ಸಾರಾಂಶ
ಬೆಳುವಾಯಿಯಿಂದ ಮೂಡುಬಿದಿರೆಗೆ ಆಗಮಿಸಿದ ರಥವನ್ನು ತಾಲೂಕು ಆಡಳಿತ ಸೌಧದ ಎದುರು ಪ್ರಮುಖರು ಸ್ವಾಗತಿಸಿ ಬರಮಾಡಿಕೊಂಡರು.
ಮೂಡುಬಿದಿರೆ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಿಂದ ಸೆ.೨೨ರಂದು ಹೊರಟ ‘ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ’ ೧೯ ಜಿಲ್ಲೆಗಳ ಮೂಲಕ ಸಾಗಿ ಬಂದಿದ್ದು ಇದೀಗ ಉಡುಪಿಯಿಂದ ದ..ಕ. ಜಿಲ್ಲೆಗೆ ಆಗಮಿಸಿದೆ. ಇಲ್ಲಿಂದ ಹತ್ತು ಜಿಲ್ಲೆಗಳ ಮೂಲಕ ಹಾದು ಸಮ್ಮೇಳನದ ಸಂದರ್ಭ ಮಂಡ್ಯ ತಲುಪಲಿದೆ.ಗುರುವಾರ ಬೆಳಗ್ಗೆ ಕಾರ್ಕಳ ತಾ. ಕ.ಸಾ.ಪ. ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ ಅವರು ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿಗೆ ಕನ್ನಡ ಧ್ವಜ ಹಸ್ತಾಂತರಿಸಿ ರಥವನ್ನು ಬೀಳ್ಕೊಟ್ಟರು.
ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರಿಗೆ ರಥ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಪಿಡಿಒ ಭೀಮ ನಾಯಕ್, ಕ.ಸಾ.ಪ. ಮೂಡುಬಿದಿರೆ ಘಟಕದ ಪದಾಧಿಕಾರಿಗಳಾದ ಸದಾನಂದ ನಾರಾವಿ, ರಾಜವರ್ಮ ಬೈಲಂಗಡಿ, ಆಂಡಾರು ಗುಣಪಾಲ ಹೆಗ್ಡೆ, ಯತಿರಾಜ್ ಶೆಟ್ಟಿ ಮೊದಲಾದವರು ಇದ್ದರು.ಬೆಳುವಾಯಿಯಿಂದ ಮೂಡುಬಿದಿರೆಗೆ ಆಗಮಿಸಿದ ರಥವನ್ನು ತಾಲೂಕು ಆಡಳಿತ ಸೌಧದ ಎದುರು ಪ್ರಮುಖರು ಸ್ವಾಗತಿಸಿ ಬರಮಾಡಿಕೊಂಡರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ., ಉಪತಹಸೀಲ್ದಾರರಾದ ಬಾಲಚಂದ್ರ, ರಾಮ ಕೆ., ತಿಲಕ್, ಕ್ಷೇತ್ರ ಶಿಕ್ಷಣ ಅಧಿಕಾರಿ ವಿರೂಪಾಕ್ಷಪ್ಪ, ಮೂಡುಬಿದಿರೆ ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಮುಡಾ ಅಧ್ಯಕ್ಷ ಹರ್ಷವನ ಪಡಿವಾಳ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಅವರು ಭುವನೇಶ್ವರಿಯ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದರು.