ಬಂಟ್ವಾಳ: ಅಡ್ಯನಡ್ಕದ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ದ್ವಿತೀಯ ಪಿಯುಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಜನತಾ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಒದಗಿಸಿದ ಬೋಧಕರಿಗೆ ಸನ್ಮಾನ ಮತ್ತು ಕರ್ಣಾಟಕ ಬ್ಯಾಂಕ್ ವತಿಯಿಂದ ವಿದ್ಯಾಸಂಸ್ಥೆಗೆ ನೀಡಲಾದ ನೂತನ ಶಾಲಾ ವಾಹನಕ್ಕೆ ಚಾಲನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜಿಎಸ್ ಇಂಟರ್‌ನ್ಯಾಷನಲ್ ಅಕಾಡೆಮಿಯ ಸ್ಕೂಲ್ ಬೆಂಗಳೂರು ಇಲ್ಲಿನ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ. ಮಧುಸೂದನ್ ಎಸ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ಣಾಟಕ ಬ್ಯಾಂಕ್ ವತಿಯಿಂದ ಈ ಸಾಲಿನಲ್ಲಿ ಜನತಾ ವಿದ್ಯಾಸಂಸ್ಥೆಗೆ ನೀಡಿರುವ ನೂತನ ಶಾಲಾ ವಾಹನಕ್ಕೆ ಬ್ಯಾಂಕಿನ ಚೀಫ್ ಆಪರೇಟಿಂಗ್ ಆಫೀಸರ್ ರಾಜ ಬಿ.ಎಸ್. ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸಾಧಕರಾದ ವಾಣಿಜ್ಯ ವಿಭಾಗದ ಕಾರ್ತಿಕ್ (593 ಅಂಕ ಹಾಗೂ ರಾಜ್ಯಕ್ಕೆ 8ನೇ ಸ್ಥಾನ), ಆಶಿತ (562 ಅಂಕ), ಶ್ರಾವ್ಯಶ್ರೀ (549 ಅಂಕ), ಪ್ರಜ್ವಲ್ ಬಿ (540 ಅಂಕ), ಫಾತಿಮಾ ಫಮೀಝ (535 ಅಂಕ), ಅರ್ಚನಾ (516 ಅಂಕ), ಹರ್ಷಿತ್ ಎಸ್ (513 ಅಂಕ), ವಿಜ್ಞಾನ ವಿಭಾಗದ ಆಶುರ (581 ಅಂಕ), ಲಿಖಿತ (571 ಅಂಕ), ಸುಶ್ಮಿತಾ (567 ಅಂಕ), ಪ್ರತೀಕ್ಷ (565 ಅಂಕ), ಶಿಲ್ಪ (550, ಅಂಕ), ಲಿಖಿತ್(544 ಅಂಕ), ಜ್ಞಾನ (528 ಅಂಕ), ಕಲಾ ವಿಭಾಗದ ಪೂರ್ಣಶ್ರೀ (551 ಅಂಕ), ರಫಿಯತುಲ್ ಅಝ್ಮೀನ (515 ಅಂಕ) ಇವರನ್ನು ತಮ್ಮ ಪೋಷಕರ ಜೊತೆ ಸನ್ಮಾನಿಸಿ, ಅಭಿನಂದಿಸಲಾಯಿತು.ಇದೇ ಸಂದರ್ಭದಲ್ಲಿ 2025-26ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ಒದಗಿಸಿದ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್, ಸಹಶಿಕ್ಷಕರಾದ ರಾಜಗೋಪಾಲ ಜೋಶಿ ಎಸ್, ಕುಸುಮಾವತಿ, ಗೀತಕುಮಾರಿ ಡಿ., ಶಿವಕುಮಾರ್ ಸಾಯ ಅವರನ್ನು ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ವತಿಯಿಂದ ಸನ್ಮಾನಿಸಲಾಯಿತು.ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿಗಳಾದ ರಮೇಶ್ ಎಂ. ಬಾಯಾರು, ಕೋಶಾಧಿಕಾರಿಗಳಾದ ಕೇಶವ ಭಟ್ ಚವರ್ಕಾಡು, ಸದಸ್ಯರಾದ ಗೋವಿಂದರಾಯ ಶೆಣೈ ಅಡ್ಯನಡ್ಕ, ಬಳಂತಿಮೊಗರು ಈಶ್ವರ ಭಟ್, ಸಚ್ಚಿದಾನಂದ ಶಾಸ್ತ್ರಿ ನೆಕ್ಕರೆ, ಅಬ್ದುಲ್ ಕರೀಮ್ ಕುದ್ದುಪದವು, ಜಯಾನಂದ ಉಳಯ, ಹರಿಕೃಷ್ಣ ವಿ. ಎಂ., ಉಪೇಂದ್ರ ಪೈ, ಜನತಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಮುಳಿಯಾಲ, ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯ ಪ್ರಬಂಧಕರಾದ ಸುಭಾಷ್, ಬ್ಯಾಂಕಿನ ಸಿಬ್ಬಂದಿ ಸತ್ಯಪ್ರಕಾಶ್, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ., ಜನತಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಆರ್. ಎಸ್ ಶುಭ ಹಾರೈಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಅವರು ಪ್ರಸ್ತಾವನೆಗೈದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹೂವನ್ನು ನೀಡಿ ಸ್ವಾಗತಿಸಿದರು. ಲೆಕ್ಕಶಾಸ್ತ್ರ ಉಪನ್ಯಾಸಕಿ ಅನಿತಾ ಬಿ. ಅವರು ಸನ್ಮಾನಿತರ ವಿವರ ವಾಚಿಸಿದರು. ಇತಿಹಾಸ ಉಪನ್ಯಾಸಕರಾದ ಐತ್ತಪ್ಪ ಹಾಗೂ ಸಹಶಿಕ್ಷಕ ಶಿವಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ಹಾಗೂ ಬೋಧಕರು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರ ಸ್ಫೂರ್ತಿಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಮ್ರತಾ ಸ್ವಾಗತಿಸಿ, ಸುನಿಧಿ ಕಾರ್ಯಕ್ರಮ ನಿರೂಪಿಸಿ, ಹರ್ಷಿತಾ ವಂದಿಸಿದರು.