ಮನುಷ್ಯ ಧರ್ಮದ ತಳಹದಿ ಮೇಲೆ ನಡೆದಾಗ ಸಂಪತ್ತು ದೊರಕುತ್ತದೆ-ರಂಭಾಪುರಿ ಸ್ವಾಮೀಜಿ

| Published : Oct 25 2025, 01:00 AM IST

ಮನುಷ್ಯ ಧರ್ಮದ ತಳಹದಿ ಮೇಲೆ ನಡೆದಾಗ ಸಂಪತ್ತು ದೊರಕುತ್ತದೆ-ರಂಭಾಪುರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಧರ್ಮದ ತಳಹದಿ ಮೇಲೆ ನಡೆದಾಗ ಸಂಪತ್ತು ದೊರಕುತ್ತದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಮನುಷ್ಯ ಧರ್ಮದ ತಳಹದಿ ಮೇಲೆ ನಡೆದಾಗ ಸಂಪತ್ತು ದೊರಕುತ್ತದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ನುಡಿದರು. ತಾಲೂಕಿನ ಹೊನ್ನತ್ತಿ ಗ್ರಾಮದ ಗುತ್ತಲ ರಸ್ತೆಯ ಬಳಿ ಹೊನ್ನನಾಗದೇವತಾ ದೇವಸ್ಥಾನ ಸಮಿತಿ ವತಿಯಿಂದ ನಿರ್ಮಿಸಲಾದ ಹೊನ್ನನಾಗದೇವತಾ, ಹೇಮಾವತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈ ಭೂಮಿಯನ್ನು ಹೊತ್ತುಕೊಂಡವರು ನಾಗರಾಜನಾಗಿದ್ದು ಅವನೆಂದರೆ ಎಲ್ಲರಿಗೂ ಭಯ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿ ದೋಷ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಅಂತಹ ಅವಕಾಶ ಇಲ್ಲಿ ಪ್ರಾಪ್ತವಾಗಿರುವುದು ಈ ಭಾಗದ ಜನರ ಭಾಗ್ಯವಾಗಿದೆ ಎಂದರು. ಮನುಷ್ಯನಿಗಿಂತ ದೇವರು ಬುದ್ಧಿವಂತ. ಧರ್ಮದಲ್ಲಿ ತೊಡಗಿಸಿಕೊಂಡಾಗ ಮಾತ್ರ ಬದುಕು ಸಾರ್ಥವಾಗುತ್ತದೆ. ಧರ್ಮ ಶಾಶ್ವತವಾಗಿದ್ದು ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸಂಸ್ಕೃತಿ, ಪರಂಪರೆಯ ಧರ್ಮ ಉಳಿಸಿಕೊಂಡು, ಬೇರೆ ಧರ್ಮ ಗೌರವಿಸಿ ಬೆಳೆಯುವುದು ಮುಖ್ಯವಾಗುತ್ತದೆ. ಧರ್ಮ, ಸಂಪತ್ತು, ಕಾಮ, ಮೋಕ್ಷ ಎಲ್ಲರಿಗೂ ಬೇಕು. ಆದರೆ ಮನುಷ್ಯನಿಗೆ ಧರ್ಮ ಬೇಕಾಗಿಲ್ಲ, ಮೋಕ್ಷ ಕೂಡ ಅಪೇಕ್ಷೇ ಪಡುವುದಿಲ್ಲ. ಅವನಿಗೆ ಮಧ್ಯದ ಸಂಪತ್ತು ಬೇಕಾಗಿದೆ. ಮಾನವನ ಧರ್ಮ ಉಳಿದು ಬೆಳೆದರೆ, ವೈಚಾರಿಕ ಯುಗದಲ್ಲಿ ಧರ್ಮ ಆದರ್ಶಗಳು ಬೇಕಾಗಿಲ್ಲ, ಅವನಿಗೆ ಸಂಪತ್ತು ಬೇಕಾಗಿದೆ. ಸಮಾಜದಲ್ಲಿ ಉನ್ನತ ಸ್ಥಾನ ಮಾನ ಬೇಕು, ಅದಕ್ಕೆ ಬೇಕಾದ ತಳಹದಿಯ ಧರ್ಮ ಬೇಡವಾಗಿದೆ. ದೇಹದ ಎಲ್ಲಾ ಅಂಗಗಳನ್ನು ಕಿತ್ತಿದರು ಬದುಕಬಲ್ಲೆ, ಆದರೇ ನನ್ನ ಮನಸ್ಸಿನಲ್ಲಿರುವ ದೈವವನ್ನು ಕಿತ್ತರೆ ನಾನು ಬದುಕುವುದಿಲ್ಲವೆಂದು ಗಾಂಧೀಜಿ ಹೇಳಿದ್ದಾರೆ. ಎಲ್ಲರ ಭಾವನೆಗೆ ಬೆಲೆ ಕೊಡಬೇಕು ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಇಂದಿನ ಕಲಿಯುಗದಲ್ಲಿ ಜನರಲ್ಲಿ ಧಾರ್ಮಿಕ ಭಾವನೆ ಕಡಿಮೆಯಾಗುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಮಾತ್ರ ನಾವು ಮನುಷ್ಯರಾಗುತ್ತೇವೆ. ಗುರುಗಳ ನುಡಿಗಳಿಂದ ನಾವು ಮನುಷ್ಯರಾಗಿ ಬಾಳೋಣ. ಪ್ರಕೃತಿ ಉಳಿಸಿದಾಗ ಮಾತ್ರ ನಾಗದೇವತೆಗೆ ಸಹಕಾರಿಯಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರ ಉಳಿಸಿ ಬೆಳೆಸೋಣ ಎಂದರು. ನೆಗಳೂರ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸವರಾಜ ಶಿವಣ್ಣನವರ, ಪಂಚ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ವೀರುಪಾಕ್ಷಪ್ಪ ಬಳ್ಳಾರಿ, ವರ್ತಕ ಮಲ್ಲೇಶಪ್ಪ ಅರಕೇರಿ, ಕೋಟ್ರೇಶಪ್ಪ ಎಮ್ಮಿ, ಡಾ.ವಿಜಯಲಕ್ಷ್ಮಿ ನಾಯಕ, ಶಿವಣ್ಣ ನಂದಿಹಳ್ಳಿ, ಮಂಗಳಾ ನೀಲಗುಂದ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಪ್ಪ ಲಮಾಣಿ, ಉಪಾಧ್ಯಕ್ಷ ಕುರುವತ್ತೆಪ್ಪ ಬಣಕಾರ, ಕಾರ್ಯದರ್ಶಿ ಲೋಕಪ್ಪ ಲಮಾಣಿ ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.