ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಸವೇಶ್ವರ ಜಯಂತಿ ಅಂಗವಾಗಿ ರಾಜ್ಯ ಸರ್ಕಾರ ಆಯೋಜಿಸಿರುವ ಪ್ರಚಾರದ ಅನುಭವ ಮಂಟಪದ ಬಸವ ರಥವನ್ನು ಪಟ್ಟಣದ ಕುವೆಂಪು ವೃತ್ತದಲ್ಲಿ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಸ್ವಾಗತಿಸಿ ಬರ ಮಾಡಿಕೊಂಡರು.ತಾಲೂಕು ಆಡಳಿತ, ವೀರಶೈವ ಮಹಾಸಭಾ ಸಮಿತಿ ಅಧ್ಯಕ್ಷರು ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು ಮೈಸೂರು- ಬೆಂಗಳೂರು ಹೆದ್ದರಿಯ ಕುವೆಂಪು ವೃತ್ತದಲ್ಲಿ ಹಾಜರಿದ್ದು ಮಂಡ್ಯದಿಂದ ಆಗಮಿಸಿದ ಅನುಭವ ಮಂಟಪದ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ನಂತರ ಹಣ್ಣು ಕಾಯಿ ಪೂಜೆ ಸಲ್ಲಿಸಿ ಬಸವೇಶ್ವರ ಸ್ವಾಮಿಯನ್ನು ಸ್ಮರಿಸಿದರು.
ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಮಾತನಾಡಿ, ಏ.30 ರಂದು ಬಸವೇಶ್ವರರ ಜಯಂತಿ ಅಂಗವಾಗಿ ಬಸವ ರಥ ಸಂಚರಿಸಲಿದೆ. ಬಸವಣ್ಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಪ್ರಸ್ತುತ ದಿನಗಳಲ್ಲಿ ನೆಮ್ಮದಿ ಜೀವನ ಸಾಗಿಸಬೇಕು. ಇದರಿಂದ ಮನುಷ್ಯನಲ್ಲಿ ಆಸೆ ಅನಿಸಿಕೆಗಳ ಹೆಚ್ಚಿನ ಒತ್ತಡ ಇರುವುದಿಲ್ಲ ಎಂದರು.ಈ ವೇಳೆ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜು, ನಗರಾಧ್ಯಕ್ಷ ಜಗದೀಶ್, ಕೆಆರ್‌ಎಸ್ ದೀಪು, ಮಹದೇವಪುರ ಶಿವಕುಮಾರ್, ಪುರಸಭೆ ಸದಸ್ಯ ಪ್ರದೀಪ್, ಮಾಜಿ ಸದಸ್ಯ ಸೋಮು, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು, ಕಸಾಪ ನಗರಾಧ್ಯಕ್ಷ ಎಂ.ಸುರೇಶ್, ಕರವೇ ಶಂಕರ್ ಚಂದಗಾಲು, ಸ್ವಾಮೀಗೌಡ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ರಾಜ್ಯ ಕಾರ್ಯದರ್ಶಿ ಜಗದೀಶ್‌ಗೌಡ, ಕೆಂಪೇಗೌಡ ಯುವ ಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಾರುತಿ, ಆರೋಗ್ಯ ಶಿಕ್ಷಣಾಧಿಕಾರಿ ಬೆನ್ನೂರ, ಕೂಡಲಕುಪ್ಪೆ ಸೋಮಶೇಖರ್, ಚಿಕ್ಕತಮ್ಮೇಗೌಡ ಸೇರಿದಂತೆ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.