ಸಾರಾಂಶ
ನಾನು ಮೂಲತಃ ಮೈಸೂರಿನವನು. ಇಲ್ಲೆ ಆಡಿ ಬೆಳೆದವನು. ಎಸ್ ಡಿಎಂ ಕಾಲೇಜಿನ ಜೊತೆಗೆ ನನಗೆ ಅವಿನಾಭಾವ ಸಂಬಂಧವಿದೆ. ಕಾಲೇಜನ್ನು ನೋಡುತ್ತಾ ಬೆಳೆದವನು. ನಾನು ಇಲ್ಲಿಗೆ ಮುಖ್ಯ ಅತಿಥಿಯಾಗಿ ಬಂದಿರುವುದು ನಿಜಕ್ಕೂ ಸಂತೋಷ ತಂದಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಿಗೆ ಶಿಕ್ಷಣ ಬಹುಮುಖ್ಯ, ಅದನ್ನು ಕಡೆಗಣಿಸಬೇಡಿ. ನೀವು ಏನೇ ಮಾಡಿದರೂ ಶಿಕ್ಷಣದ ಕಡೆಗೆ ನಿಮ್ಮ ಗಮನವಿರಲಿ ಎಂದು ನಟ ರಜತ್ ಕಿಸನ್ ತಿಳಿಸಿದರು.ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಭಿಜ್ಞಾನ್ 2025 ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಸಾಂಸ್ಕೃತಿಕ ನಗರಿ ಮೈಸೂರಿಂದರೇ ನನಗೆ ಪಂಚಪ್ರಾಣ. ಮೈಸೂರಿನಲ್ಲಿ ಶಾಂತಿ ನೆಮ್ಮದಿ ದೊರಕುತ್ತದೆ. ಇಲ್ಲಿನ ಚಾಮುಂಡಿಬೆಟ್ಟ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳು ನನಗೆ ಬಹಳ ಇಷ್ಟ. ಮೈಸೂರಿನ ಜನತೆ ನನಗೆ ಹೆಚ್ಚು ಪ್ರೀತಿಯನ್ನು ಕೊಟ್ಟಿದ್ದಾರೆ ಎಂದರು.
ನಟ, ಮಾಡಲ್ ಆದ ಅಭಿಷೇಕ್ ದಾಸ್ ಮಾತನಾಡಿ, ನಾನು ಮೂಲತಃ ಮೈಸೂರಿನವನು. ಇಲ್ಲೆ ಆಡಿ ಬೆಳೆದವನು. ಎಸ್ ಡಿಎಂ ಕಾಲೇಜಿನ ಜೊತೆಗೆ ನನಗೆ ಅವಿನಾಭಾವ ಸಂಬಂಧವಿದೆ. ಕಾಲೇಜನ್ನು ನೋಡುತ್ತಾ ಬೆಳೆದವನು. ನಾನು ಇಲ್ಲಿಗೆ ಮುಖ್ಯ ಅತಿಥಿಯಾಗಿ ಬಂದಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.ಯುವರಾಜ ಕಾಲೇಜಿಗೆ ಟ್ರೋಫಿ:
ಎರಡು ದಿನಗಳ ಈ ಉತ್ಸವದಲ್ಲಿ ವಿಜ್ಞಾನ ಸ್ಪರ್ಧೆಗಳಲ್ಲಿ ಗುರುತ್ವ, ಫೋಟೋಗ್ರಫಿಯಲ್ಲಿನ ವಿಜ್ಞಾನ, ಇ-ಪೋಸ್ಟರ್ ಪ್ರಸ್ತುತಿ, ವಾಣಿಜ್ಯ ಮತ್ತು ನಿರ್ವಹಣಾ ಸ್ಪರ್ಧೆ ಮಾರ್ಕೆಟಿಂಗ್ ಸವಾಲು ಹಣಕಾಸು ಸಂಬಂಧಿತ ಸ್ಪರ್ಧೆ, ಮಾರ್ಕೆಟಿಂಗ್ ಸವಾಲು, ಹಣಕಾಸು ಸಂಬಂಧಿತ ಸ್ವರ್ಧೆ, ಸಾಂಸ್ಕೃತಿಕ ಸ್ಪರ್ಧೆ, ಗಾಯನ ಸ್ಪರ್ಧೆ, ಫ್ಲಾಶ್ ಫಿಕ್ಸನ್ ಸ್ಪರ್ಧೆ, ಸಾಮಾನ್ಯ ಜ್ಞಾನ ಸ್ಪರ್ಧೆ, ದಿ ಗ್ರ್ಯಾಂಡ್ ಟ್ರಷರ್ ಹಂಟ್ ಮೊದಲಾದವುಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಟ್ರೋಪಿ ನೀಡಿ ಗೌರವಿಸಿದರು. ಈ ಸಾಂಸ್ಕೃತಿಕ ಉತ್ಸವದ ಒಟ್ಟಾರೆ ಚಾಂಪಿಯನ್ ಶಿಫ್ ಪ್ರಶಸ್ತಿಯನ್ನು ಯುವರಾಜ ಕಾಲೇಜಿನ ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡರು.ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ, ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಜ್ಯೋತಿಲಕ್ಷ್ಮಿ ಕಾವ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದಾ, ಪಿಯು ಕಾಲೇಜಿನ ಪ್ರಾಂಶುಪಾಲೆ ನಯನಕುಮಾರಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ತಸ್ವಿ ಗಂಗಮ್ಮ ಇದ್ದರು. ನಿರ್ಮಾ ನಿರೂಪಿದರು. ಐಶ್ವರ್ಯಾ ಪ್ರಸಾದ್ ಸ್ವಾಗತಿದರು. ನಿಸರ್ಗ ಮಹೇಶ್ ವಂದಿಸಿದರು.