ಸಾರಾಂಶ
ಚನ್ನಪಟ್ಟಣ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾಗಿ ಆಯ್ಕೆಯಾದವರು ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿಲ್ಲವಾದರೆ ಅವರು ಜನರಿಂದ ತಿರಸ್ಕರಿಸಲ್ಪಡುತ್ತಾರೆ ಎಂಬುದು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಾಬೀತಾಗಲಿದೆ ಎಂದು ಮಾಜಿ ಶಾಸಕ ಕೆ.ರಾಜು ಹೇಳಿದರು.
-ಮುನಿಯಪ್ಪನದೊಡ್ಡಿಯಲ್ಲಿ ಯೋಗೇಶ್ವರ್ ಪರ ಮಾಜಿ ಶಾಸಕ ರಾಜು ಮತಯಾಚನೆ
ಚನ್ನಪಟ್ಟಣ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾಗಿ ಆಯ್ಕೆಯಾದವರು ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿಲ್ಲವಾದರೆ ಅವರು ಜನರಿಂದ ತಿರಸ್ಕರಿಸಲ್ಪಡುತ್ತಾರೆ ಎಂಬುದು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಾಬೀತಾಗಲಿದೆ ಎಂದು ಮಾಜಿ ಶಾಸಕ ಕೆ.ರಾಜು ಹೇಳಿದರು.ತಾಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಮತಯಾಚಿಸಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿ ಆಯ್ಕೆಯಾದ ಶಾಸಕರು ಜನರ ಕಷ್ಟ ಕೇಳಲಿಲ್ಲ, ಬಡವರಿಗೆ ಆಸರೆಯಾಗದಿರುವ ಬಗ್ಗೆ ಕ್ಷೇತ್ರದ ಜನರಲ್ಲಿ ಅಸಮಾಧಾನವಿದೆ. ಜನತೆಯೇ ನಮ್ಮ ಜೊತೆ ನಿಲ್ಲದವರನ್ನು ನಾವು ಏಕೆ ಆಯ್ಕೆ ಮಾಡಬೇಕೆಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಬಡವರಿಗೆ ಸಹಾಯ ಮಾಡಲು ಆಗದಿದ್ದವರು ಜನರ ಬಳಿ ಮತ ಕೇಳುವ ಹಕ್ಕು ಕಳೆದು ಕೊಂಡಿದ್ದಾರೆ ಎಂದು ಎಚ್ಡಿಕೆ ಹೆಸರೇಳದೆ ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದರು. ಜನರಿಗೆ ಕೊಟ್ಟ ಮಾತಿನಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿಯೋಜನೆ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದರು. ಜಿಲ್ಲೆಯಲ್ಲಿ ಸುಮಾರು ಶೇ.೯೯ರಷ್ಟು ಫಲಾನುಭವಿಗಳು ಪ್ರಚಾರದ ವೇಳೆ ಉತ್ತಮ ಯೋಜನೆಗಳು ನಮಗೆ ನೆರವಾಗಿವೆ ಎಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಜನರು ಕಾಂಗ್ರೆಸ್ ಪರ ಇದ್ದು ಯೋಗೇಶ್ವರ್ ಗೆಲುವು ಸಾಧಿಸಲಿದ್ದಾರೆ ಎಂದರು.ಈ ವೇಳೆ ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್‌ಗೌಡ, ಮಾಜಿ ಅಧ್ಯಕ್ಷ ಪುಟ್ಟಸಿದ್ದೇಗೌಡ, ಗ್ರಾಪಂ ಸದಸ್ಯರಾದ ಸ್ವಾಮಿ, ಕೆಂಚೇಗೌಡ, ವೆಂಕಟೇಶ್, ಮುಖಂಡರಾದ ಜಯಕರ್ನಾಟಕ ರವಿ, ಮಹದೇವ್, ಅನಿಶ್, ವಡೇರಹಳ್ಳಿ ಚಂದ್ರು, ರಮೇಶ್ ಸೇರಿದಂತೆ ನೂರಾರು ಮುಖಂಡರು ಮನೆಮನೆ ಪ್ರಚಾರ ನಡೆಸಿದರು.
ಪೊಟೋ೮ಸಿಪಿಟಿ೭: ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ಕೆ.ರಾಜು, ಇತರರು ಚುನಾವಣಾ ಪ್ರಚಾರ ಮಾಡಿದರು.