ಸಾರಾಂಶ
ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ ಹಾಗೂ ಸಮ್ಮೇಳನದ ಲೋಗೋ ಲೋಕಾರ್ಪಣೆ ಎಮ್ಮೆಮಾಡಿನಲ್ಲಿ ನಡೆಯಿತು.
ಕನ್ನಡಪ್ರಭವಾರ್ತೆ ವಿರಾಜಪೇಟೆ
ಕೂರ್ಗ್ ಜಂಇಯ್ಯತುಲ್ ಉಲಮಾ ಇದರ 50ನೇಯ ವಾರ್ಷಿಕ ಮಹಾ (ಸುವರ್ಣ)ಸಮ್ಮೇಳನವು ಸತ್ಯವಂತರ ಸಖ್ಯದಲ್ಲಿರಿ ಎಂಬ ಧ್ಯೇಯ ವಾಕ್ಯದೊಂದಿಗೆ 2025ರ ಜನವರಿ 12ರಂದು ಎಮ್ಮೆಮಾಡಿನಲ್ಲಿ ನಡೆಯಲಿದೆ. ಇದರ ಅಂಗವಾಗಿ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ ಹಾಗೂ ಸಮ್ಮೇಳನದ ಲೋಗೋ ಲೋಕಾರ್ಪಣೆ ಇತ್ತೀಚೆಗೆ ಎಮ್ಮೆಮಾಡಿನಲ್ಲಿ ನಡೆಯಿತು.ಎಮ್ಮೆಮಾಡು ಸೂಫಿ ಶಹೀದ್ ದರ್ಗಾ ಶರೀಫ್ ನಲ್ಲಿ ಸಯ್ಯದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಸುವರ್ಣ ಮಹೋತ್ಸವದ ಲೋಗೋವನ್ನು ಲೋಕಾರ್ಪಣೆ ಮಾಡಿದರು.
ನಂತರ ಪ್ರೌಢ ಶಾಲಾ ಮೈದಾನ ಸಮೀಪವಿರುವ ಕಟ್ಟಡದಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿಯ ಕಚೇರಿಯನ್ನು ಸಯ್ಯದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭ ಕೆಎಂಜೆ ಜಿಲ್ಲಾಧ್ಯಕ್ಷರಾದ ಅಬ್ದುಲ್ ಲತೀಫ್ ಸುಂಟಿಕೊಪ್ಪ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಮರ್ಕಝುಲ್ ಹಿದಾಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಸಖಾಫಿ, ಸಯ್ಯದ್ ಸೈಫುದ್ದೀನ್ ತಂಙಳ್, ಸಯ್ಯದ್ ನೌಮಾನ್ ತಂಙಳ್ ಹಾಗೂ ಜಿಲ್ಲೆಯ ಸಾಂಘಿಕ, ಸಂಘ ಕುಟುಂಬದ ನಾಯಕರು, ಸ್ವಾಗತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಫೀಲ್ ಸಅದಿ ಸ್ವಾಗತಿಸಿ, ಹನೀಫ್ ಸಖಾಫಿ ವಂದಿಸಿದರು.