ಸಾರಾಂಶ
ಗಲಾಟೆ ಮಾಡಿ ಅನುದಾನ ತರಬೇಕಾಗಿದೆ
ಕನ್ನಡಪ್ರಭ ವಾರ್ತೆ ಗುಬ್ಬಿ
ನಾನು ನಮ್ಮ ಕ್ಷೇತ್ರಕ್ಕೆ ಕೂಗಾಡಿ ಗಲಾಟೆ ಮಾಡಿ ಹಣ ತಂದು ಕೆಲಸ ಮಾಡುವ ಪರಿಸ್ಥಿತಿ ಬಂದಿದೆ ಎಂದು ತುರುವೇಕೆರೆ ಶಾಸಕ ಎಂ .ಟಿ .ಕೃಷ್ಣಪ್ಪ ತಿಳಿಸಿದರುತಾಲೂಕಿನ ಕಲ್ಲೂರು ಗ್ರಾಮದ ಕೆರೆಗೆ ಗಂಗಾ ಪೂಜೆ ಹಾಗೂ ಭಾಗನ ಅರ್ಪಿಸಿ ಪೂಜೆ ಸಲ್ಲಿಸಿ ನಂತರ ಚಿಕ್ಕ ಕಲ್ಲೂರುನ ನೂತನವಾಗಿ ನಿರ್ಮಿಸಿರುವ1.50 ಕೋಟಿ ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದ ರೈತರು, ಸಾರ್ವಜನಿಕರಿಗೆ ಸಂಚಾರ ಮಾಡಲು ಅನುಕೂಲವಾಗಿದೆ. ಸಿ ಎಸ್ ಪುರದಲ್ಲಿ ದೇವೇಗೌಡರ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಇನ್ನೂ ಅಭಿವೃದ್ಧಿ ಕೆಲಸಗಳನ್ನು ಮಾಡಲು ಈ ಸರ್ಕಾರ ಸರಿಯಾಗಿ ಅನುದಾನಗಳನ್ನು ನೀಡುತ್ತಿಲ್ಲ ಎಂದು ಇದು ಕೆಟ್ಟ ಸರ್ಕಾರ ವಾಗ್ದಾಳಿ ನಡೆಸಿದರು.ಕೆರೆಕಟ್ಟೆಗಳು ರೈತರ ಜೀವನಾಡಿಯಾಗಿದ್ದು ಕೆರೆಕಟ್ಟೆಗಳಲ್ಲಿ ಹೇಮಾವತಿ ನೀರು ಹರಿದು ಕೆರೆ ತುಂಬಿ ಕೋಡಿ ಬಿದ್ದಿರುವುದು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದರು. ಈ ಸಂದರ್ಭದಲ್ಲಿ ಇಓ ಶಿವಪ್ರಕಾಶ್, ಪಿಡಿಒ ಪ್ರಶಾಂತ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜುಲೇಖಾಭಿ ಯೂಸುಫ್, ಉಪಾಧ್ಯಕ್ಷೆ ಸುಮಿತ್ರ ಶಿವಯ್ಯ, ಗ್ರಾಪಂ ಸದಸ್ಯರು. ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ನವೀನ್ ಕುಮಾರ್, ಮುಖಂಡರಾದ ನರಸೇಗೌಡ, ಕಲ್ಲೂರು ಮಂಜುನಾಥ್, ಸೇರಿದಂತೆ ಇತರರು ಹಾಜರಿದ್ದರು.