ಪ್ರತಿಭಟನೆಯ ಅಸ್ತ್ರ ಬೀದಿ ನಾಟಕ: ಸುರೇಶ್‌

| Published : Mar 28 2024, 12:51 AM IST

ಸಾರಾಂಶ

ಬೀದಿ ನಾಟಕ ಎಂದರೆ ಪ್ರತಿಭಟನೆಯ ಅಸ್ತ್ರವಿದ್ದಂತೆ. ಇದನ್ನು ಸದಾ ನಿಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಳ್ಳಿ ಎಂದು ಚಿತ್ರ ನಿರ್ದೇಶಕ ಬಿ.ಸುರೇಶ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೀದಿ ನಾಟಕ ಎಂದರೆ ಪ್ರತಿಭಟನೆಯ ಅಸ್ತ್ರವಿದ್ದಂತೆ. ಇದನ್ನು ಸದಾ ನಿಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಳ್ಳಿ ಎಂದು ಚಿತ್ರ ನಿರ್ದೇಶಕ ಬಿ.ಸುರೇಶ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಶ್ವ ರಂಗಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ ಯಾತ್ರಾ ಕೇಂದ್ರ ಮತ್ತು ರಂಗ ಸೌರಭ ಸಂಸ್ಥೆ ಸಂಸ ಬಯಲು ರಂಗ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ‘ಡಾ। ವಿಜಯಾ ಬೀದಿ ನಾಟಕ ಸ್ಪರ್ಧಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ಹಿಂದೆ ಬೀದಿ ನಾಟಕಗಳು ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಪ್ರಬಲ ಅಸ್ತ್ರಗಳಾಗಿದ್ದವು. ಸರ್ಕಾರವನ್ನು ಬೀದಿ ನಾಟಕಗಳ ಮೂಲಕ ಎಚ್ಚರಿಸುತ್ತಿದ್ದೆವು. ಮುಂದಿನ ದಿನಗಳಲ್ಲಿ ಸಮಾಜದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬೀದಿ ನಾಟಕ ಎಂಬ ಅಸ್ತ್ರವನ್ನು ವಿದ್ಯಾರ್ಥಿಗಳು ಸದಾ ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಭಿನಯ ತರಂಗ ಸಂಸ್ಥೆಯ ಪ್ರಾಂಶುಪಾಲೆ ಗೌರಿ ದತ್‌ ಮಾತನಾಡಿ, ಯುವಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯ ಅರಿವು ಮೂಡಿಸಲು ಇಂದು ನಾಟಕಗಳು ಅಗತ್ಯವಾಗಿವೆ. ಹಿಂದೆಲ್ಲಾ ನಾವು ದಿನಪತ್ರಿಕೆಗಳ ವರದಿಯನ್ನು ಇಟ್ಟುಕೊಂಡು ಅವುಗಳ ಆಧಾರದಲ್ಲಿ ಅನ್ಯಾಯದ ವಿರುದ್ಧ ನಾಟಕಗಳ ಮೂಲಕ ಹೋರಾಟ ನಡೆಸುತ್ತಿದ್ದೆವು ಎಂದರು.

ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ರಂಗಕರ್ಮಿಗಳಾದ ಪ್ರಕಾಶ್‌ ಅರಸ್‌, ಪಿ.ಧನಂಜಯ, ಉಮಾಶಂಕರ್‌, ಪದ್ಮನಾಭ ಉಪಸ್ಥಿತರಿದ್ದರು.