ಸಾರಾಂಶ
ರಾಜ್ಯದಲ್ಲಿ ಜಾತಿಗಣತಿ ತಕ್ಷಣ ಮಾಡೋ ಅಂತ ವಿಚಾರ ಅಲ್ಲ, ಸಮಯ ತೆಗೆದುಕೊಳ್ಳುತ್ತೆ, ಸೂಕ್ಷ್ಮ ವಿಚಾರ ಈ ವಿಚಾರದಲ್ಲಿ ಇನ್ನೂ ಸರಿಯಾದ ನಿರ್ಧಾರ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಅರಕಲಗೂಡು : ರಾಜ್ಯದಲ್ಲಿ ಜಾತಿಗಣತಿ ತಕ್ಷಣ ಮಾಡೋ ಅಂತ ವಿಚಾರ ಅಲ್ಲ, ಸಮಯ ತೆಗೆದುಕೊಳ್ಳುತ್ತೆ, ಸೂಕ್ಷ್ಮ ವಿಚಾರ ಈ ವಿಚಾರದಲ್ಲಿ ಇನ್ನೂ ಸರಿಯಾದ ನಿರ್ಧಾರ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಅರಕಲಗೂಡಿನಲ್ಲಿ ನಡೆಯುತ್ತಿರುವ ಜೈಭೀಮ್ ಕಪ್ ಪಂದ್ಯಾವಳಿ ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿ, ರಾಜ್ಯದಲ್ಲಿ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ತಕ್ಷಣ ಮಾಡೋ ಅಂತ ವಿಚಾರ ಅಲ್ಲ ಟೈಮ್ ತೆಗೆದುಕೊಳ್ಳುತ್ತೆ, ಬಹಳಷ್ಟು ಸಭೆಗಳು ಆಗೋದಿದೆ, ಟೈಮ್ ಬೇಕು, ಈಗಲೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ, ಮನೆಗೆ ಹೋಗಿ ಸಹಿ ಮಾಡಿಸಿದ್ದಾರೆ, ಲೋಪಗಳ ಬಗ್ಗೆ ಅಧಿಕಾರಿಗಳು ಸರಿಪಡಿಸುತ್ತಾರೆ, ಇದರಲ್ಲಿ ರಾಜಕೀಯ ಲಾಭ, ನಷ್ಟ ಇಲ್ಲ, ಇದರಿಂದ ಪಕ್ಷಕ್ಕೆ ಲಾಭ ಆಗೋದಿಲ್ಲ, ಜಾತಿ ಗಣತಿ ವಿಚಾರ ಇನ್ನು ಸರಿಯಾದ ನಿರ್ಧಾರಕ್ಕೆ ಬಂದಿಲ್ಲ ಜಾತಿ ಗಣತಿ ಮಾಡಿಲ್ಲ, ಜಾತಿಗಣತಿ ವಿಚಾರ ಇನ್ನು ಆರು ತಿಂಗಳು ಆಗಬಹುದು, ಈಗಲೇ ನಿರ್ಧಾರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ಸರ್ಕಾರ ಬೀಳಿಸುತ್ತಾರೆ ಎಂಬ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಮಲ್ಲಿಕಾರ್ಜುನ್ ಖರ್ಗೆ ಹೇಳಿರುವುದು ಸತ್ಯ ಇದೆ. ಬಾರ್ಡರ್‌ನಲ್ಲಿ ಇದ್ದೋರು ಮಲಗಲಿಕ್ಕೆ ಆಗೋದಿಲ್ಲ. ಡೇ ಒನ್‌ನಿಂದ ಸರ್ಕಾರ ಬೀಳಿಸಬೇಕು ಅಂತ ಇದೆ. ಅದ್ರೆ ನಾವು ಹುಷಾರಾಗಿರಬೇಕು " ಎಂದು ಹೇಳಿದರು.