ನಾವು, ನೀವು ಕನ್ನಡಿಗರ ಕಾವಲುಗಾರರಾಗಿಬೇಕು

| Published : Nov 02 2025, 03:45 AM IST

ಸಾರಾಂಶ

ರೈಲ್ವೆ ಇಲಾಖೆಯಲ್ಲೂ ಈ ಹಿಂದೆ ಕನ್ನಡ ಭಾಷಕರಿಗೆ ಅನ್ಯಾಯವಾಗುತ್ತಿತ್ತು.ಈಗ ಪ್ರಧಾನಿ ಅನುಮತಿ ನೀಡಿರುವುದರಿಂದ ಕನ್ನಡಿಗರಿಗೆ ನ್ಯಾಯ ದೊರುಕುತ್ತದೆ

ಗಂಗಾವತಿ: ನಾವು ನೀವು ಕನ್ನಡಿಗರ ಕಾವಲುಗಾರರಾಗಿರಬೇಕೆಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 70ನೇ ಕರ್ನಾಟಕ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಿಗರಿಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವುದಕ್ಕೆ ಅನುಮತಿ ನೀಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅನುಮತಿ ನೀಡಿದ ಕೀರ್ತಿ ಮೋದಿ ಅವರಿಗೆ ಸಲುತ್ತದೆ ಎಂದರು.

ರೈಲ್ವೆ ಇಲಾಖೆಯಲ್ಲೂ ಈ ಹಿಂದೆ ಕನ್ನಡ ಭಾಷಕರಿಗೆ ಅನ್ಯಾಯವಾಗುತ್ತಿತ್ತು.ಈಗ ಪ್ರಧಾನಿ ಅನುಮತಿ ನೀಡಿರುವುದರಿಂದ ಕನ್ನಡಿಗರಿಗೆ ನ್ಯಾಯ ದೊರುಕುತ್ತದೆ ಎಂದರು.

ಕನ್ನಡ, ಕಲೆ, ಸಂಸ್ಕ್ರತಿ,ಸಾಹಿತ್ಯ ಉಸಿರಾಗಲಿ ಎಂದ ಅವರು, ಕನ್ನಡ ಭಾಷೆಗೆ ಅನ್ಯಾಯವಾದರೆ ಯಾರು ಸಹಿಸುವದಿಲ್ಲ ಎಲ್ಲರು ಒಗ್ಗಟ್ಟಾಗಿ ಹೋರಾಟ ನಡೆಸುವದು ಅನಿವಾರ್ಯವಾಗಿದೆ ಎಂದರು.

ತಹಸೀಲ್ದಾರ್ ನಾಗರಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆ, ಕಲೆ, ಸಂಸ್ಕ್ರತಿ, ಸಾಹಿತ್ಯಕವಾಗಿರುವ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವಾರು ಸಾಹಿತಿಗಳು ಕನ್ನಡ ಭಾಷೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಇದಕ್ಕಿಂತ ಪೂರ್ವದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಜರುಗಿತು.

ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.ಈ ವೇಳೆ ನಗರಸಭೆ ಅಧ್ಯಕ್ಷೆ ಹೀರಾಬಾಯಿ, ತಾಪಂ ಇಓ ರಂಗಪ್ಪ ರೆಡ್ಡಿ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡ ಹಾಗೂ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಇದ್ದರು.

ಶಿಕ್ಷಕಿ ಜಯಶ್ರೀ ಹಕ್ಕಂಡಿ ಸ್ವಾಗತಿಸಿದರು, ಬಿಇಓ ನಟೇಶ್ ಸ್ವಾಗತಿಸಿದರು.