ಸಾರಾಂಶ
ಗದಗ: ಭಾರತದ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಾವು ಗೌರವಿಸಬೇಕು. ಯುವಕರು 18 ವರ್ಷ ತುಂಬಿದ ಕೂಡಲೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಉತ್ಸುಕರಾಗಿ ಇರಬೇಕು ಎಂದು ಲಕ್ಕುಂಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೆಂಚಪ್ಪ ಪೂಜಾರಿ ಹೇಳಿದರು.
ಅವರು ಗದುಗಿನ ಎ ಎಸ್ ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಹಮ್ಮಿಕೊಂಡ ಹೊಸದಾಗಿ ಮತ ಚಲಾಯಿಸಲು ಸಿದ್ಧರಾಗಿರುವ 18 ವರ್ಷ ಮೇಲ್ಪಟ್ಟ ಯುವಕ ಯುವತಿಯರ ನೋಂದಣಿ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಎನ್.ಎಸ್. ಎಸ್. ಕಾರ್ಯಕ್ರಮ ಅಧಿಕಾರಿ ಬಾಹುಬಲಿ ಜೈನರ ಮಾತನಾಡಿ, ಪ್ರಜಾಸತ್ತಾತ್ಮಕ ಭಾರತದಲ್ಲಿ, ಪ್ರತಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ. ಹದಿನೆಂಟು ವರ್ಷ ತುಂಬಿದ ಎಲ್ಲರಿಗೂ ಮತದಾನದ ಹಕ್ಕಿದೆ. ಹಲವಾರು ಅಭ್ಯರ್ಥಿಗಳು ಚುನಾವಣೆಯನ್ನು ಬಯಸುತ್ತಿದ್ದಾರೆ. ಅವರು ಮನೆಯಿಂದ ಬಾಗಿಲಿಗೆ ಚಲಿಸುತ್ತಾರೆ. ಅವರು ಸಾರ್ವಜನಿಕ ಸಭೆಗಳನ್ನು ನಡೆಸುತ್ತಾರೆ ಮತ್ತು ತಮ್ಮ ಪಕ್ಷಗಳ ಕಾರ್ಯಕ್ರಮಗಳನ್ನು ವಿವರಿಸುತ್ತಾರೆ. ಅಂತವರು ಹೆಚ್ಚಿನ ಮತಗಳನ್ನು ಪಡೆದರೆ, ಅವರು ಗೆಲ್ಲುತ್ತಾರೆ. ಆದರೆ ಅವರು ಮಾಡದಿದ್ದರೆ, ಅವರು ಕಳೆದುಕೊಳ್ಳುತ್ತಾರೆ. ಜನರನ್ನು ಮತ ಚಲಾಯಿಸುವಂತೆ ಪ್ರೇರೇಪಿಸಬೇಕಾದ ದಿನಗಳು ಹೋಗಿವೆ. ಸಾರ್ವತ್ರಿಕ ಚುನಾವಣೆಯ ಮತ ಹಂಚಿಕೆಯು ಹಿಂದಿನ ಚುನಾವಣೆಗಿಂತ ವಿಭಿನ್ನವಾಗಿದೆ ತಮ್ಮ ಮಾತುಗಳಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನ ಮ್ಯಾನೇಜರ್, ಲಕ್ಕುಂಡಿ ಗ್ರಾಮ ಪಂಚಾಯಿತಿಯ ಸದಸ್ಯರು, ಎನ್.ಎಸ್.ಎಸ್. ಘಟಕದ ಸ್ವಯಂಸೇವಕ ಸೇವಕೀಯರು ಉಪಸ್ಥಿತರಿದ್ದರು. ಲಕ್ಕುಂಡಿಯ ಬೀದಿಬೀದಿಗಳಲ್ಲಿ ಹೋಗಿ ಮತದಾನದ ಮಹತ್ವ, ಹೊಸ ವೋಟರ್ ಐಡಿ ಬಗ್ಗೆ ಮಾಹಿತಿಯನ್ನು ನೀಡಲಾಯಿತು.