ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ಹೋಂ ಸ್ಟೇಗಳಿಗೆ ಜಿಲ್ಲಾಡಳಿತ ನೋಟೀಸ್‌ ಜಾರಿ ಮಾಡಿದೆ. ಆದರೆ ಅನುಮತಿ ನೆಪದಲ್ಲಿ ಹೆಚ್ಚುವರಿ ಕಟ್ಟಡಗಳ ಕಟ್ಟಿರುವ ರೆಸಾರ್ಟ್‌ಗಳಿಗೆ ನೋಟೀಸ್‌ ನೀಡಿಲ್ಲ!ಅಕ್ರಮ ಹೋಂ ಸ್ಟೇಗಳಿಗಿಂತಲೂ ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್‌ಗಳು ಆರಂಭವಾದ ಸಮಯದಲ್ಲಿ ಹಾಗೂ ಕಟ್ಟಡಗಳ ನಕ್ಷೆಗಿಂತಲೂ ಹೆಚ್ಚುವರಿ ಕಟ್ಟಡಗಳು ಕಟ್ಟಿದ್ದಾರೆ.ಅಲ್ಲದೆ, ಕೆಲ ರೆಸಾರ್ಟ್‌ಗಳಲ್ಲಿ ಈಜುಕೊಳ, ಡಾರ್ಮೆಂಟರಿ ಕಟ್ಟಡಗಳು ಕಳೆದ ದಶಕಗಳಿಂದಲೂ ಬಂಡೀಪುರ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳ ಶಾಮೀಲಿನೊಂದಿಗೆ ಅಕ್ರಮವಾಗಿ ತಲೆ ಎತ್ತಲು ಪ್ರಮುಖ ಕಾರಣವಾಗಿದೆ.ಇತ್ತೀಚಗೆ ರೈತಸಂಘಟನೆಗಳು ಬಂಡೀಪುರ ಸುತ್ತಮುತ್ತಲಿನ ಅಕ್ರಮ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳ ವಿರುದ್ಧ ಧ್ವನಿ ಎತ್ತಿದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತು ನೋಟಿಸ್‌ ನೀಡಿತ್ತು.ಆದರೆ, ಅನುಮತಿ ನೆಪದಲ್ಲಿ ಅಕ್ರಮವಾಗಿ ರೆಸಾರ್ಟ್‌ನಲ್ಲಿ ಹೆಚ್ಚುವರಿ ಕಟ್ಟಡಗಳು ಕಟ್ಟಲು ಅವಕಾಶ ಮಾಡಿ ಕೊಟ್ಟ ಅಧಿಕಾರಿಗಳು ಅಕ್ರಮವಾಗಿ ಪರಿಸರ ಸೂಕ್ಷ್ಮ ವಲಯದಲ್ಲಿ ಕೋಟಿಗಟ್ಟಲೇ ಹಣ ಸಂಪಾದನೆ ಮಾಡಿದ ರೆಸಾರ್ಟ್‌ ಮಾಲೀಕರ ಮೇಲೂ ಕ್ರಮವಾಗಬೇಕಿದೆ.ಸೂಕ್ಷ್ಮ ಪರಿಸರ ವಲಯದಲ್ಲಿ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಿಂದ ಪರಿಸರ ಹಾಗೂ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂದು ರೈತ ಸಂಘಟನೆಗಳು ಆಗ್ರಹದ ಬೆನ್ನಲ್ಲೇ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೆಸರೇಳಲಿಚ್ಚಿದ ಅರಣ್ಯಾಧಿಕಾರಿ ಹೇಳಿದ್ದಾರೆ.ಅತ್ತ ಪರಿಸರ ಹಾಗೂ ವನ್ಯಜೀವಿಗಳಿಗೆ ತೊಂದರೆ, ಇತ್ತ ಪರಿಸರ ಹಾಗೂ ವನ್ಯಜೀವಿಗಳ ಹೆಸರಿನಲ್ಲಿ ದುಬಾರಿ ಬಾಡಿಗೆ ವಸೂಲಿ ಮಾಡುವ ರೆಸಾರ್ಟ್‌ ಹಾಗೂ ಹೋಂ ಸ್ಟೇ ಮಾಲೀಕರ ಮೇಲೂ ಕ್ರಮವಾಗಬೇಕು ಎಂದು ಪರಿಸರವಾದಿ ಗುರು ಆಗ್ರಹಿಸಿದ್ದಾರೆ.೨೦೧೨ರಲ್ಲಿ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಗೂ ಮುನ್ನ ಇದ್ದ ರೆಸಾರ್ಟ್‌ಗೆ ಇದ್ದ ಅನುಮತಿ ಹಾಗೂ ೨೦೧೨ ರ ಬಳಿಕ ಹೆಚ್ಚುವರಿ ಕಟ್ಟಡಗಳಿರುವ ಬಗ್ಗೆ ಜಿಲ್ಲಾಡಳಿತ ಸ್ಥಳ ಪರಿಶೀಲಿಸಿದರೆ ಮತ್ತಷ್ಟು ಅಕ್ರಮ ಬಯಲಿದೆ ಬರಲಿದೆ.ಕೃಷಿ ಜಮೀನು ಅನ್ಯಕ್ರಾಂತವಾದ ಬಳಿಕ ವಾಣಿಜ್ಯ ಉದ್ದೇಶಕ್ಕೆ ಬಳಸಲಿ ಅದು ತಪ್ಪಲ್ಲ. ಆದರೆ ಅನ್ಯಕ್ರಾಂತವಾಗದೆ ಕೃಷಿ ಜಮೀನಿನಲ್ಲಿ ಅಕ್ರಮ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳು ತಲೆ ಎತ್ತಿರುವುದನ್ನು ಗಮನಿಸಿದರೆ ಜಿಲ್ಲಾ ಮತ್ತು ತಾಲೂಕು ಟಾಸ್ಕ್‌ ಸಮಿತಿ ಜಾಣ ಮೌನ ವಹಿಸಿದೆ.ಅಕ್ರಮವಾಗಿ ಹೆಚ್ಚುವರಿ ಕಟ್ಟಡಗಳನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್‌ ಹಾಗೂ ಹೋಂ ಸ್ಟೇ ಹೆಸರಿನಲ್ಲಿ ಕಟ್ಟಿಕೊಂಡು ಪ್ರವಾಸಿಗರಿಂದ ದುಬಾರಿ ಹಣ ವಸೂಲಿ ಮಾಡಿದ್ದು ಅಲ್ಲದೆ, ತೆರಿಗೆ ಕಟ್ಟದೆ ಮೋಸ ಮಾಡಿದ ಬಗ್ಗೆಯೂ ಜಿಲ್ಲಾಡಳಿತ ತನಿಖೆ ನಡೆಸಬೇಕು ಎಂದು ರೈತಸಂಘಟನೆಗಳು ಆಗ್ರಹಿಸಿವೆ.ತನಿಖೆ ನಡೆಸಲಿ:ಚಾಮರಾಜನಗರ ನೂತನ ಜಿಲ್ಲಾಧಿಕಾರಿಗಳು ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ಹಾಗೂ ಅನುಮತಿ ಹೆಸರಿನಲ್ಲಿ ನಿರ್ಮಿಸಿಕೊಂಡ ರೆಸಾರ್ಟ್‌ಗಳ ಮೇಲೆ ತನಿಖೆ ನಡೆಸಲಿ ಎಂದು ಸಾರ್ವಜನಿಕರು ಹಾಗೂ ರೈತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.--- ನೋಟೀಸ್‌ಗೂ ಕ್ಯಾರೆ ಎನ್ನದ ಕಂಟ್ರಿ ಕ್ಲಬ್!ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಕಂಟ್ರಿ ಕ್ಲಬ್‌ನಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಮಂಗಲ ಗ್ರಾಪಂ ನೋಟಿಸ್‌ ಜಾರಿ ಮಾಡಿದ್ದರೂ ಕ್ಯಾರೆ ಎಂದಿಲ್ಲ. ಅಕ್ರಮ ಕಟ್ಟಡ ತೆರವುಗೊಳಿಸಬೇಕು ಎಂದು ಮಂಗಲ ಗ್ರಾಪಂ ಪಿಡಿಒ ಮೋಹನ್‌ ಕುಮಾರ್‌ ಗೌಡ ನೋಟಿಸ್‌ ಅನ್ನು ಜ.೧೩ರಂದು ನೀಡಿದ್ದಾರೆ ಆದರೆ ಕಾಮಗಾರಿ ತೆರವಿಗೆ ಮುಂದಾಗಿಲ್ಲ.-- ಕನ್ನಡಪ್ರಭವರದಿ ಪ್ರಕಟಿಸಿತ್ತು!ದ ಕಂಟ್ರಿ ಕ್ಲಬ್‌ ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ಮುಂದು ಎಂದು ಕಳೆದ ಜ.೨೧ರ ಕನ್ನಡಪ್ರಭದಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.-- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ಪರಿಸರ ವಲಯದಲ್ಲಿರುವ ರೆಸಾರ್ಟ್‌ಗಳಲ್ಲಿ ಅನುಮತಿಗಿಂತ ಹೆಚ್ಚು ಕಟ್ಟಡ ಹಾಗೂ ನಿಯಮ ಉಲ್ಲಂಘಿಸಿದ್ದರೆ ದಾಖಲೆ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗುತ್ತೇನೆ.- ಶ್ರೀರೂಪಾ, ಜಿಲ್ಲಾಧಿಕಾರಿ---೩ಜಿಪಿಟಿ೩ಬಂಡೀಪುರ ಪರಿಸರ ಸೂಕ್ಷ್ಮ ವಲಯದ ಕಂಟ್ರಿ ಕ್ಲಬ್‌ನಲ್ಲಿ ಜ.೩೦ರಂದು ಅಕ್ರಮ ಕಟ್ಟಡ ನಿರ್ಮಿಸುವಾಗ ತೆಗೆದ ಚಿತ್ರ.೨ಜಿಪಿಟಿ೪ಜ.೩೧ರಂದು ಕಂಟ್ರಿ ಕ್ಲಬ್‌ ಅನುಮತಿಯಿಲ್ಲದೇ ಕಟ್ಟಡ ನಿರ್ಮಿಸುತ್ತಿದೆ ಎಂದು ಕನ್ನಡಪ್ರಭ ವರದಿ ಮಾಡಿತ್ತು.೩ಜಿಪಿಟಿ೫ಶ್ರೀರೂಪ