ವಾರ ಪೂರ್ತಿ ಜಿಲ್ಲಾದ್ಯಂತ ಸ್ವಚ್ಛತಾ ಅಭಿಯಾನ: ನಿರ್ದೇಶಕ ಸಂಜೀವಪ್ಪ

| Published : Jun 09 2024, 01:34 AM IST

ವಾರ ಪೂರ್ತಿ ಜಿಲ್ಲಾದ್ಯಂತ ಸ್ವಚ್ಛತಾ ಅಭಿಯಾನ: ನಿರ್ದೇಶಕ ಸಂಜೀವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ನೈರ್ಮಲ್ಯ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನೀರು ತುಂಬಿದ ಚರಂಡಿ, ಗುಂಡಿಗಳು, ಹಳೆಯ ಟೈರುಗಳು, ತೆಂಗಿನ ಚಿಪ್ಪು, ನೀರಿನ ತೊಟ್ಟಿಗಳು, ಮನೆಯ ಹಿತ್ತಲುಗಳು ಸೇರಿ ಇತರೆ ಸ್ಥಳಗಳು ಸೊಳ್ಳೆಯ ಸಂತತಿಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ವಾರ ಪೂರ್ತಿ ಜಿಲ್ಲಾದ್ಯಂತ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ ತಿಳಿಸಿದರು.

ತಾಲೂಕಿನ ಕಿರಂಗೂರು ಗ್ರಾಮದ ಬಳಿಯ ಐತಿಹಾಸಿಕ ದಸರಾ ಬನ್ನಿ ಮಂಟಪದ ಬಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಕದ ಮೈಸೂರು ಜಿಲ್ಲೆಯಲ್ಲಿ ಕಾಲರ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ವಾರ ಪೂರ್ತಿ ಕುಡಿಯುವ ನೀರಿನ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಎಂದರು.

ಪ್ರಸ್ತುತ ರಸ್ತೆ ಬದಿಗಳು, ಚರಂಡಿಗಳು, ಸರ್ಕಾರಿ ಆಸ್ತಿಗಳು, ರಾಷ್ಟ್ರೀಯ ಹೆದ್ದಾರಿಗಳು ಸೇರಿ ಸಾರ್ವಜನಿಕರು ಹೆಚ್ಚು ಸಂಚರಿಸುವ ಸ್ಥಳಗಳಲ್ಲಿ ಈ ವಾರ ಪೂರ್ತಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದೇವೆ ಎಂದರು.

ತಾಪಂ ಇಒ ವೇಣು ಮಾತನಾಡಿ, ಗ್ರಾಮದ ನೈರ್ಮಲ್ಯ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನೀರು ತುಂಬಿದ ಚರಂಡಿ, ಗುಂಡಿಗಳು, ಹಳೆಯ ಟೈರುಗಳು, ತೆಂಗಿನ ಚಿಪ್ಪು, ನೀರಿನ ತೊಟ್ಟಿಗಳು, ಮನೆಯ ಹಿತ್ತಲುಗಳು ಸೇರಿ ಇತರೆ ಸ್ಥಳಗಳು ಸೊಳ್ಳೆಯ ಸಂತತಿಗೆ ಕಾರಣವಾಗಿದೆ. ಆರೋಗ್ಯದ ದೃಷ್ಟಿಯಿಂದ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು. ಕುಡಿಯುವ ನೀರು, ಸ್ವಚ್ಛತೆ ಸೇರಿ ಹೆಚ್ಚಿನ ಮಾಹಿತಿ ಪಡೆಯಲು ಹತ್ತಿರದ ಪಂಚಾಯತಿಯನ್ನು ಸಂಪರ್ಕಿಸುವಂತೆ ಕೋರಿದರು.

ಇದಕ್ಕೂ ಮುನ್ನ ತಾಲೂಕಿನ ಪಿ.ಹೊಸಹಳ್ಳಿ ಹಾಗೂ ಕೆ.ಶೆಟ್ಟಹಳ್ಳಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಸ್ತುಗಳು, ಅನಾವಶ್ಯಕವಾಗಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸಲಾಯಿತು. ಕಿರಂಗೂರು ಗ್ರಾಪಂ ಪಿಡಿಒ ಪ್ರಶಾಂತ ಬಾಬು, ಮಹಾದೇಪುರ ಗ್ರಾಪಂ ಪಿಡಿಒ ನಾಗೇಂದ್ರ ಸೇರಿ ಇತರರು ಹಾಜರಿದ್ದರು.