ಪ್ರಿಯದರ್ಶಿನಿ ಸೊಸೈಟಿ ಪಡುಬಿದ್ರಿ ಶಾಖೆಯಿಂದ ವೀಲ್‌ಚೇರ್ ವಿತರಣೆ

| Published : Sep 01 2024, 01:52 AM IST

ಪ್ರಿಯದರ್ಶಿನಿ ಸೊಸೈಟಿ ಪಡುಬಿದ್ರಿ ಶಾಖೆಯಿಂದ ವೀಲ್‌ಚೇರ್ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ದಿನದಲ್ಲಿ ವೀಲ್‌ ಚೇರ್‌ ಅಗತ್ಯ ಇರುವವರು ಪಡುಬಿದ್ರಿ ಶಾಖೆಯನ್ನು ಸಂಪರ್ಕಿಸಬಹುದು ಎಂದು ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬರ್ನಾರ್ಡ್ ಹೇಳಿದರು.

ಮೂಲ್ಕಿ: ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಪಡುಬಿದ್ರಿ ಶಾಖೆಯ ಎರಡನೇ ವರ್ಷಾಚರಣೆ ಅಂಗವಾಗಿ ಬಡ ಕುಟುಂಬಗಳ ಅಂಗವಿಕಲರಿಗೆ ಉಚಿತವಾಗಿ ಗಾಲಿಕುರ್ಚಿಗಳನ್ನು ಶಾಖೆಯಲ್ಲಿ ಸಾಂಕೇತಿಕವಾಗಿ ವಿತರಿಸಲಾಗಿದೆ. ಮುಂದಿನ ದಿನದಲ್ಲಿ ಇದರ ಅಗತ್ಯ ವಿದ್ದವರು ಪಡುಬಿದ್ರಿ ಶಾಖೆಯನ್ನು ಸಂಪರ್ಕಿಸಬಹುದು ಎಂದು ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬರ್ನಾರ್ಡ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ಣಾಟಕ ಬ್ಯಾಂಕ್ ಪಡುಬಿದ್ರಿ ಶಾಖಾ ಪ್ರಬಂಧಕ ಪ್ರವೀಣ್ ಕುಮಾ‌ರ್, ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ನಿಸ್ವಾರ್ಥ ಸೇವೆಯಿಂದ ಜನಮನ ಗೆಲ್ಲುವ ಮೂಲಕ ಉತ್ತಮ ಸಂಸ್ಥೆಯಾಗಿ ಮೂಡಿ ಬಂದಿದೆ. ಬ್ಯಾಂಕಿನ ಲಾಭಾಂಶದಲ್ಲಿ ದೀನರ ಧ್ವನಿಯಾಗಿ ಈ ರೀತಿಯ ಸಮಜಮುಖಿ ಕೆಲಸಗಳನ್ನು ಮಾಡುವುದು ಇತರ ಸಂಘ-ಸಂಸ್ಥೆಗಳಿಗೆ ಮಾದರಿ ಎಂದರು.

ಈ ಸಂದರ್ಭ ಮುಖ್ಯ ಅಥಿತಿಯಾಗಿ ಪಡುಬಿದ್ರಿ ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷೆ ಗೀತಾ ಅರುಣ್, ಮಾತೃ ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ನಿರ್ದೇಶಕರಾದ ಉಮಾನಾಥ ಜೆ. ಶೆಟ್ಟಿಗಾ‌ರ್, ಶಾಖಾ ಪ್ರಬಂಧಕಿ ಪ್ರಜ್ಞಾಶ್ರೀ ಚಿರಾಗ್ ಇದ್ದರು.