ಯಾವುದೇ ಕೆಲಸ ಕೊಟ್ಟರೂ ಅಭಿಮಾನದಿಂದ ಮಾಡುವೆ

| Published : Aug 19 2024, 12:50 AM IST

ಯಾವುದೇ ಕೆಲಸ ಕೊಟ್ಟರೂ ಅಭಿಮಾನದಿಂದ ಮಾಡುವೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ಶಾಸಕನಾದ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶ್ರೀಗಳ ಪಟ್ಟಾಭಿಷೇಕ ಸಮಾರಂಭದಲ್ಲಿ ಸಮಿತಿ ನನಗೆ ನೀಡಿದ ಯಾವುದೇ ಕೆಲಸವನ್ನು ಅಭಿಮಾನ ಹಾಗೂ ಗೌರವದಿಂದ ಮಾಡುತ್ತೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಈ ಭಾಗದ ಶಾಸಕನಾದ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶ್ರೀಗಳ ಪಟ್ಟಾಭಿಷೇಕ ಸಮಾರಂಭದಲ್ಲಿ ಸಮಿತಿ ನನಗೆ ನೀಡಿದ ಯಾವುದೇ ಕೆಲಸವನ್ನು ಅಭಿಮಾನ ಹಾಗೂ ಗೌರವದಿಂದ ಮಾಡುತ್ತೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಅವರು ಶನಿವಾರ ಪಟ್ಟಣದ ಗುರುಸಿದ್ದೇಶ್ವರ ಮಠದಲ್ಲಿ ಜರುಗಿದ ಪಟ್ಟಾಭಿಷೇಕ-ನಿರ್ವಹಣಾ ಸಮಿತಿ ರಚನೆಗೆ ಕರೆದ ಮುಖಂಡರ ಸಭೆಯಲ್ಲಿ ಮಾತನಾಡಿ, ಗುಳೇದಗುಡ್ಡದ ಗುರುಸಿದ್ದೇಶ್ವರ ಮಠ ನಾಡಿನಲ್ಲಿ ಹೆಸರು ಮಾಡಿದೆ. ಈ ಮಠದಲ್ಲಿದ್ದುಕೊಂಡು ನಮ್ಮ ತಂದೆಯವರು ಶಾಲೆ ಕಲಿತಿದ್ದು. ಶ್ರೀಮಠದ ಹಾಗೂ ಶ್ರೀಗಳ ಅಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಈ ಭಾಗದ ಶಾಸಕನಾದ ನನಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಪುಣ್ಯದ ಕೆಲಸವೇ ಸರಿ. ಸಮಿತಿ ಪದಾಧಿಕಾರಿಗಳೊಂದಿಗೆ ಬೆರೆತು ಸಮಾರಂಭ ಯಶಸ್ವಿಯಾಗಲು ನಾನು ತನುಮನಧನದಿಂದ ಸೇವೆ ಮಾಡುವೆ ಎಂದರು.

ಶ್ರೀ ಬಸವರಾಜ ಪಟ್ಟದಾರ್ಯ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ಶ್ರೀಮಠ ಒಂದು ಜಾತಿಗೆ ಸೀಮಿತವಾದುದಲ್ಲ. ಪಟ್ಟಸಾಲಿ ನೇಕಾರ ಸಮಾಜದ ಮಠ ಎಂದು ಕರೆಯಿಸಿಕೊಂಡರೂ ಎಲ್ಲ ಧರ್ಮ, ಜಾತಿಯ ಭಕ್ತರನ್ನು ಒಳಗು ಮಾಡಿಕೊಂಡು 1937ರಲ್ಲಿ ಸ್ಥಾಪಿತವಾದ ಮಠವಿದು. ಶ್ರೀಮಠದ ತೃತೀಯ ಪೀಠಾಧಿಕಾರಿ ಎಂದು ಶ್ರೀ ಗುರುಬಸವ ದೇವರನ್ನು ಘೋಷಿಸಿದ್ದೂ, ಅವರ ಪಟ್ಟಾಭೀಷೇಕ ಕಾರ್ಯಕ್ರಮ ಬರುವ ಡಿ.23 ರಂದು ಜರುಗಲಿದ್ದೂ, ಆ ಕಾರ್ಯಕ್ರಮದ ಪೂರ್ವಭಾವಿಯಾಗಿ ಕರೆದ ಈ ಸಭೆಯಲ್ಲಿ ಎಲ್ಲ ಸಭೀಕ ಭಕ್ತಾದಿಗಳು ಸಮಾರಂಭದ ರೂಪರೇಷೆಗಳ ನೀಲನಕ್ಷೆ ತಯಾರಿಸಿ ಸ್ವಾಗತ ಸಮಿತಿ ರಚಿಸಿ ಎಂದು ಕೇಳಿಕೊಂಡರು. ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು, ಶಿರೂರಿನ ಮಹಾಂತತೀರ್ಥ ಶ್ರೀಗಳು, ಕೋಟೆಕಲ್ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಶ್ರೀಗಳು, ಅಮರೇಶ್ವರ ಮಠದ ನೀಲಕಂಠ ಶ್ರೀಗಳು, ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಶ್ರೀಗಳು ಪಟ್ಟಾಭಿಷೇಕ ಕಾರ್ಯಕ್ರಮದ ಯಶಸ್ವಿಗೆ ನಾವೆಲ್ಲ ಪಾಲ್ಗೊಳ್ಳುವುದಾಗಿ ಮಾತನಾಡಿದರು.

ಶ್ರೀಗುರುಬಸವ ದೇವರು, ಮಾಜಿ ಶಾಸಕ ರಾಜಶೇಖರ ಶೀಲವಂತ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಅಶೋಕ ಬರಗುಂಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.