ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆಗೆ ಸ್ವಾಗತ

| Published : Jan 08 2024, 01:45 AM IST / Updated: Jan 08 2024, 01:26 PM IST

ಸಾರಾಂಶ

ಯಡ್ರಾಮಿ ತಾಲೂಕಿನ ಗಡಿಗ್ರಾಮ ಇಜೇರಿ ಬಳಿ “ಕನ್ನಡ ಜ್ಯೋತಿ ರಥ ಯಾತ್ರೆಗೆ” ತಾಲೂಕು ಆಡಳಿತದಿಂದ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಕರ್ನಾಟಕ ರಾಜ್ಯ ನಾಮಕರಣಗೊಂಡು 50 ವರ್ಷ ಪೂರೈಸಿದೆ ಈ ಸ್ಮರಣಾರ್ಥವಾಗಿ, ಘನ ಸರ್ಕಾರ ಕರ್ನಾಟಕದ ,ಇತಿಹಾಸ ಕಲೆ, ಸಾಹಿತ್ಯ, ನಾಡು, ನುಡಿ ಸಂಸ್ಕೃತಿಯ ಪ್ರತಿಯೊಬ್ಬರು ತಿಳಿಯಲೆಂದು ರಾಜ್ಯದಾದ್ಯಂತ ಕನ್ನಡದ ಜ್ಯೋತಿ ರಥಯಾತ್ರೆ ಕೈಗೊಂಡಿದೆ,ಇದು ನಮ್ಮ ಕನ್ನಡ ನಾಡಿನ ರಥೋತ್ಸವ,ಸಂಭ್ರಮದಿಂದ ಈ ರಥಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ತಹಸೀಲ್ದಾರ್‌ ನಾಗನಾಥ ಸೇಡಂ ಹೇಳಿದರು.

ಭಾನುವಾರ ತಾಲೂಕಿನ ಗಡಿ ಭಾಗ ಇಜೇರಿ ಗ್ರಾಮಬಳಿ “ಕನ್ನಡ ಜ್ಯೋತಿ ರಥ ಯಾತ್ರೆಗೆ” ಯಡ್ರಾಮಿ ತಾಲೂಕು ಆಡಳಿತ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು. ನಂತರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸರ್ದಾರ ಶರಣಗೌಡ ವೃತ್ತವರೆಗೆ ಕನ್ನಡ ತಾಯಿ ಭುವನೇಶ್ವರಿದೇವಿ ಭಾವಚಿತ್ರವನ್ನು ರಥದಲ್ಲಿಸಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ನಮ್ಮ ಕನ್ನಡ ಭಾಷೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ, ಕನ್ನಡದ ಇತಿಹಾಸದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ತಿಳಿದಿರಬೇಕು, ಹಾಗೆ ಕರ್ನಾಟಕ ಏಕೀಕರಣ ಮತ್ತು ನಾಡು ನುಡಿಗಾಗಿ ದುಡಿದ ಮಹನೀಯರನ್ನು ನಾವುಗಳು ಆಗಾಗ ಸ್ಮರಿಸಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ನಾಗನಾಥ ಸೇಡಂ ಪಪಂ ಮುಖ್ಯಾಧಿಕಾರಿ ಸಂತೋಷ ರೆಡ್ಡಿ , ತಾ.ಪಂ ಅಧಿಕಾರಿ ಮಾಂತೇಶ ಪುರಾಣಿಕ, ಕೃಷಿ ಅಧಿಕಾರಿ ಶಾಂತಗೌಡ ಗೂಗಲ್ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.