ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ-2026ರ ಅರ್ಹತಾ ದಿನಾಂಕ ಜನವರಿ 1, 2025ಕ್ಕೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಹಾವೇರಿ:ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ-2026ರ ಅರ್ಹತಾ ದಿನಾಂಕ ಜನವರಿ 1, 2025ಕ್ಕೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ರಾಜಕೀಯ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ, ಮತಗಟ್ಟೆಗಳಲ್ಲಿ ಮತ್ತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಮತದಾರರು ಪಟ್ಟಿ ಪರಿಶೀಲಿಸಿಕೊಳ್ಳಬೇಕು ಹಾಗೂ ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

22,160 ಮತದಾರರು: ಅಂತಿಮ ಮತದಾರರ ಪಟ್ಟಿ ಅನುಸಾರ ಜಿಲ್ಲೆಯಲ್ಲಿ 13,951 ಪುರುಷ ಹಾಗೂ 8,209 ಮಹಿಳೆಯರು ಸೇರಿ 22,160 ಪದವೀಧರ ಮತದಾರರಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 1,263 ಪುರುಷ ಹಾಗೂ 725 ಮಹಿಳೆಯರು ಸೇರಿ 1,988, ಹಾನಗಲ್-1,966 ಪುರುಷ ಹಾಗೂ 977 ಮಹಿಳೆಯರು ಸೇರಿ 2,943, ಹಾವೇರಿ-2,594 ಪುರುಷ ಹಾಗೂ 1,606 ಮಹಿಳೆಯರು ಸೇರಿ 4,200, ಹಿರೇಕೆರೂರು-1,323 ಪುರುಷ ಹಾಗೂ 693 ಮಹಿಳೆಯರು ಸೇರಿ 2,016, ರಟ್ಟಿಹಳ್ಳಿ- 849 ಪುರುಷ ಹಾಗೂ 452 ಮಹಿಳೆಯರು ಸೇರಿ 1,301, ಸವಣೂರು-1,271 ಪುರುಷ ಹಾಗೂ 583 ಮಹಿಳೆಯರು ಸೇರಿ 1,854, ಶಿಗ್ಗಾಂವ-1,343 ಪುರುಷ ಹಾಗೂ 775 ಮಹಿಳೆಯರು ಸೇರಿ 2118 ಹಾಗೂ ರಾಣೇಬೆನ್ನೂರ ತಾಲೂಕಿನಲ್ಲಿ 3,342 ಪುರುಷ ಹಾಗೂ 2,398 ಮಹಿಳೆಯರು ಸೇರಿ 5,740 ಮತದಾರರಿದ್ದಾರೆ.

ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜಿಲ್ಲೆಯಲ್ಲಿ ನ. 25ರಿಂದ ಡಿ.10ರ ವರೆಗೆ ನಮೂನೆ -18ರಲ್ಲಿ 3,815 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 3,775 ಅರ್ಜಿಗಳು ಕ್ರಮವಾಗಿದ್ದು, 40 ಅರ್ಜಿಗಳು ತಿರಸ್ಕೃತವಾಗಿವೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ 7ರಲ್ಲಿ 9 ಅರ್ಜಿಗಳು ಸಲ್ಲಿಕೆಯಾಗಿವೆ ಹಾಗೂ ತಿದ್ದುಪಡಿಗೆ ನಮೂನೆ-8ರಲ್ಲಿ 186 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಡಿ. 30ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯ ಒಂದು ಪ್ರತಿಯನ್ನು ಅಧಿಕೃತ ರಾಜಕೀಯ ಪಕ್ಷಿಗಳಿಗೆ ಉಚಿತವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದ ಪಡೆಯಬಹುದಾಗಿದೆ ಎಂದರು.28 ಮತಗಟ್ಟೆ: ಜಿಲ್ಲೆಯಲ್ಲಿ ಒಟ್ಟು 28 ಮತಗಟ್ಟೆಗಳಿದ್ದು, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ಸವಣೂರು ತಾಲೂಕಿನಲ್ಲಿ ತಲಾ ಎರಡು, ಶಿಗ್ಗಾಂವ-ಮೂರು, ಹಾನಗಲ್-ನಾಲ್ಕು, ಹಾವೇರಿ-ಐದು ಹಾಗೂ ರಾಣೇಬೆನ್ನೂರು ತಾಲೂಕಿನಲ್ಲಿ ಎಂಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರ್ಹ ಪದವೀಧರರು ತಮ್ಮ ಹೆಸರು ಮತ್ತು ವಿವರಗಳನ್ನು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಇಲ್ಲವಾದಲ್ಲ್ಲಿ, ನಿಗದಿತ ನಮೂನೆ-18ರಲ್ಲಿ ಹೆಸರು ಸೇರ್ಪಡೆ, ನಮೂನೆ-8ರಲ್ಲಿ ಹೆಸರು ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಯನ್ನು ಸಹಾಯಕ ಮತದಾರರ ನೋಂದಾಣಿಧಿಕಾರಿಗಳ ಕಾರ್ಯಾಲಯ (ತಹಸೀಲ್ದಾರ), ನಿಯೋಜಿತ ಅಧಿಕಾರಿಗಳ ಕಾರ್ಯಾಲಯ (ತಾಲೂಕ ಪಂಚಾಯಿತಿ) ಹಾಗೂ ಸಹಾಯಕ ನಿಯೋಜಿತ ಅಧಿಕಾರಿಗಳ ಕಾರ್ಯಾಲಯ (ಕ್ಷೇತ್ರ ಶಿಕ್ಷಣಾಧಿಕಾರಿಗಳ)ಗಳಿಗೆ ಸಲ್ಲಿಸಬಹುದು ಎಂದು ತಿಳಿಸಿದರು. ಬಿ.ಎಲ್.ಎ ನೇಮಕ: ಜಿಲ್ಲೆಯ ಎಲ್ಲ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್‌ಒಗಳು ಸಹ ಕಾರ್ಯನಿರ್ವಹಿಸುತ್ತಿದ್ದು, ಆದಾಗ್ಯೂ ರಾಜಕೀಯ ಪಕ್ಷಗಳಿಂದ ಬೂತ್ ಲೆವೆಲ್ ಏಜೆಂಟರುಗಳನ್ನು ನೇಮಿಸಬೇಕು ಎಂದು ತಿಳಿಸಿದರು.ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಸಹ ನೋಡಿಕೊಳ್ಳಬಹುದು. ಒಂದುವೇಳೆ ಅರ್ಹತಾ ದಿನಾಂಕ 01-11-2025ಕ್ಕಿಂತ 3 ವರ್ಷ ಹಿಂದೆ ಪದವಿ ಪಡೆದ ಅರ್ಹ ಪದವೀಧರರು ನಮೂನೆ-18 ಸಲ್ಲಿಸದೇ ಇದ್ದಲ್ಲಿ ಅಂತಹ ಪದವೀಧರರು ನಿರಂತರ ಸೇರ್ಪಡೆ ಮಾಡಲು ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕೆ 10 ದಿನ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್್ ಕಚೇರಿಗೆ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್,, ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ, ಕಾಂಗ್ರೆಸ್ ಪಕ್ಷದ ಶಂಕರ ಮೆಹರವಾಡೆ, ಸೈಯದ್‌ಉಮರ್, ಎಸ್.ಇ.ನಾಮದಾರ, ಬಿಜೆಪಿಯಿಂದ ಸುರೇಶ ಹೊಸಮನಿ, ಜೆಡಿಎಸ್‌ನಿಂದ ಅಮೀರಜಾನ ಬೇಪಾರಿ, ಪ್ರವೀಣಕುಮಾರ್ ಎಸ್.ಎನ್. ಉಪಸ್ಥಿತರಿದ್ದರು.