ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಬೆಳಗಾವಿವರೆಗೆ ಪಾದಯಾತ್ರೆ ಹೊರಟಿರುವ ಅಮ್ಜದ್ ಖಾನ್ ಅವರನ್ನು ನಗರದಲ್ಲಿ ಭಾನುವಾರ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭವ್ಯ ಸ್ವಾಗತ ಕೋರಿ ಮುಂದಿನ ಊರಿಗೆ ಬೀಳ್ಕೊಟ್ಟರು.

ರಾಣಿಬೆನ್ನೂರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಬೆಳಗಾವಿವರೆಗೆ ಪಾದಯಾತ್ರೆ ಹೊರಟಿರುವ ಅಮ್ಜದ್ ಖಾನ್ ಅವರನ್ನು ನಗರದಲ್ಲಿ ಭಾನುವಾರ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭವ್ಯ ಸ್ವಾಗತ ಕೋರಿ ಮುಂದಿನ ಊರಿಗೆ ಬೀಳ್ಕೊಟ್ಟರು.

ಪಾದಯಾತ್ರಿ ಅಮ್ಜದ್ ಖಾನ್ ಮಾತನಾಡಿ, ಸತತವಾಗಿ 3ನೇ ವರ್ಷ ಆಂಧ್ರಗಡಿಯಿಂದ ಚಳಿಗಾಲದ ಅಧಿವೇಶನ ನಡೆಯುವ ಬೆಳಗಾವಿ ವಿಧಾನಸೌಧಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದೇನೆ. ಎರಡು ಬಾರಿ ಪೌರಾಡಳಿತ ಸಚಿವ ರಹೀಂಖಾನ್ ಅವರಿಗೆ ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಡಿ.8ರಂದು ಚಳಗಾಲದ ಅಧಿವೇಶನ ಆರಂಭವಾಗಲಿದ್ದು ಅಂದು ಬೆಳಗಾವಿಗೆ ತಲುಪಿ ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಂಘ,ಸಂಸ್ಥೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಪೌರಾಡಳಿತ ಸಚಿವರಿಗೆ 3ನೇ ಬಾರಿ ಮನವಿ ನೀಡಲಾಗುವುದು. ಕಳೆದ 2 ವರ್ಷ 610 ಕಿ.ಮೀ. ಪಾದಯಾತ್ರೆ ಮಾಡಿ ಬೆಳಗಾವಿಗೆ ತಲುಪಿ ಸರ್ಕಾರಕ್ಕೆ ಮನವಿ ನೀಡಿದ್ದೇನು. ಹೋಟೆಲ್ ಉದ್ಯಮಿ ಗಣಪತಿ ಪವಾರ, ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಮಂಜುನಾಥ ದುಗ್ಗತ್ತಿ, ಕೆಆರ್‌ಎಸ್ ಪಕ್ಷದ ವಿಶ್ವನಾಥ ರೆಡ್ಡೇರ, ಮಾಲತೇಶ ಮಡಿವಾಳರ, ವಕೀಲ ಯಲ್ಲಪ್ಪರೆಡ್ಡಿ ಮಾದೇನಹಳ್ಳಿ, ಬಸವರಾಜ ಹಿರೇಮಠ, ಚೋಕತ್ ಜಮಾಲ್ದಾರ ಸೇರಿದಂತೆ ಮತ್ತಿತರು ಇದ್ದರು.