ಸಾರಾಂಶ
ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಜಾತಿ ಮೀರಿ ವಿಶ್ವಮಾನವರಾಗಿ ಬದುಕಬೇಕು ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠ ಪಟ್ಟಾಧ್ಯಕ್ಷ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದ್ದಾರೆ.ಬುಧವಾರ ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನದಲ್ಲಿ ಮಾತನಾಡಿ, ಕಾಡುತ್ತಿರುವ ಜಾತಿಯೆಂಬ ಗೋಡೆಯನ್ನು ಕಿತ್ತು ಹಾಕಬೇಕು, ಆಗ ವಿಶ್ವ ಮಾನವರಾಗುತ್ತಾರೆ. ನಾನು ಬದಲಾದರೆ ಲೋಕ ಬದಲಾಗುತ್ತದೆ, ನಾವು ಸರಿಯಾಗಿ ಇದ್ದರೆ ಜಗತ್ತು ಸರಿಯಾ ಗುತ್ತದೆ. ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಇರಬೇಕು. ಮೌಲ್ಯಗಳನ್ನು ಬಿಡಬಾರದು ತನಗೆ ತಾನೇ ಉಪದೇಶ ಮಾಡಿ ಕೊಳ್ಳಬೇಕು. ತತ್ವಗಳನ್ನು ನಾವು ಅರ್ಥಮಾಡಿಕೊಳ್ಳಬೇಕ ಎಂದು ಹೇಳಿದರು,
ಅಹಂಕಾರ ಅಡಗಬೇಕು. ಶಾಂತಿ ಸಮಾಧಾನ ಇರಬೇಕು ಜೀವನ ಕತ್ತಲೆ ಆಗಬಾರದು ಬೆಳಕು ಆಗಬೇಕು ಎಂದು ಹೇಳಿದರು.ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಜ. ಮುಹಮ್ಮದ್ ಕುಂಇ ಸುಭದ್ರ ಕುಟುಂಬ ಸದೃಢ ಸಮಾಜ ವಿಷಯ ಕುರಿತು ಪ್ರವಚನ ಮಾಡಿ, ಬದುಕಿನ ವಿಜಯದ ಮಾರ್ಗ ಮಾನವನಂತೆ ಪುರಾತನವಾದದ್ದು, ಬದುಕಿನ ಗುರಿ ಏನು. ನಾನು ಯಾರು ಎಂದು ಅರ್ಥಮಾಡಿಕೊಳ್ಳಬೇಕು ತನ್ನನ್ನು ತಾನು ತಿಳಿಯಬೇಕು. ಮನುಷ್ಯ ಅತ್ಯಂತ ಶ್ರೇಷ್ಠ ಜೀವಿ, ಬುದ್ಧಿ , ವಿವೇಕ ಇದೆ. ಆತ್ಮದ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು. ಅಂತರಂಗದ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಬೇಕು ಎಂದು ಹೇಳಿದರು.ಸ್ವಚ್ಛ ಹೃದಯದಿಂದ ದೇವರು ಹತ್ತಿರವಾಗುತ್ತಾನೆ. ದೇವರು ಇಚ್ಛೆ ಪಡುವಂತ ಕೆಲಸ ಮಾಡಬೇಕು. ಪಶ್ಚಾತ್ತಾಪವನ್ನು ದೇವರು ಇಷ್ಟಪಡುತ್ತಾನೆ. ಪ್ರೀತಿಸಿ ಮತ್ತು ಪ್ರೀತಿಸಲ್ಪಟ್ಟರೆ ಮಾತ್ರ ಬದುಕು ಎಂದು ಹೇಳಿದರು.ಉಪವಿಭಾಗಾಧಿಕಾರಿ ಡಾ, ಕೆ.ಜಿ. ಕಾಂತರಾಜ್, ತರೀಕೆರೆ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್. ರಮೇಶ್ (ಬೈಟು). ಪುರಸಭೆ ನಾಮಿನಿ ಸದಸ್ಯ ಆದಿಲ್ ಪಾಶ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಶೇಕ್ ಜಾವಿದ್, ಮಡಿವಾಳ ಸಮಾಜದ ಅಧ್ಯ ಕ್ಷ ಎಂ. ಚಂದ್ರು, ಬಾರ್ ಅಸೋಸಿಯೇಷನ್ ಅಧ್ಯಕ್ಷ ಬಿ, ಶೇಖರ್ ನಾಯ್ಕ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ. ದಾದಾಪೀರ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ಉಮಾದೇವಿ ದಯಾ ನಂದ, ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಸಿ.ಇ. ವಿಶ್ವನಾಥ್, ಅಲ್ಪಸಂಖ್ಯಾತರ ವಿಭಾಗ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಹಮ್ಮದ್ ಇರ್ಷಾದ್. ಮುಖಂಡರಾದ ಬಿಲಾಲ್ ಖಾನ್, ಕಾರ್ಯಕ್ರಮ ಸಂಚಾಲಕ ಬುರ್ ಹಾನ್ ಆಹಮದ್ ಬೇಗ್ ಮತ್ತಿತರರು ಭಾಗವಹಿಸಿದ್ದರು.
13 ಕೆ ಟಿ ಆರ್ ಕೆ 1.ತರೀಕೆರೆಯಲ್ಲಿ ನಡೆದ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನದಲ್ಲಿ ಸಾಣೇಹಳ್ಳಿ ತರಳಬಾಳು ಶಾಖಾಮಠ ಪಟ್ಟಾಧ್ಯಕ್ಷ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು., ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಜ.ಮುಹಮ್ಮದ್ ಕುಂಇ. ಉಪವಿಭಾಗಾಧಿಕಾರಿ ಡಾ. ಕೆ ಜಿ ಕಾಂತರಾಜ್ ಮತ್ತಿತರರು ಇದ್ದರು.