ಪಕ್ಷಿಗಳಿಗೆ ನಾವು ಅಪದ್ಬಾಂಧವರಾಗಬೇಕು: ರಮ್ಯ ನಿತ್ಯಾನಂದ ಶೆಟ್ಟಿ

| Published : Jan 30 2025, 12:30 AM IST

ಸಾರಾಂಶ

ಮಡಿಕೇರಿ ತಾಲೂಕಿನ ಪೆರಾಜೆ ಸಮೀಪದ ಕುಂಬಳಚೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ‘ಗುಬ್ಬಚ್ಚಿಗೂಡು’ ಹೆಸರಿನ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯ ರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪಕ್ಷಿಗಳ ಬಂಧನ ತರವಲ್ಲ. ಈ ಭೂಮಿಯ ಮೇಲೆ ಬದುಕುವ ಪ್ರತಿಯೊಂದು ಜೀವಿಗಳಿಗೂ ಬದುಕುವ ಹಕ್ಕಿದೆ, ಪಕ್ಷಿಗಳ ಪಾಲಿಗೆ ನಾವೆಲ್ಲರೂ ಆಪತ್ಬಾಂಧವರಾಗಬೇಕು ಎಂದು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಹೇಳಿದರು.

ತಾಲೂಕಿನ ಪೆರಾಜೆ ಸಮೀಪದ ಕುಂಬಳಚೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಡೆದ ‘ಗುಬ್ಬಚ್ಚಿಗೂಡು’ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯ ರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈ ಸಂದರ್ಭ ಪ್ರಾತ್ಯಕ್ಷಿಕೆ ನೀಡಿದ ಅವರು, ಪಕ್ಷಿಗಳಿಗೆ ನೀರು, ಆಹಾರ ಇಡುವ ಕ್ರಮ ಹಾಗೂ ಕೃತಕ ಗೂಡುಗಳನ್ನು ಕಟ್ಟುವಾಗ ವಹಿಸಬೇಕಾದ ಜವಾಬ್ದಾರಿ ವಿವರಿಸಿದರು.ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬಣ್ಣಕ್ಕೆ ಮರುಳಾಗಿ ಪಕ್ಷಿಗಳ ಪಾಲಿಗೆ ಕಂಟಕರಾಗದಿರಿ. ಪಕ್ಷಿಗಳ ಪಾಲಿಗೆ ನಾವು ಕಂಟಕರಾಗುವುದು ಸರಿಯಲ್ಲ ಎಂದು ಹೇಳಿದರು.

ಶಿಕ್ಷಕರಾದ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ರಾಜು ಎಚ್ ಆರ್ ವಂದಿಸಿದರು. ಇದು ಗುಬ್ಬಚ್ಚಿಗೂಡು 303 ನೇ ಉಚಿತ ಕಾರ್ಯಾಗಾರವಾಗಿತ್ತು.

ಕುಶಾಲನಗರ: ಕ್ಯಾಮರಾ ಕಾರ್ಯಾಗಾರ

ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕುಶಾಲನಗರದಲ್ಲಿ ಕ್ಯಾನನ್ ಕ್ಯಾಮರಾ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರಕ್ಕೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಚಾಲನೆ ನೀಡಿದರು.ಛಾಯಾಚಿತ್ರಗ್ರಾಹಕ ಸಂಘದ ಜಿಲ್ಲೆಯ ಸದಸ್ಯರು ಕಾರ್ಯಕರ್ತರಲ್ಲಿ ಪಾಲ್ಗೊಂಡಿದ್ದರು.

ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಯುವ ಉದ್ಯಮಿ‌ ವೆಂಕಟಾಚಲ ವಿಶ್ವನಾಥನ್, ಕಾರ್ಯಾಗಾರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.ಸಂಘದ ಜಿಲ್ಲಾಧ್ಯಕ್ಷ ಎ.ಆರ್.ಮಹದೇವಪ್ಪ, ಶ್ರೀನಿಧಿ, ರೋಷನ್‌, ಲವಕುಮಾರ್, ಕೆ ಎಸ್ ನಾಗೇಶ್ ಇದ್ದರು.