ಸಾರಾಂಶ
ಸುರಪುರ : ಅಶ್ಲೀಲ ವಿಡಿಯೋ ವಿಚಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎರಡು ತಿಂಗಳ ಹಿಂದೆಯೇ ತಿಳಿದಿತ್ತಾದರೂ ಅದನ್ಯಾಕೆ ಮುಚ್ಚಿಟ್ಟರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ತಿಂಗಳ ಕಾಲ ಪೆನ್‌ಡ್ರೈವ್ ಅವರ ಬಳಿಯೇ ಯಾಕೆ ಹಿಡಿದುಕೊಂಡಿದ್ದರು? ಸರ್ಕಾರ ಅವರದ್ದೇ ಇತ್ತಲ್ಲ. ತನಿಖೆಗೆ ಯಾಕೆ ಒಳಪಡಿಸಿಲ್ಲ? ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮಾಹಿತಿ ಇದ್ದರೂ ಸಹ ಚುನಾವಣೆ ಸಂದರ್ಭದಲ್ಲಿ ಅಸ್ತ್ರವಾಗಿ ಉಪಯೋಗಿಸಲು ಡಿ.ಕೆ.ಶಿವಕುಮಾರ್ ಕಾಯುತ್ತಿದ್ದರು. ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋದರೂ ಮರಳಿ ಬಂದು ಎಸ್‌ಐಟಿ ತಂಡದ ತನಿಖೆಗೆ ಒಳಪಡಬೇಕಿದೆ. ತಪ್ಪು ಮಾಡಿಲ್ಲವೆಂದರೆ ಭಯ ಪಡಬೇಕಿಲ್ಲ. ಪ್ರಜ್ವಲ್ ಮಾಡಿರುವುದು ತಪ್ಪಾಗಿದ್ದರೆ ಎಸ್ಐಟಿ ತನಿಖೆ ಮಾಡಿ ವರದಿ ನೀಡುತ್ತದೆ. ಅದರನ್ವಯ ಶಿಕ್ಷೆಯಾಗುತ್ತದೆ. ಇಂಥ ಕೆಲಸಕ್ಕೆ ಬಿಜೆಪಿ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.
ಪ್ರಜ್ವಲ್ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ರಾಹುಲ್ ಗಾಂಧಿ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ರಾಜ್ಯದ ಮತದಾರರು ಬಿಜೆಪಿ ಪರವಾಗಿದ್ದು, ಮೋದಿ ಮತ್ತೆ ಪ್ರಧಾನಿ ಆಗಲಿ ಎಂದು ಆಶಿಸುತ್ತಿದ್ದಾರೆ ಎಂದು ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))