ನಮಗೆ ಇಂದು ಹಸಿರು ರಾಜಕೀಯ ಬೇಕಾಗಿದೆ: ಡಾ. ಜೆನ್ಸ್ ಮಾರ್ಕ್ವಾಡ್

| Published : Mar 23 2025, 01:35 AM IST

ನಮಗೆ ಇಂದು ಹಸಿರು ರಾಜಕೀಯ ಬೇಕಾಗಿದೆ: ಡಾ. ಜೆನ್ಸ್ ಮಾರ್ಕ್ವಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆಯ ಅಂಗಸಂಸ್ಥೆಗಳಾದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಡಿಪಾರ್ಟ್‌ಮೆಂಟ್ ಜಿಯೋಪಾಲಿಟಿಕ್ಸ್ ಆ್ಯಂಡ್ ಇಂಟರ್ನ್ಯಾಷನಲ್ ರಿಲೇಶನ್ಸ್ (ಡಿಜಿಐಆರ್) ಇವುಗಳ ಜಂಟಿ ಆಶ್ರಯದಲ್ಲಿ ‘ಜಿಯೋಪಾಲಿಟಿಕ್ಸ್ ಆ್ಯಂಡ್ ಪೀಸ್ ಇನ್ ದಿ ಆಂಥ್ರೊಪೊಸೀನ್‌’, ‘ಆಂಥ್ರೊಪೊಸೀನ್‌ನಲ್ಲಿ ಭೂರಾಜಕೀಯ ಮತ್ತು ಶಾಂತಿ’ ಕುರಿತು ಜರ್ಮನಿಯ ಡಾರ್ಮ್‌ಸ್ಟಾಡ್ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಜೆನ್ಸ್ ಮಾರ್ಕ್ವಾಡ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲನಮ್ಮ ಮನುಷ್ಯ ಕೇಂದ್ರಿತ ಜೀವನ ದೃಷ್ಟಿಕೋನವು ಹವಾಮಾನ ತುರ್ತುಸ್ಥಿತಿಗೆ ಕಾರಣವಾಗಿದೆ. ಇಂದು ನಮಗೆ ಬೇಕಾಗಿರುವುದು ಹಸಿರು ರಾಜಕೀಯ ಸಿದ್ಧಾಂತ ಎಂದು ಜರ್ಮನಿಯ ಡಾರ್ಮ್‌ಸ್ಟಾಡ್ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಜೆನ್ಸ್ ಮಾರ್ಕ್ವಾಡ್ ಹೇಳಿದರು.ಅವರು ಇಲ್ಲಿನ ಮಾಹೆಯ ಅಂಗಸಂಸ್ಥೆಗಳಾದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಡಿಪಾರ್ಟ್‌ಮೆಂಟ್ ಜಿಯೋಪಾಲಿಟಿಕ್ಸ್ ಆ್ಯಂಡ್ ಇಂಟರ್ನ್ಯಾಷನಲ್ ರಿಲೇಶನ್ಸ್ (ಡಿಜಿಐಆರ್) ಇವುಗಳ ಜಂಟಿ ಆಶ್ರಯದಲ್ಲಿ ‘ಜಿಯೋಪಾಲಿಟಿಕ್ಸ್ ಆ್ಯಂಡ್ ಪೀಸ್ ಇನ್ ದಿ ಆಂಥ್ರೊಪೊಸೀನ್‌’, ‘ಆಂಥ್ರೊಪೊಸೀನ್‌ನಲ್ಲಿ ಭೂರಾಜಕೀಯ ಮತ್ತು ಶಾಂತಿ’ ಕುರಿತು ಮಾತನಾಡಿದರು.ಅವರು ತಮ್ಮ ಉಪನ್ಯಾಸದಲ್ಲಿ ಮಾನವ ಕೇಂದ್ರಿತ ಬೆಳವಣಿಗೆಯ ಮಾದರಿಯ ಹುಟ್ಟು ಮತ್ತು ವಿಕಸನವನ್ನು ಶೋಧಿಸುತ್ತಾ, ಇದು ಈಗ ಗಂಭೀರ ಹವಾಮಾನ ಬಿಕ್ಕಟ್ಟಿಗೆ ಕಾರಣವಾಗಿದೆ. ಇದು ಜಾಗತಿಕ ರಾಜಕೀಯದಲ್ಲಿ ಶಾಂತಿಯ ಅಡ್ಡಿಗೆ ಕಾರಣವಾಗಿದೆ. ತ್ವರಿತ ಕೈಗಾರಿಕೀಕರಣವು ಹವಾಮಾನದ ಮೇಲೆ ಮನುಷ್ಯ ಚಟುವಟಿಕೆಗಳ ಪ್ರಭಾವದ ವೇಗವನ್ನು ಅಧಿಕಗೊಳಿಸಿದೆ ಹಾಗೂ ಇದು ತಾಂತ್ರಿಕ ಸರ್ವಾಧಿಕಾರಕ್ಕೂ ಕಾರಣವಾಗಿದೆ. ಈ ಬಿಕ್ಕಟ್ಟನ್ನು ಎದುರಿಸಲು ನಮಗೆ ಹಸಿರು ರಾಜಕೀಯ ಸಿದ್ಧಾಂತ ಮತ್ತು ಆಮೂಲಾಗ್ರ ಪ್ರಜಾಪ್ರಭುತ್ವದ ಅಗತ್ಯವಿದೆ ಎಂದು ಅವರು ಹೇಳಿದರು.ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಇಂದಿನ ಜಾಗತಿಕ ಬೆಳವಣಿಗೆಗಳನ್ನು ನೋಡಿದರೆ ಇಂದು ಜಗತ್ತು ವಾಸ್ತವಿಕತೆ ಮತ್ತು ಆದರ್ಶವಾದ ಎರಡರಿಂದಲೂ ಅಸಂಗತೆಯ ಕಡೆಗೆ ಸಾಗುತ್ತಿರುವಂತೆ ತೋರುತ್ತಿದೆ ಎಂದರು.ಡಿಜಿಐಆರ್ ಮುಖ್ಯಸ್ಥೆ ಪ್ರೊ. ವಿಜಯಲಕ್ಷ್ಮೀ, ಹವಾಮಾನ ಬಿಕ್ಕಟ್ಟು ಮತ್ತು ಶಾಂತಿ ಭೂರಾಜಕೀಯದಲ್ಲಿ ಸಂಪರ್ಕ ಹೊಂದಿವೆ ಎಂದು ಹೇಳಿದರು.ಡಾ.ಧನಶ್ರೀ ಜಯರಾಮ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ಶ್ರಾವ್ಯ ಬಾಸ್ರಿ ವೈದಿಕ ಶಾಂತಿ ಮಂತ್ರ ಹಾಡಿದರು.