ಮಕ್ಕಳಿಗೆ ನಾವು ಮೊದಲು ಸಂಸ್ಕಾರ ನೀಡಬೇಕು: ಡಾ ನಾ ಸೋಮೇಶ್ವರ

| Published : Jan 14 2024, 01:35 AM IST / Updated: Jan 14 2024, 03:47 PM IST

ಸಾರಾಂಶ

ಹಿರಿಯ ವಿದ್ವಾಂಸ ಡಾ.ನಾ. ಸೋಮೇಶ್ವರ ಸಲಹೆ- ಶೇಷಾದ್ರಿಪುರಂ ಕಾಲೇಜು ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕುವೆಂಪುರಂಗ ಮಂದಿರದಲ್ಲಿ 9ನೇ ವಾರ್ಷಿಕೋತ್ಸವ ಆಯೋಜಿಸಿತ್ತು.ಮುಖ್ಯ ಅತಿಥಿಯಾಗಿದ್ದ ವಿದ್ವಾಂಸ ಡಾ.ನಾ. ಸೋಮೇಶ್ವರ ಮಾತನಾಡಿ, ಮಕ್ಕಳಿಗೆ ನಾವು ಮೊದಲು ಸಂಸ್ಕಾರ ನೀಡಬೇಕು. 

ಪಿಯುಸಿ ಮುಗಿಸಿದ ನಂತರ‌ಮಕ್ಕಳಿಗೆ ಮುಂದೇನು ಎಂಬ ಯೋಚನೆ ಇರುತ್ತದೆ. ಆದರೆ ನಿರೀಕ್ಷಿಸಿದ ಕೆಲಸ ಸಿಗುವುದು ಕಷ್ಟ. ಭಾರತೀಯ ಸೇನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಎಂದು ಸಲಹೆ ನೀಡಿದರು.

ಅದರಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಯುವಕರು ನಮ್ಮ ನೆಲದಲ್ಲೇ ಇದ್ದು, ಇಲ್ಲೇ ವಿದ್ಯಾಭ್ಯಾಸ ಮಾಡಿ, ಇಲ್ಲೇ‌ಬದುಕು ಕಟ್ಟಿಕೊಂಡುಇಲ್ಲಿನ ಸಂಸ್ಕಾರವನ್ನು ಎಲ್ಲೆಡೆ ಪಸರಿಸಿ ಎಂಬ ಆಶಯ ವ್ಯಕ್ತ‌ಪಡಿಸಿದರು. ಜೊತೆಗೆ ತಾಯಿ ತಾಯಿ ನೆಲ ಋಣ ತೀರಿಸಿ, ಸವ್ಯಸಾಚಿಗಳಾಗಿ ದೇಶಕ್ಕೆ‌, ನಾಡಿಗೆ ‌ಹೆಮ್ಮೆ ತನ್ನಿ ಎಂಬ ಕಿವಿ‌ಮಾತು ಹೇಳಿದರು.

ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ‌ಪ್ರಧಾನ ಕಾರ್ಯದರ್ಶಿ ಡಾ. ವೂಡೇಪಿ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

2023-24ನೇ ಸಾಲಿನ ಆತ್ಯುತ್ತಮ ಎನ್ಎಸ್ಎಸ್‌ ಸ್ವಯಂ ಸೇವಕಿ ಪ್ರಶಸ್ತಿಯನ್ನು ಪುಷ್ಪಲತಾ ಮತ್ತು ಸ್ವಯಂಸೇವಕ ಪ್ರಶಸ್ತಿಯನ್ನು ಮಂಜೇಶ್‌ ಗೌಡ ಅವರಿಗೆ ಹಾಗೂ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಶಾನು ಕುಮಾರ್‌ ಮತ್ತು ಅನುಷ್ಕ ಅಕ್ಕಮ್ಮಗೆ ನೀಡಲಾಯಿತು. 2023-24ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಎ. ಅಕ್ಷತಾ ಅವರಿಗೆ ನೀಡಲಾಯಿತು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ. ಅನಂತಸ್ವಾಮಿ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಧರ್ಮದರ್ಶಿ ಕೆ. ಕೃಷ್ಣಸ್ವಾಮಿ, ಸಹ ಕಾರ್ಯದರ್ಶಿ ಎಂ.ಎಸ್‌. ನಟರಾಜು, ಆಡಳಿತ ಮಂಡಳಿ ಸದಸ್ಯರಾದ ಎಂ.ಎಲ್‌. ರವಿಶಂಕರ್‌, ಪ್ರಾಂಶುಪಾಲೆ ಪ್ರೊ. ಸೌಮ್ಯಾ ಕೆ. ಈರಪ್ಪ, ಅರ್ಚನಾ ಸ್ವಾಮಿ, ಉಪನ್ಯಾಸಕರು ಮತ್ತು ಸಿಬ್ಬಂದಿ ಇದ್ದರು.