು.