ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಅ. 23ರಂದು ಮತದಾನ ಜರುಗಲಿದೆ. ನ್ಯಾಯ ಸಮ್ಮತ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಅ. 23ರಂದು ಮತದಾನ ಜರುಗಲಿದೆ. ನ್ಯಾಯ ಸಮ್ಮತ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂತಿಮವಾಗಿ ಕಣದಲ್ಲಿ ಉಳಿದ 14 ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಅ. 23ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಅ. 27ರಂದು ಮತ ಎಣಿಕೆ ಜರುಗಲಿದೆ. ಅ. 31ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2026 ಅ.6ರ ಅಂತಿಮ ಮತದಾರರ ಪಟ್ಟಿ ಅನುಸಾರ 15,547 ಪುರುಷ, 9,101 ಮಹಿಳಾ ಮತದಾರರು ಸೇರಿ 24,648 ಮತದಾರರಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ 2242 ಪುರುಷ ಹಾಗೂ 1117 ಮಹಿಳೆಯರು ಸೇರಿ 3359, ಶಿಗ್ಗಾಂವಿ ತಾಲೂಕಿನಲ್ಲಿ 1533 ಪುರುಷ ಹಾಗೂ 873 ಮಹಿಳೆಯರು ಸೇರಿ 2406, ಸವಣೂರ ತಾಲೂಕಿನಲ್ಲಿ 1375 ಪುರುಷ ಹಾಗೂ 630 ಮಹಿಳೆಯರು ಸೇರಿ 2005, ಹಾವೇರಿ ತಾಲೂಕಿನಲ್ಲಿ 2959 ಪುರುಷ ಹಾಗೂ 1825 ಮಹಿಳೆಯರು ಸೇರಿ 4,784, ಬ್ಯಾಡಗಿ ತಾಲೂಕಿನಲ್ಲಿ 1448 ಪುರುಷ ಹಾಗೂ 814 ಮಹಿಳೆಯರು ಸೇರಿ 2262, ಹಿರೇಕೆರೂರು ತಾಲೂಕಿನಲ್ಲಿ 1392 ಪುರುಷ ಹಾಗೂ 733 ಮಹಿಳೆಯರು ಸೇರಿ 2,125, ರಟ್ಟಿಹಳ್ಳಿ ತಾಲೂಕಿನಲ್ಲಿ 875 ಪುರುಷ ಹಾಗೂ 467 ಮಹಿಳೆಯರು ಸೇರಿ 1342 ಹಾಗೂ ರಾಣೇಬೆನ್ನೂರು ತಾಲೂಕಿನಲ್ಲಿ 3723 ಪುರುಷ ಹಾಗೂ 2642 ಮಹಿಳೆಯರು ಸೇರಿ 6365 ಮತದಾರರಿದ್ದಾರೆ ಎಂದು ತಿಳಿಸಿದರು.

29 ಮತಗಟ್ಟೆ: ಸವಣೂರ, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ ತಾಲೂಕಿನಲ್ಲಿ ತಲಾ ಎರಡು, ಶಿಗ್ಗಾಂವಿ-03, ಹಾನಗಲ್ಲ-04, ಹಾವೇರಿ-05, ರಾಣಿಬೆನ್ನೂರು-08 ಸೇರಿ 29 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಪಿ.ಸಿ. ಜಾಬೀನ್, ಅಮೀರಜಾನ್ ಬೇಪಾರಿ, ಹನುಮಂತಪ್ಪ ಕಬ್ಬಾರ ಇತರರು ಉಪಸ್ಥಿತರಿದ್ದರು.