ದೇವತಾ ಕಾರ್ಯಗಳಿಗೆ ಸಹಕರಿಸಬೇಕು: ವಿಜಯಕುಮಾರ್

| Published : Apr 24 2025, 12:01 AM IST

ದೇವತಾ ಕಾರ್ಯಗಳಿಗೆ ಸಹಕರಿಸಬೇಕು: ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಧರ್ಮದ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು ನೆಮ್ಮದಿ ನೀಡುವ ತಾಣಗಳಾಗಿದ್ದು, ಸರ್ವರು ದೇವತಾ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ನಗರೇನಹಳ್ಳಿ ಪಂಚಪೀಠ ಚಕ್ರಚೌಡೇಶ್ವರಿಯ ಪ್ರಧಾನ ಅರ್ಚಕ ವಿಜಯಕುಮಾರ್ ಹೇಳಿದರು.

ಸೂಲಿಬೆಲೆ: ಹಿಂದೂ ಧರ್ಮದ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು ನೆಮ್ಮದಿ ನೀಡುವ ತಾಣಗಳಾಗಿದ್ದು, ಸರ್ವರು ದೇವತಾ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ನಗರೇನಹಳ್ಳಿ ಪಂಚಪೀಠ ಚಕ್ರಚೌಡೇಶ್ವರಿಯ ಪ್ರಧಾನ ಅರ್ಚಕ ವಿಜಯಕುಮಾರ್ ಹೇಳಿದರು.

ಸೂಲಿಬೆಲೆ ಹೋಬಳಿ ದೊಡ್ಡಹರಳಗೆರೆ ಗ್ರಾಮಪಂಚಾಯತ್ ವ್ಯಾಪ್ತಿಯ ನಗರೇನಹಳ್ಳಿ ಗ್ರಾಮದಲ್ಲಿ ನೆಲಸಿರುವ ಚಕ್ರ ಚೌಡೇಶ್ವರಿ ಮತ್ತು ಮಹಾಕಾಳಿ ಜಾತ್ರಾಮಹೋತ್ಸವದಲ್ಲಿ ಮಾತನಾಡಿದರು. ಮಂಗಳವಾರ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ ಹಾಗೂ ಅಗ್ನಿಕೊಂಡ ಪೂಜೆ, ಕೀಲುಕುದುರೆ ವಾದ್ಯ ಸಮೇತವಾಗಿ ತಮಟೆ ವಾದ್ಯ, ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮ ದೇವತೆಗಳಾದ ಚಕ್ರಚೌಡೇಶ್ವರಿ, ಮುನೇಶ್ವರಸ್ವಾಮಿ, ಮಹೇಶ್ವರಮ್ಮ, ಮಾರಮ್ಮ ಹಾಗೂ ಕರಗದಮ್ಮ ದೇವತೆಗಳಿಗೆ ದೀಪೋತ್ಸವ ಅದ್ಧೂರಿಯಾಗಿ ನಡೆಯಿತು, ಸಾವಿರಾರು ಭಕ್ತರು ದೇವತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದರು.

.