ಬ್ಯಾಂಕ್‌ಗಳಿಗೆ ಮೋಸ ಮಾಡಿದವರನ್ನು ಬೇಡಿ ಹಾಕಿ ಕರೆ ತರುತ್ತೇವೆ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

| Published : Jan 21 2024, 01:37 AM IST

ಬ್ಯಾಂಕ್‌ಗಳಿಗೆ ಮೋಸ ಮಾಡಿದವರನ್ನು ಬೇಡಿ ಹಾಕಿ ಕರೆ ತರುತ್ತೇವೆ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಂಡು ವಿದೇಶಕ್ಕೆ ಓಡಿ ಹೋದ ಪ್ರತಿಯೊಬ್ಬರನ್ನು ನಮ್ಮ ಸರ್ಕಾರ ಬೇಡಿ ಹಾಕಿ ಕರ ತರುತ್ತದೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ನರಗುಂದ: ಭಾರತದ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಂಡು ವಿದೇಶಕ್ಕೆ ಓಡಿ ಹೋದ ಪ್ರತಿಯೊಬ್ಬರನ್ನು ನಮ್ಮ ಸರ್ಕಾರ ಬೇಡಿ ಹಾಕಿ ಕರ ತರುತ್ತದೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ಶನಿವಾರ ಪಟ್ಟಣದ ಗಾಂಧಿ ವೃತ್ತದಲ್ಲಿ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರ ಹಿಂದಿನ ದಿನಗಳಲ್ಲಿ ದೇಶದ ಬ್ಯಾಂಕ್‌ಗಳಲ್ಲಿ ಕೆಲವು ಬಂಡವಾಳ ಶಾಹಿಗಳು ವ್ಯಾಪಾರ ಮಾಡುವ ದೃಷ್ಟಿಯಿಂದ ಸಾವಿರಾರು ಕೋಟಿ ಸಾಲ ಪಡೆದುಕೊಂಡು ಭಾರತ ಬಿಟ್ಟು ಓಡಿ ಹೋದವರ ಆಸ್ತಿಗಳನ್ನು ಕೇಂದ್ರ ಸರ್ಕಾರ ಜಪ್ತಿ ಮಾಡಿ ಸಾಲ ತುಂಬಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹೊರ ದೇಶದಲ್ಲಿರುವ ಅವರನ್ನು ಬೇಡಿ ಹಾಕಿ ಕರೆ ತರುತ್ತವೆ ಎಂದರು. ದೇಶದ ರೈತರು, ಬಡವರಿಗೆ ಜನಧನ ಖಾತೆ ತೆರೆಸಿ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. 10 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆಯಲ್ಲಿ ಉಚಿತವಾಗಿ ಗ್ಯಾಸ್‌ ನೀಡಿದ್ದಾರೆ. ಜನೌಷಧ ಕೇಂದ್ರ, ಪಿಎಂ ಕಿಸಾನ್‌ ಜಾರಿ ಮಾಡಿ ಭಾರತವನ್ನು 5ನೇ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದ್ದಾರೆ. ದೇಶದಲ್ಲಿ 1.50 ಲಕ್ಷ ಕಿಮೀ ರಸ್ತೆ ಮಾಡಿದ್ದೇವೆ ಎಂದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ತಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಿ 3ನೇ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿಗಳನ್ನಾಗಿ ಮಾಡಲು ದೇಶದ ಜನರು ಸಿದ್ಧರಾದರೆ ಭಾರತ 3ನೇ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ಈ ಹಿಂದೆ ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲರು ಲೋಕೋಪಯೋಗಿ ಸಚಿವರಿದ್ದಾಗ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿ ಮಾಡಿ ರಸ್ತೆ ಅಭಿವೃದ್ಧಿ ವೀರರಾಗಿದ್ದಾರೆ. ಅದೇ ರೀತಿ ಬಾಗಲಕೋಟಿ ಲೋಕಸಭಾ ಸಂಸದರು ಬಹಳ ಮೃದು ಸ್ವಭಾವದ ರಾಜಕಾರಣಿಗಳು ಅವರು ತಮ್ಮ 20 ವರ್ಷದ ಅಧಿಕಾರ ಅವಧಿಯಲ್ಲಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮ ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳ ಪತ್ರ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ವಿ.ಜಿ. ಹಿರೇಮಠ, ಶಿವಪುತ್ರಪ್ಪ ಅವರಾದಿ, ಎಸ್.ಆರ್. ಹಿರೇಮಠ, ಬಿ.ಬಿ. ಐನಾಪೂರ, ಚಂದ್ರಶೇಖರ ದಂಡಿನ, ಬಾಬಾಗೌಡ ತಿಮ್ಮನಗೌಡ್ರ, ಚಂಬಣ್ಣ ವಾಳದ, ವಾಸು ಜೋಗಣ್ಣವರ, ಎಸ್.ಬಿ. ಕರಿಗೌಡ್ರ, ಹನುಮಂತ ಕಾಡಪ್ಪನವರ, ರಾಚನಗೌಡ, ಪಾಟೀಲ, ಅಜ್ಜನಗೌಡ ಪಾಟೀಲ, ಮಹೇಶ ಹುಟ್ಟಿ, ಮುತ್ತಣ್ಣ ಜಂಗಣ್ಣವರ, ರಾಜೇಶ್ವರಿ ಹವಾಲ್ದಾರ, ಅನ್ನಪೂರ್ಣ ಯಲಿಗಾರ, ರಾಚನಗೌಡ, ಅಜ್ಜಪ್ಪ ಹುಡೇದ, ಮಲ್ಲಪ್ಪ ಮೇಟಿ, ಪ್ರಕಾಶ್ ಗೌಡ ತಿರಕನಗೌಡ್ರ, ಲಕ್ಕುಂಡಿ, ಹೊಳೆ ಆಲೂರು ಬಿಜೆಪಿ ಮಂಡಳ ಅಧ್ಯಕ್ಷರು, ಮುತ್ತು ರಾಯರೆಡ್ಡಿ, ರಮೇಶಗೌಡ ಕರಕನಗೌಡ್ರ, ಗುಡಿಸಾಗರ, ಗುರುಪ್ಪ ಆದಪ್ಪನವರ, ಪ್ರೊ. ಬಿ.ಸಿ.ಹನಮಂತಗೌಡ್ರ, ಬಸವರಾಜ ತಳವಾರ, ಮಂಜು ಮೆಣಸಗಿ, ಸಿದ್ದು ಹೂಗಾರ, ಮಹೇಶ್ ಗೌಡ ಪಾಟೀಲ, ಮುತ್ತನಗೌಡ ಲಿಂಗನಗೌಡ್ರ, ಸಂಗನಗೌಡ ಪಾಟೀಲ, ನಿಂಗಪ್ಪ ಮಣ್ಣೂರು, ಕಿರಣ ಮುಧೋಳದ, ಮಹದೇವಸ್ವಾಮಿ, ಮಹಾದೇವಿ ಕೀರ್ತಿ ಇದ್ದರು.