ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ, ಭವ್ಯ ಮೆರವಣಿಗೆ

| Published : Oct 20 2024, 01:51 AM IST / Updated: Oct 20 2024, 01:52 AM IST

ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ, ಭವ್ಯ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ಶನಿವಾರ ಕನಕಗಿರಿ ಪಟ್ಟಣಕ್ಕೆ ಆಗಮಿಸಿತು. ತಾಲೂಕು ಆಡಳಿತದಿಂದ ಸ್ವಾಗತ ಕೋರಿ ಭವ್ಯ ಮೆರವಣಿಗೆ ನಡೆಸಲಾಯಿತು.

ಕನಕಗಿರಿ: ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ಶನಿವಾರ ಪಟ್ಟಣಕ್ಕೆ ಆಗಮಿಸಿತು.

ಗಂಗಾವತಿಯ ಕೇಸರಹಟ್ಟಿ ಗ್ರಾಮದಿಂದ ತಾಲೂಕಿನ ಸುಳೇಕಲ್ ಗಡಿಭಾಗದಲ್ಲಿ ತಾಲೂಕಾಡಳಿತದಿಂದ ರಥಯಾತ್ರೆಯನ್ನು ಕನ್ನಡತಾಯಿ ಭುವನೇಶ್ವರಿ ದೇವಿಗೆ ಪುಷ್ಪ ಅರ್ಪಿಸುವ ಮೂಲಕ ಸ್ವಾಗತಿಸಿಕೊಳ್ಳಲಾಯಿತು.

ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆಗೆ ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಹಾಗೂ ಉಪಾಧ್ಯಕ್ಷ ಕಂಠಿರಂಗಪ್ಪ ಚಾಲನೆ ನೀಡಿದರು.

ರಾಜಬೀದಿಯಲ್ಲಿ ಸಾಗಿದ ರಥಯಾತ್ರೆ ಮೆರವಣಿಗೆಯನ್ನು ಜನ ಕಣ್ತುಂಬಿಕೊಂಡರು. ರಥಯಾತ್ರೆಯಲ್ಲಿ ಕೃಷ್ಣರಾಜ ಸಾಗರ ನಿರ್ಮಾತೃ ಸರ್ ಎಂ. ವಿಶ್ವೇಶ್ವರಯ್ಯ, ಮೈಸೂರಿನ ೨೪ನೇ ಅರಸ ಕೃಷ್ಣರಾಜ ಒಡೆಯರ್, ನಾಡುಕಂಡ ಕವಿ, ಸಾಹಿತಿಗಳು ಮತ್ತು ರೈತ ಉಳುಮೆ ಮಾಡುವ ರೈತ ಹಾಗೂ ಎತ್ತುಗಳನ್ನೊಳಗೊಂಡ ಚಿತ್ರಗಳು ಮನಸೆಳೆದವು. ಅಲೆಮಾರಿ ಡ್ರಮ್ ಸೆಟ್ ಕಲಾತಂಡದಿಂದ ತಾಷಾ ಕುಣಿತ ಗಮನ ಸೆಳೆಯಿತು.

ಗ್ರೇಡ್-೨ ತಹಸೀಲ್ದಾರ್‌ ವಿ.ಎಚ್. ಹೊರಪೇಟೆ, ಸಿಡಿಪಿಒ ವಿರೂಪಾಕ್ಷ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪಪಂ ಸದಸ್ಯರಾದ ಅನಿಲ ಬಿಜ್ಜಳ, ರಾಜಸಾಬ ನಂದಾಪುರ, ಹನುಮಂತ ಬಸರಿಗಿಡ, ರಾಕೇಶ ಕಂಪ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರೂಪಣ್ಣ ಕಲ್ಲೂರು, ಕಸಾಪ ತಾಲೂಕಾಧ್ಯಕ್ಷ ಮೆಹೆಬೂಬ್‌ ಹುಸೇನ ಬೇಲ್ದಾರ, ಸಾಹಿತಿ ಮಲ್ಕೇಶ ಕೋಟೆ, ಪ್ರಮುಖರಾದ ಈರಪ್ಪ ಹಾದಿಮನಿ, ವಾಗೀಶ ಹಿರೇಮಠ, ವಿರೂಪಾಕ್ಷ ಆಂದ್ರ, ಕನಕಪ್ಪ ಮ್ಯಾಗಡೆ, ಪಾಮಣ್ಣ ಅರಳಿಗನೂರು, ಬಾಲರಾಜ ಇತರರಿದ್ದರು.

ಕನ್ನಡ ಜ್ಯೋತಿ ರಥ ಯಾತ್ರೆಗೆ ಸ್ವಾಗತ:

ಕುಕನೂರು ಪಟ್ಟಣದಲ್ಲಿ ಕನ್ನಡದ ಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.ತಹಸೀಲ್ದಾರ ಪ್ರಾಣೇಶ ಎಚ್., ತಾಪಂ ಇಒ ಸಂತೋಷ ಬಿರಾದರ್, ಪಪಂ ಮುಖ್ಯಾಧಿಕಾರಿ ರವೀಂದ್ರ ಡಿ. ಬಾಗಲಕೋಟಿ, ಪಪಂ ಅಧ್ಯಕ್ಷೆ ಲಲಿತಮ್ಮ ಆರ್. ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ ಆರ್. ಬೆರಳಿನ್ ರಥಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.ಕನ್ನಡ ಜ್ಯೋತಿ ರಥಯಾತ್ರೆಯು ವೀರಭದ್ರಪ್ಪ ಸರ್ಕಲ್, ಬಸ್ ಸ್ಟ್ಯಾಂಡ್‌, ಅಂಬೇಡ್ಕರ್ ವೃತ್ತದಲ್ಲಿ ಸಾಂಪ್ರದಾಯಕ ಡೊಳ್ಳಿನ ವಾದ್ಯದೊಂದಿಗೆ ಸಂಚರಿಸಿತು.

ತಾಪಂ ಯೋಜನಾಧಿಕಾರಿ ಆನಂದ ಗರೂರ, ಸಿಬ್ಬಂದಿ ಗಿರಿಧರ ಜೋಶಿ, ಚೆನ್ನಬಸಪ್ಪ ಸಣ್ಣಕರಡದ್, ಯಲ್ಲಪ್ಪ ನಿಡಶೇಸಿ, ನರೇಗಾ ಸಿಬ್ಬಂದಿ ಸುರೇಶ ದೇಸಾಯಿ, ಗಿರೀಶ್ ಗೂಡೂರ, ಲಕ್ಷ್ಮಣ ಕೆರಳ್ಳಿ, ಶಿವರಾಜ ಬಿ., ಪಪಂ ಸಿಬ್ಬಂದಿ ಮನೋಹರ್, ಮಂಜುನಾಥ, ಶರಣಪ್ಪ ಯತ್ನಳ್ಳಿ, ರಾಜೇಶ್ವರಿ ಎಂ.ಡಿ., ಕನ್ನಡ ಪರ ಸಂಘಟನೆಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇತರರಿದ್ದರು.