ಪಶ್ಚಿಮಘಟ್ಟ ಪ್ರದೇಶ, ತುಂಗೆ ಪಾವಿತ್ರ್ಯತೆ ರಕ್ಷಿಸಿ: ಚಿಂತಕ ಕುಮಾರಸ್ವಾಮಿ

| Published : Jul 25 2024, 01:19 AM IST

ಪಶ್ಚಿಮಘಟ್ಟ ಪ್ರದೇಶ, ತುಂಗೆ ಪಾವಿತ್ರ್ಯತೆ ರಕ್ಷಿಸಿ: ಚಿಂತಕ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಜೀವವೈವಿಧ್ಯತೆಯ ತಾಣವಾಗಿರುವ ಪಶ್ಚಿಮಘಟ್ಟ ಹಾಗೂ ಮಲೆನಾಡಿನ ಜೀವನದಿಯಾಗಿರುವ ತುಂಗೆ ಮಲಿನಗೊಳ್ಳುತ್ತಿದ್ದು, ಇದನ್ನು ಮಾಲಿನ್ಯ ಮುಕ್ತಗೊಳಿಸಬೇಕು. ತುಂಗಾನದಿ ಪಾವಿತ್ರ್ಯತೆಗೆ ಎಲ್ಲರೂ ಶ್ರಮಿಸಬೇಕು ಎಂದು ಚಿಂತಕ ಬಿ.ಎಂ.ಕುಮಾರಸ್ವಾಮಿ ಹೇಳಿದರು.

- ಮಾನಗಾರು ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ತುಂಗಾನದಿ ಪಾವಿತ್ರ್ಯತೆ ಪಾದಯಾತ್ರೆ ಜಾಗೃತಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಜೀವವೈವಿಧ್ಯತೆಯ ತಾಣವಾಗಿರುವ ಪಶ್ಚಿಮಘಟ್ಟ ಹಾಗೂ ಮಲೆನಾಡಿನ ಜೀವನದಿಯಾಗಿರುವ ತುಂಗೆ ಮಲಿನಗೊಳ್ಳುತ್ತಿದ್ದು, ಇದನ್ನು ಮಾಲಿನ್ಯ ಮುಕ್ತಗೊಳಿಸಬೇಕು. ತುಂಗಾನದಿ ಪಾವಿತ್ರ್ಯತೆಗೆ ಎಲ್ಲರೂ ಶ್ರಮಿಸಬೇಕು ಎಂದು ಚಿಂತಕ ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಮಾನಗಾರು ಜ್ಞಾನಭಾರತಿ ಶಿಕ್ಷಣ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ತುಂಗಾನದಿ ಪಾವಿತ್ರ್ಯತೆ ಪಾದಯಾತ್ರೆ ಜಾಗೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪಶ್ಚಿಮ ಘಟ್ಟ ನಿತ್ಯ ಹರಿದ್ವರಣದ ಕಾಡುಗಳು, ವಿಶ್ವದಲ್ಲಿಯೇ ಅಪರೂಪದ ಶೋಲಾಕಾಡುಗಳು, ವಿವಿಧ ಸಸ್ಯ, ಪ್ರಾಣಿ ಪಕ್ಷಿ ಪ್ರಭೇದಗಳನ್ನು ಒಳಗೊಂಡಿರುವ ತಾಣವಾಗಿದೆ.

ಇಲ್ಲಿರುವ ಗಂಗಡಿಕಲ್ಲು ಪ್ರದೇಶದ ತಪ್ಪಲಲ್ಲಿ ಹುಟ್ಟುವ ತುಂಗಾ, ಭದ್ರಾ ನದಿಗಳು ಶ್ರೀ ಕ್ಷೇತ್ರ ಕೂಡಲಿಯಲ್ಲಿ ಸಂಗಮವಾಗಿ ತುಂಗಭದ್ರಾನದಿಯಾಗಿ ಸುಮಾರು 400 ಕಿಲೋಮೀಟರ್‌ ವರೆಗೆ ಹರಿಯುತ್ತದೆ. ಈ ಜೀವನದಿ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಇತ್ತೀಚೆಗೆ ಅರಣ್ಯ ನಾಶದಂತಹ ಸಮಸ್ಯೆಯಿಂದ ನೀರು ಇಂಗುವಿಕೆ ಕಡಿಮೆಯಾಗಿ ಮಳೆಗಾಲದಲ್ಲಿ ಪ್ರವಾಹ ಹಾಗೂ ಬೇಸಿಗೆಯಲ್ಲಿ ಬರದ ಸಮಸ್ಯೆಗಳು ಎದುರಾಗುತ್ತಿದೆ.

ನದಿಗಳಲ್ಲಿ ನೀರಿನ ಹರಿವು ಪ್ರಮುಖವಾಗಿದ್ದು ಗಣಿಗಾರಿಕೆಯಿಂದ ನದಿ ದಂಡೆ ಕೊರೆತ, ಜಲಚರದ ಸಂತತಿ ನಾಶ ನಿರಂತರವಾಗಿ ನಡೆಯುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದ ಪರಿಸರ, ನೀರು, ಕೃಷಿ,ಆರ್ಥಿಕ ಹಾಗೂ ಸಾಮಾಜಿಕ ಅಧ್ಯಯನ ನಡೆಸಲು ಪಶ್ಚಿಮ ಘಟ್ಟ ಅಧ್ಯಯನ ಕೇಂದ್ರ ಸ್ಫಾಪಿಸುವಂತೆ ಮನವಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನ. 4 ರಿಂದ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ತುಂಗಾನದಿ ಪಾವಿತ್ರ್ಯಕ್ಕಾಗಿ ಪಾದಯಾತ್ರೆ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಭಿಯಾನದ ಪ್ರಮುಖ ಶ್ರೀಪತಿರಾವ್, ಶಂಕರ್, ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಸಿ.ನಾಗೇಶ್, ಪಪಂ ಮಾಜಿ ಅಧ್ಯಕ್ಷ ಟಿ.ಕೆ.ಪರಾಶರ, ಎ.ಎಸ್.ನಯನ ಮತ್ತಿತರರು ಇದ್ದರು.

24 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ ನಡೆದ ಸಭೆಯಲ್ಲಿ ಚಿಂತಕ ಕುಮಾರಸ್ವಾಮಿ ಮಾತನಾಡಿದರು. ಶ್ರೀಪತಿ ರಾವ್, ನಯನ ಮತ್ತಿತರರು ಇದ್ದರು.