ಸಾರಾಂಶ
ಕರ್ನಾಟಕ ಎಂದು ನಾಮಕರಣಗೊಂಡು 5 ದಶಕ ಪೂರ್ಣಗೊಂಡಿದೆ. ನಾವು ಕನ್ನಡಿಗರೆನ್ನುವ ಅಭಿಮಾನ, ಸ್ವಾಭಿಮಾನ ನಮ್ಮಲ್ಲಿದೆ. ನಮ್ಮ ರಾಜ್ಯಕ್ಕೆ ಹೆಸರು ನಾಮಕರಣ ಮಾಡಿದ 50ನೇ ವರ್ಷದ ಈ ಶುಭ ಘಳಿಗೆಯನ್ನು ನಾವೆಲ್ಲರೂ ಸಂಭ್ರಮಿಸೋಣ
ಕನ್ನಡಪ್ರಭ ವಾರ್ತೆ ಚವಡಾಪುರ
ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಂದು ವರ್ಷವಿಡಿ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯಾದ್ಯಂತ ರಥಯಾತ್ರೆ ಕೈಗೊಂಡಿದ್ದು ಕರ್ನಾಟಕ ಸಂಭ್ರಮ 50 ರಥಯಾತ್ರೆಯು ಮಂಗಳವಾರ ಅಫಜಲ್ಪುರ ತಾಲೂಕು ಪ್ರವೇಶ ಮಾಡಿತು. ತಹಸೀಲ್ದಾರ ಸಂಜೀವಕುಮಾರ ದಾಸರ್ ರಥಯಾತ್ರೆಗೆ ಸ್ವಾಗತ ಕೋರಿದರು.ಬಳಿಕ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣಗೊಂಡು 5 ದಶಕ ಪೂರ್ಣಗೊಂಡಿದೆ. ನಾವು ಕನ್ನಡಿಗರೆನ್ನುವ ಅಭಿಮಾನ, ಸ್ವಾಭಿಮಾನ ನಮ್ಮಲ್ಲಿದೆ. ನಮ್ಮ ರಾಜ್ಯಕ್ಕೆ ಹೆಸರು ನಾಮಕರಣ ಮಾಡಿದ 50ನೇ ವರ್ಷದ ಈ ಶುಭ ಘಳಿಗೆಯನ್ನು ನಾವೆಲ್ಲರೂ ಸಂಭ್ರಮಿಸೋಣ ಎಂದರು.
ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಎಲ್ಲಾ ಭಾಷಿಕರಿಗೂ ನಮ್ಮ ನಾಡು ನೆಲೆ ಕಲ್ಪಿಸಿ ಬದುಕು ಕೊಟ್ಟಿದೆ. ನಾವು ಎಲ್ಲರನ್ನು ಗೌರವಿಸುವ ವಿಶಾಲ ಹೃದಯದವರಾಗಿದ್ದೇವೆ. ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ಹೆಸರಿಟ್ಟು 50 ವರ್ಷಗಳು ಗತಿಸಿದ ಈ ಶುಭ ಘಳಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವರ್ಷವಿಡಿ ಸಂಭ್ರಮಿಸುವಂತ ಕಾರ್ಯಕ್ರಮಗಳನ್ನು ರೂಪಿಸಿ ರಥಯಾತ್ರೆ ಕೈಗೊಂಡಿದ್ದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.ಅಫಜಲ್ಪುರ ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿ ವರೆಗೆ ನಡೆದ ರಥಯಾತ್ರೆಯಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಾಂಸ್ಕೃತಿಕ ತಂಡಗಳು ನೃತ್ಯ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ತಾ.ಪಂ ಇಒ ಬಾಬುರಾವ್ ಜ್ಯೋತಿ, ಕೃಷಿ ಇಲಾಖೆ ಅಧಿಕಾರಿ ಎಸ್.ಎಚ್ ಗಡಗಿಮನಿ, ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಪ್ರೇಮಾನಂದ ಚಿಂಚೋಳಿಕರ, ಬಿಇಒ ಹಾಜಿಮಲಂಗ, ಕಸಾಪ ಅಧ್ಯಕ್ಷ ಪ್ರಭು ಫುಲಾರಿ, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಡಾ. ಸಂಗಣ್ಣ ಎಂ ಸಿಂಗೆ ಆನೂರ, ಪ್ರಭಾವತಿ ಮೇತ್ರಿ, ರಮೇಶ ಹೂಗಾರ, ಮುರುಗೇಂದ್ರ ಮಸಳಿ, ಡಿ.ಎಂ ನದಾಫ ಸೇರಿದಂತೆ ಅನೇಕರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))