ಕ್ರಿಯಾಶೀಲ ಚಿಂತನೆ ಮಾಡದ ಯುವಕರಿಂದ ದೇಶ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ-ಡಾ. ವೈದ್ಯ

| Published : Jan 13 2025, 12:48 AM IST

ಕ್ರಿಯಾಶೀಲ ಚಿಂತನೆ ಮಾಡದ ಯುವಕರಿಂದ ದೇಶ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ-ಡಾ. ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಯಾಶೀಲ ಚಿಂತನೆ ಮಾಡದೇ ಗುಲಾಮಗಿರಿಗೆ ಒಳಗಾಗುತ್ತಿರುವ ದೇಶದ ಯುವಕರು ಕೇಸರಿ, ಕೆಂಪು, ನೀಲಿ, ಹಸಿರು, ಬಿಳಿ ಬಾವುಟಗಳ ಮುಖವಾಡಗಳಲ್ಲಿ ಹುದುಗಿ ಹೋಗುತ್ತಿದ್ದಾರೆ. ಇಂತಹವರಿಂದ ದೇಶ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಕಳೆದ ಏಳೆಂಟು ದಶಕಗಳ ಹಿಂದೆ ದೇಶದ ಯುವಕರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದು ಬಿಇಎಸ್ ಎಂ ಕಾಲೇಜು ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ:ಕ್ರಿಯಾಶೀಲ ಚಿಂತನೆ ಮಾಡದೇ ಗುಲಾಮಗಿರಿಗೆ ಒಳಗಾಗುತ್ತಿರುವ ದೇಶದ ಯುವಕರು ಕೇಸರಿ, ಕೆಂಪು, ನೀಲಿ, ಹಸಿರು, ಬಿಳಿ ಬಾವುಟಗಳ ಮುಖವಾಡಗಳಲ್ಲಿ ಹುದುಗಿ ಹೋಗುತ್ತಿದ್ದಾರೆ. ಇಂತಹವರಿಂದ ದೇಶ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಕಳೆದ ಏಳೆಂಟು ದಶಕಗಳ ಹಿಂದೆ ದೇಶದ ಯುವಕರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದು ಬಿಇಎಸ್ ಎಂ ಕಾಲೇಜು ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರ ದಿನಾಚರಣೆ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ, ಕಾರುಣ್ಯ ಶಿಕ್ಷಣ ಸಂಸ್ಥೆ, ರೋಟರಿ ಸಂಸ್ಥೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ನಾನು ಕಂಡಂತೆ ಸ್ವಾಮಿ ವಿವೇಕಾನಂದ ಎಂಬ ವಿಷಯದ ಏರ್ಪಡಿಸಿದ್ದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಕ್ಕಿನ ದೇಹ-ಕಬ್ಬಿಣದ ನರಮಂಡಲದ-ದೃಢ ಮತ್ತು ಕಠಿಣ ಮನಸ್ಸನ್ನು ಭಾರತದ ಯುವಶಕ್ತಿ ಹೊಂದಿರಬೇಕು ಎಂದು ಆಶಿಸಿದವರಲ್ಲಿ ಸ್ವಾಮಿವಿವೇಕಾನಂದರು ಮೊದಲಿಗರು. ಆದರೆ ಈಗಿನ ವಾಸ್ತವವೇ ಬೇರೆಯಾಗುತ್ತಿದೆ. ರಕ್ತಕ್ಕೆ-ರಕ್ತ ಕೊಲೆಗೆ ಕೊಲೆ ಈ ಮಣ್ಣಿನ ಈ ನೆಲದ ಗುಣವಲ್ಲ ಎಂದು ಅಭಿಮಾನದಿಂದ ಹೇಳುತ್ತೇನೆ. ಭವಿಷ್ಯದ ದಿನಗಳಲ್ಲಿ ಭಾರತದ ಯುವಕರು ಬಹುದೊಡ್ಡ ಶಕ್ತಿಯಾಗಿ ಗುರ್ತಿಸಿಕೊಳ್ಳುವಂತೆ ಕರೆ ನೀಡಿದರು.

ನಿಮ್ಮ ನಿಷ್ಠೆ ಈ ದೇಶಕ್ಕೆ ಈ ನೆಲಕ್ಕೆ ಸೀಮಿತವಾಗಿರಲಿ: ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ, ಪಾರ್ಸಿ ಅದು ನಿಮ್ಮ ವೈಯಕ್ತಿಕ ಗುರುತು ಮಾತ್ರ ಈ ನೆಲದ ವಿಚಾರದಲ್ಲಿ ನೀವೆಲ್ಲರೂ ಭಾರತೀಯರು ಎಂಬುದನ್ನು ಯಾರೂ ಸಹ ಮರೆಯಬಾರದು. ನಿಮ್ಮ ನಿಷ್ಠೆ ಈ ದೇಶಕ್ಕೆ, ಈ ನೆಲಕ್ಕೆ ಸೀಮಿತವಾಗಿರಲಿ. ತೀರಾ ಹಸಿವಿನ ಸಂಕಷ್ಟಗಳ ಅನುಭವ ನಿಮಗಿಲ್ಲ, ಯಾವುದೇ ಭಯಂಕರ ಯುದ್ಧ, ಪ್ರಾಕೃತಿಕ ವಿಕೋಪಗಳು ನಡೆದಿಲ್ಲ. ಇಂದೇ ಎಚ್ಚೆತ್ತುಕೊಳ್ಳಿ, ದೇಶ ಸುಭೀಕ್ಷವಾಗಿದ್ದರೆ ಮಾತ್ರ ನಿಮ್ಮ ಭವಿಷ್ಯ ಸುಭಿಕ್ಷ ಬರುವ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತೆ ಸಲಹೆ ನೀಡಿದರು. ಎರಡೂ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರಿಗೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ 2000 ಮತ್ತು ರೋಟರಿ ಕ್ಲಬ್ ವತಿಯಿಂದ 2500 ನಗದು ಬಹುಮಾನ, ಪಾಲ್ಗೊಂಡಿದ್ದ ಎಲ್ಲ 60 ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ಬ್ರಹ್ಮಕುಮಾರಿ ಬಿ.ಕೆ. ಸುರೇಖಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರೋಟರಿ ಸಂಸ್ಥೆ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಕಾರುಣ್ಯ ಸಂಸ್ಥೆ ಅಧ್ಯಕ್ಷ ಬಸವರಾಜ ಹಿರೇಮತ್ತೂರ, ಸ್ನೇಹ ಸದನ ನಿರ್ದೇಶಕಿ ಸಿಸ್ಟರ್ ರೂಪಾ, ರೋಟರಿ ಸ್ಂಸ್ಥೆ ಪರಶುರಾಮ ಮೇಲಗಿರಿ, ಕಿರಣ ಮಾಳೇನಹಳ್ಳಿ, ಸತೀಶ ಅಗಡಿ, ವಿಶ್ವನಾಥ ಅಂಕಲಕೋಟಿ, ಶಿವರಾಜ ಚೂರಿ ಇನ್ನರ್ವ್ಹೀಲ್ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಸದಸ್ಯರಾದ ಲಕ್ಷ್ಮೀ ಉಪ್ಪಾರ, ರೂಪಾ ಕಡೇಕೊಪ್ಪ, ಪ್ರತಿಭಾ ಮೇಲಗಿರಿ, ಸುರೇಖಾ ಬೆಟಗೇರಿ ಇನ್ನಿತರರಿದ್ದರು. ಸಂಧ್ಯಾರಾಣಿ ದೇಶಪಾಂಡೆ ಸ್ವಾಗತಿಸಿದರು, ಶಂಭು ಹಾವೇರಿ ನಿರೂಪಿಸಿದರು. ಸುನಂದಾ ಹಿರೇಮಠ, ಎಂ.ಎಫ್.ಕರೇಣ್ಣನವರ, ಬಿ.ಕೆ.ಶಾಂತಾ ನಿರ್ಣಾಯಕರಾಗಿ ಕೆಲಸ ನಿರ್ವಹಿಸಿದರು.