ಮೋದಿ ಹೆಸ್ರಲ್ಲಿ ಟಿಕೆಟ್‌ ಪಡೆದು ಸೋತವ್ರಿಗೆ ಏನನ್ನಬೇಕು: ಖರ್ಗೆ

| Published : Apr 02 2024, 01:04 AM IST

ಮೋದಿ ಹೆಸ್ರಲ್ಲಿ ಟಿಕೆಟ್‌ ಪಡೆದು ಸೋತವ್ರಿಗೆ ಏನನ್ನಬೇಕು: ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಅವರ ಹೆಸರಲ್ಲಿ ಟಿಕೆಟ್‌ ಪಡೆದು ಚುನಾವಣೆಗೆ ನಿಂತು ಕಳೆದ ವಿಧಾನಸಭೆಯಲ್ಲಿ ಸೋಲುವುದಿರಲಿ, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಮಾಲೀಕಯ್ಯ ಗುತ್ತೇದಾರ ಅವರನ್ನ ಏನೆನ್ನಬೇಕು? ಸೋತು ಸುಣ್ಣಾದ ಹುಲಿ ಎನ್ನಬೇಕಾ? ಅಥವಾ ಅವರಿಗೆ ಇಲಿ ಎನ್ನಬೇಕಾ ಅಥವಾ ಹೊಸತೇನಾದರೂ ಹೇಳಬೇಕಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತಲ್ಲೇ ಗುತ್ತೇದಾರರನ್ನು ಕುಟುಕಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಮೋದಿ ಅವರ ಹೆಸರಲ್ಲಿ ಟಿಕೆಟ್‌ ಪಡೆದು ಚುನಾವಣೆಗೆ ನಿಂತು ಕಳೆದ ವಿಧಾನಸಭೆಯಲ್ಲಿ ಸೋಲುವುದಿರಲಿ, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಮಾಲೀಕಯ್ಯ ಗುತ್ತೇದಾರ ಅವರನ್ನ ಏನೆನ್ನಬೇಕು? ಸೋತು ಸುಣ್ಣಾದ ಹುಲಿ ಎನ್ನಬೇಕಾ? ಅಥವಾ ಅವರಿಗೆ ಇಲಿ ಎನ್ನಬೇಕಾ ಅಥವಾ ಹೊಸತೇನಾದರೂ ಹೇಳಬೇಕಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತಲ್ಲೇ ಗುತ್ತೇದಾರರನ್ನು ಕುಟುಕಿದ್ದಾರೆ.

ನಗರದ ಅಪ್ಪ ಸೆಂಟನರಿ ಹಾಲ್‌ನಲ್ಲಿ ಸೋಮವಾರ ನಡೆದ ಕಲಬುರಗಿ ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

ಅಫಜಲ್ಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ‘ಹುಲಿಯನ್ನೇ ಹೊಡೆದಿದ್ದೇವೆ ಇಲಿ ಯಾವ ಲೆಕ್ಕ’ ಎಂದು ಖರ್ಗೆ ಪರಿವಾರ, ಲೋಕ ಕದನ ರಾಜಕೀಯದ ಬಗ್ಗೆ ನೀಡಿರುವ ಹೇಳಿಕೆಗೆ ಪ್ರಸ್ತಾಪಿಸಿದ ಖರ್ಗೆ , ಈ ಮಾತು ಹೇಳಿರುವುದು ಎರಡು ಸಲ ಸೋತವರು, ಹೆಚ್ಚಿಗೆ ಏನನ್ನೂ ಹೇಳಲಾರೆ ಎಂದರು.

ಕಳೆದ‌ ಲೋಕಸಭೆ ಚುನಾವಣೆಯಲ್ಲಿ ಜನರು ಕಲಬುರಗಿಗೆ ಒಬ್ಬ ಸಂಸದ ಬೇಕು ಎಂದು ಓಟು ಹಾಕಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಚಿಂಚೋಳಿ ಸಂಸದರು ಎಂದು ಕುಟುಕಿದ ಸಚಿವರು, ಕಾಂಗ್ರೆಸ್‌ದು ರೀಲ್ ಬಿಜೆಪಿದು ರಿಯಲ್ ಎಂದು ಜಾಧವ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಿಗೆ ತಲುಪುತ್ತಿವೆ ಅದು ರಿಯಲ್ ಎಂದರು.

‘ಜಾಧವ್ ಅವರೇ ರೀಲ್ ಹಾಗೂ ರಿಯಲ್ ಬಗ್ಗೆ ಚರ್ಚೆಗೆ ನಾವು ರೆಡಿ ಇದ್ದೇವೆ‌ ನೀವು ಚರ್ಚೆಗೆ ಬರ್ತೀರಾ. ನನ್ನ ಬದಲು ನಮ್ಮ ಕಾರ್ಯಕರ್ತರೇ ಬರುತ್ತಾರೆ, ನೀವು ಚರ್ಚೆಗೆ ಬನ್ನಿ’ ಎಂದು ಆವ್ಹಾನ ನೀಡಿದರು.

ಕೋಲಿ ಹಾಗೂ ಕಬ್ಬಲಿಗ ಸಮೂದಾಯಕ್ಕೆ ಎಸ್ ಟಿಗೆ ಸೇರಿಸುವ ಭರವಸೆ ನೀಡಿದ್ದ ಬಿಜೆಪಿ ಈಗ ಮೋಸ ಮಾಡಿದೆ. ತೆರಿಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಧವ ಸೇರಿದಂತೆ ರಾಜ್ಯದ ಇತರೆ ಎಂಪಿ ಗಳು ಮಾತನಾಡುವುದಿಲ್ಲ ಎಂದು ಅವರು ಟೀಕಿಸಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಗೆ ಎನ್ನುವ ಬಿಜೆಪಿ ನಾಯಕರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಪಕ್ಷದ ದೋ ನಂಬರ್ ದಂಧೆ ನಡೆಸುವವರಿಗೆ ಒಳಗೆ ಹಾಕಿದ್ದೇವಲ್ಲ ಹಾಗಾಗಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇತ್ತೀಚಿಗೆ ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ನಡೆದಿರುವ ಪ್ರಕರಣದ ಪ್ರಮುಖ ಆರೋಪಿ ತರಬೇತಿ ಪಡೆದಿರುವುದು ಅರಗ ಜ್ಞಾನೇಂದ್ರ ಅವರ ಸ್ವಂತ ಕ್ಷೇತ್ರದಲ್ಲಿ. ಇದನ್ನು ಕಾನೂನು ಸುವ್ಯವಸ್ಥೆ ಕುಸಿತ ಎನ್ನಬಹುದು ಎಂದು ತಿರುಗೇಟು ನೀಡಿದರು. ಬಿಜೆಪಿಯ ದುರಾಡಳಿತದಿಂದಾಗಿ ರಾಜ್ಯ ಅಭಿವೃದ್ದಿ ವಿಚಾರದಲ್ಲಿ ಹಿಂದೆ ಹೋಗಿದೆ. ಕಲಬುರಗಿಯಲ್ಲಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಮಾತನಾಡಿ, ರಾಜ್ಯ ಸರ್ಕಾರದ ಯೋಜನೆಗಳನ್ನು ಜನರ ಮನೆಗೆ ತಲುಪಿಸಬೇಕು. ಆ ಮೂಲಕ ಜನರ ಬಳಿ ಮತ ಯಾಚಿಸಬೇಕು ಎಂದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರು, ಶಾಸಕ ತಿಪ್ಪಣ್ಣ ಕಮಕನೂರ್‌ ಮಾತನಾಡಿ, ಕೋಲಿ ಸಮಾಜವನ್ನು ಎಸ್ ಟಿ‌ಗೆ ಸೇರಿಸುವುದಾಗಿ ನಂಬಿಸಿ ಉಮೇಶ ಜಾಧವ ಬಿಜೆಪಿಗೆ ಕರೆದುಕೊಂಡು ಹೋದ, ಆದರೆ ಮೋಸ ಮಾಡಿದ. ದೇಶದಲ್ಲಿಯೇ ಅತಿ ಹೆಚ್ಚು ಸುಳ್ಳು ಹೇಳುವ ಎಂಪಿ ಇದ್ದರೆ ಅದು ಜಾಧವ್. ಅವನನ್ನು ಸುಳ್ಳಿನ ಯೂನಿವರ್ಸಿಟಿಯ ಉಪಕುಲಪತಿಯನ್ನಾಗಿ ಮಾಡಬೇಕು ಎಂದು ವ್ಯಂಗ್ಯವಾಡಿದರು. ಕೆಕೆಅರ್ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್ ಮಾತನಾಡಿದರು.

ಪಂಚ ಗ್ಯಾರಂಟಿ ಬಾಣ ಬಿಡ್ರಿ: ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳೆಲ್ಲವೂ ಜನಮನ ತಲುಪಿವೆ. ಹೀಗಾಗಿ ನಮ್ಮ ಕಾರ್ಯಕರ್ತರ ಕೈಯಲ್ಲಿ ಪಂಚ ಗ್ಯಾರಂಟಿ ಬಾಣಗಳಿವೆ. ಅವುಗಳನ್ನೇ ಬಿಜೆಪಿ ವಿರುದ್ಧ ಪ್ರಯೋಗಿಸೋಣ, ಮನೆ ಮನೆ ಹೋಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿರಿ, ಮತ ಪಡೆಯಿರಿ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದರು.

ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವರಾದ ಬಾಬುರಾವ ಚಿಂಚನಸೂರು, ರೇವು ನಾಯಕ ಬೆಳಮಗಿ, ಡೇವಿಡ್ ಸಿಮೆಯೋನ್, ಮಾಜಿ ಶಾಸಕ ಶರಣಪ್ಪ ಮಟ್ಟೂರು,ಚಂದ್ರಿಕಾ ಪರಮೇಶ್ವರಿ, ಶರಣು ಮೋದಿ, ನೀಲಕಂಠ ಮೂಲಗೆ, ಮಜರ್ ಖಾನ್, ಡಾ ಕಿರಣ್ ದೇಶಮುಖ, ಪ್ರವೀಣದ ಹರವಾಳ, ಫಾರೂಖ್ ಸೇರಿದಂತೆ ಹಲವರಿದ್ದರು.